For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಟ್ವಿಟ್ಟರ್ ಗೆ ಬಂದು 10 ವರ್ಷ: ಇನ್ನೂ ಬದಲಾಗಿಲ್ಲ ಸಲ್ಲು ಡಿಪಿ

  |

  ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದಾರೆ.ಹಾಗೆ ಟ್ವಿಟ್ಟರ್ ನಲ್ಲಿಯೂ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಸೆಲೆಬ್ರಿಟಿಗಳಲ್ಲಿ ಸಲ್ಲು ಕೂಡ ಒಬ್ಬರು. ಸಲ್ಮಾನ್ ಖಾನ್ ಒಂದು ಪೋಸ್ಟ್ ಮಾಡಿದರೆ ಸಾಕು ಕ್ಷಣಾರ್ಧದಲ್ಲಿ ವೈರಲ್ ಆಗುತ್ತೆ. ಸಾಮಾಜಿಕ ಜಾಲತಾಣದಲ್ಲಿ ಆಕ್ವೀಟ್ ಆಗಿರುವ ಸಲ್ಲು ಟ್ವಿಟ್ಟರ್ ಲೋಕಕ್ಕೆ ಎಂಟ್ರಿ ಕೊಟ್ಟು 10 ವರ್ಷವಾಗಿದೆ.

  ಕುದುರೆ ಜೊತೆ ತಾನೂ ಹುಲ್ಲು ತಿಂದ ಸಲ್ಮಾನ್ | Salman Khan | With His Horse | Filmibeat kannada

  10 ವರ್ಷದ ಸಂಭ್ರಮವನ್ನು ಸಲ್ಮಾನ್ ಖಾನ್ ಅಭಿಮಾನಿಗಳು ಆಚರಿಸುತ್ತಿದ್ದಾರೆ. 'ಸಲ್ಮಾನ್ ಖಾನ್ ಟ್ವಿಟ್ಟರ್ ಗೆ ಬಂದು 10 ವರ್ಷ' ಎಂದು ಟ್ರೆಂಡ್ ಮಾಡುತ್ತಿದ್ದಾರೆ. ಹೌದು, 10YrsOFSalmanonTwitter ಎಂದು ಹ್ಯಾಶ್ ಟ್ಯಾಗ್ ಬಳಸಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಜೊತೆಗೆ ಸಲ್ಮಾನ್ ಖಾನ್ ಬಗ್ಗೆ ಒಂದಿಷ್ಟು ಇಂಟ್ರಸ್ಟಿಂಗ್ ಸಂಗತಿಯನ್ನು ಅಭಿಮಾನಿಗಳು ಶೇರ್ ಮಾಡಿದ್ದಾರೆ. ಮುಂದೆ ಓದಿ..

  ಪ್ರೀತಿಯ ಕುದುರೆ ಜೊತೆ ಸೊಪ್ಪು ತಿಂದ ಸಲ್ಮಾನ್: ವಿಡಿಯೋ ವೈರಲ್ಪ್ರೀತಿಯ ಕುದುರೆ ಜೊತೆ ಸೊಪ್ಪು ತಿಂದ ಸಲ್ಮಾನ್: ವಿಡಿಯೋ ವೈರಲ್

  ಸಲ್ಮಾನ್ ಖಾನ್ ಮೊದಲ ಟ್ವೀಟ್ ಗೆ 10 ವರ್ಷ

  ನಟ ಸಲ್ಮಾನ್ ಖಾನ್ ಟ್ವಿಟ್ಟರ್ ಗೆ ಎಂಟ್ರಿ ಕೊಟ್ಟು 10 ವರ್ಷವಾಗಿದೆ. ಕಳೆದ 10 ವರ್ಷಗಳ ಹಿಂದೆ ಅಂದರೆ ಏಪ್ರಿಲ್ 13, 2010ರಲ್ಲಿ ಸಲ್ಮಾನ್ ಖಾನ್ ಟ್ವಿಟ್ಟರ್ ಗೆ ಎಂಟ್ರಿ ಕೊಟ್ಟಿದ್ದಾರೆ. ಹೆಚ್ಚು ಫಾಲೋವರ್ಸ್ ಹೊಂದಿರುವ ಸಲ್ಲು ಸಿನಿಮಾ ವಿಚಾರ ಸೇರಿದಂತೆ ಸಾಕಷ್ಟು ಇಂಟ್ರಸ್ಟಿಂಗ್ ಮಾಹಿತಿಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ.

  ಸಲ್ಮಾನ್ ಖಾನ್ ಮೊದಲ ಟ್ವೀಟ್

  ಸಲ್ಮಾನ್ ಖಾನ್ ಟ್ವಿಟ್ಟರ್ ಗೆ ಎಂಟ್ರಿ ಕೊಡುತ್ತಿದ್ದಂತೆ ಮೊದಲ ಟ್ವೀಟ್ ಮಾಡಿದ್ದು ಯಾರಿಗೆ ಮತ್ತು ಏನು ಗೊತ್ತಾ? ಈ ವಿಚಾರವನ್ನು ಸಹ ಅಭಿಮಾನಿಗಳೆ ಬಹಿರಂಗ ಪಡಿಸಿದ್ದಾರೆ. ಹೌದು, ಸಲ್ಮಾನ್ ಖಾನ್ ಮೊದಲು ಟ್ವೀಟ್ ಮಾಡಿದ್ದು ಸಹೋದರ ಅರ್ಬಾಜ್ ಖಾನ್ ಗೆ. "ನನಗೆ ಟ್ವಿಟ್ಟರ್ ಖಾತೆ ತೆರೆಯಲು ಒತ್ತಾಯಿಸಿದ್ದು ಅರ್ಬಾಜ್ ಖಾನ್" ಎಂದು ಟ್ವೀಟ್ ಮಾಡಿದ್ದರು.

  ಮೂರನೆ ಅತೀ ಹೆಚ್ಚು ಫಾಲೋರ್ವ್ ಹೊಂದಿರುವ ನಟ

  ಅಂದ್ಹಾಗೆ ಸಲ್ಮಾನ್ ಖಾನ್ ಈ 10 ವರ್ಷದಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿದ್ದಾರೆ. ಹೌದು, ಹೆಚ್ಚು ಫಾಲೋವರ್ಸ್ ಹೊಂದಿರುವ 3ನೇ ನಟ ಸಲ್ಲು. ಸದ್ಯ ಸಲ್ಮಾನ್ ಖಾನ್ 39.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

  25,000 ಸಿನಿಮಾ ಕಾರ್ಮಿಕರಿಗೆ ಸಹಾಯ ಮಾಡಲು ಮುಂದಾದ ಸಲ್ಮಾನ್ ಖಾನ್25,000 ಸಿನಿಮಾ ಕಾರ್ಮಿಕರಿಗೆ ಸಹಾಯ ಮಾಡಲು ಮುಂದಾದ ಸಲ್ಮಾನ್ ಖಾನ್

  ಸಲ್ಮಾನ್ ಖಾನ್ ಬಳಿ ಇರುವ ಸಿನಿಮಾಗಳು

  ಸಲ್ಮಾನ್ ಖಾನ್ ಬಳಿ ಇರುವ ಸಿನಿಮಾಗಳು

  ಸಲ್ಮಾನ್ ಖಾನ ಸದ್ಯ ರಾಧೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭು ದೇವ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಸಲ್ಲು ಜೊತೆ ನಾಯಕಿಯಾಗಿ ದಿಶಾ ಪಟಾನಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಕಬಿ ಈದ್ ಕಬಿ ದಿವಾಳಿ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ.

  English summary
  Bollywood Actor Salman Khan completed 10 years in Twitter. He has not changed his Profile picture.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X