Don't Miss!
- Sports
ಮುಂಬೈ ವಿರುದ್ಧ ಸೋಲು; ಪಂತ್ ನಾಯಕತ್ವದ ಬಗ್ಗೆ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದೇನು?
- News
ಯಶಸ್ವಿಯಾಗಿ ಪೂರ್ಣಗೊಂಡ ನೀಟ್ ಪಿಜಿ 2022 ಪರೀಕ್ಷೆ
- Education
CUET 2022 Registration : ಪರೀಕ್ಷೆಗೆ ನೊಂದಾಯಿಸಿಕೊಳ್ಳಲು ಇಂದು ಕೊನೆಯ ದಿನ
- Automobiles
ಕೆಟಿಎಂ ಡ್ಯೂಕ್ 390 ಪ್ರತಿಸ್ಪರ್ಧಿ 2022ರ ಕಿಮ್ಕೊ ಕೆ ರೈಡರ್ 400 ಬೈಕ್ ಅನಾವರಣ
- Finance
ಟಾಪ್ 10 ಕಂಪನಿಗಳ ಪೈಕಿ 5 ಕಂಪನಿ ಮೌಲ್ಯ 1.78 ಲಕ್ಷ ಕೋಟಿ ಏರಿಕೆ
- Lifestyle
ಮೇ 22ರಿಂದ ರಿಂದ ಮೇ 28ರ ವಾರ ಭವಿಷ್ಯ: ಈ ರಾಶಿಯ ಉದ್ಯೋಗಿಗಳು ಯಾವುದೇ ಕೆಲಸದಲ್ಲೂ ನಿರ್ಲಕ್ಷ್ಯ ಮಾಡಬೇಡಿ
- Technology
ಟ್ರೂಕಾಲರ್ ಮಾದರಿಯ ಹೊಸ ಕಾಲರ್ ಐಡಿ ಫೀಚರ್ಸ್ ಪರಿಚಯಿಸಲು ಟ್ರಾಯ್ ಸಿದ್ಧತೆ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಲ್ಮಾನ್ ಖಾನ್ ಹುಟ್ಟುಹಬ್ಬಕ್ಕೆ ಕತ್ರಿನಾ, ಸಂಜಯ್ ದತ್, ಶಿಲ್ಪಾ ಶೆಟ್ಟಿಯಿಂದ ಸಿಕ್ಕಿತು ದುಬಾರಿ ಗಿಫ್ಟ್
ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ಗೆ ವಿಶ್ವದ ಮೂಲೆ ಮೂಲೆಯಲ್ಲೂ ಅಭಿಮಾನಿಗಳಿದ್ದಾರೆ. ಬಾಲಿವುಡ್ ಸೂಪರ್ಸ್ಟಾರ್ ಸಿನಿಮಾಗಳಿಗೆ, ಅಭಿನಯಕ್ಕೆ ಮಾರು ಹೋಗಿರುವ ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಲೇ ಇದೆ. ಬಾಲಿವುಡ್ನಲ್ಲೂ ಸಲ್ಮಾನ್ ಖಾನ್ಗೆ ಇಷ್ಟಪಡುವ ತಾರೆಯರಿಗೇನು ಕಮ್ಮಿ ಇಲ್ಲ. ಅದಕ್ಕೆ ಇತ್ತೀಚೆಗೆ 56ನೇ ಹಟ್ಟುಹಬ್ಬ ಆಚರಿಸಿಕೊಂಡ ಸಲ್ಮಾನ್ ಖಾನ್ಗೆ ಲಕ್ಷ, ಕೋಟಿಗಳ ಲೆಕ್ಕದಲ್ಲಿ ಉಡುಗೊರೆ ಹರಿದು ಬಂದಿದೆ.
ಸಲ್ಮಾನ್ ಖಾನ್ ತನ್ನ ಹುಟ್ಟುಹಬ್ಬಕ್ಕೆ ಒಂದು ದಿನ ಮುನ್ನ ಹಾವಿನಿಂದ ಕಚ್ಚಿಸಿಕೊಂಡಿದ್ದರೂ, ಬಹುಬೇಗನೇ ಗುಣಮುಖರಾಗಿದ್ದರು. ಬಳಿಕ ಅದೇ ಫಾರ್ಮ್ ಹೌಸ್ನಲ್ಲಿ ಪಾರ್ಟಿ ಆಯೋಜಿಸಿದ್ದರು. ಬಾಲಿವುಡ್ ಮೂಲಗಳ ಪ್ರಕಾರ, ಸಲ್ಮಾನ್ ಖಾನ್ಗೆ ದುಬಾರಿ ಉಡುಗೊರೆಗಳೇ ಹರಿದು ಬಂದಿವೆ. ಕತ್ರಿನಾ ಕೈಫ್, ಶಿಲ್ಪಾ ಶೆಟ್ಟಿ, ಅನಿಲ್ ಕಪೂರ್, ಜಾಕ್ವೆಲೀನ್ ಫರ್ನಾಂಡೀಸ್, ಅರ್ಬಾಜ್ ಖಾನ್ ಸೇರಿದಂತೆ ಹಲವರು ಲಕ್ಷ, ಕೋಟಿ ಲೆಕ್ಕದಲ್ಲಿ ಹುಟ್ಟುಹಬ್ಬದ ಉಡುಗೊರೆಯನ್ನು ನೀಡಿದ್ದಾರೆ. ಸಲ್ಮಾನ್ ಖಾನ್ ಸಿಕ್ಕ ದುಬಾರಿ ಉಡುಗೊರೆಗಳ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ.

ಕತ್ರಿನಾಳಿಂದ 3 ಲಕ್ಷದ ಗೋಲ್ಡ್ ಬ್ರೇಸ್ಲೆಟ್
ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕತ್ರಿನಾ ಕೈಫ್ ತನ್ನ ಚಿತ್ರರಂಗದ ಗಾಡ್ಫಾದರ್ ಸಲ್ಮಾನ್ ಖಾನ್ಗೆ ದುಬಾರಿ ಉಡುಗೊರೆಯನ್ನೇ ನೀಡಿದ್ದಾರೆ. ವಿವಾಹದ ಬಳಿಕವೂ ಉತ್ತಮ ಸಂಬಂಧ ಹೊಂದಿರುವ ಕತ್ರಿನಾ ಕೈಫ್, ಸಲ್ಮಾನ್ ಖಾನ್ಗೆ ಬಂಗಾರ ಬ್ರೇಸ್ಲೆಟ್ ನೀಡಿದ್ದಾರೆ. ಇದರ ಬೆಲೆ ಬರೋಬ್ಬರಿ 2 ರಿಂದ 3 ಲಕ್ಷ ಎನ್ನಲಾಗಿದೆ.

ಜಾಕ್ವೆಲಿನ್ರಿಂದ 10 ಲಕ್ಷ ಮೌಲ್ಯದ ಗಿಫ್ಟ್
ಶ್ರೀಲಂಕಾದ ಬ್ಯೂಟಿ, ಇತ್ತೀಚೆಗೆ 200 ಕೋಟಿ ವಂಚಕ ಸುಕೇಶ್ ಚಂದ್ರಶೇಖರ್ ಕೇಸ್ನಲ್ಲಿ ತಗಲಾಕಿಕೊಂಡಿರುವ ಜಾಕ್ವೆಲಿನ್ ಫರ್ನಾಂಡಿಸ್ ದುಬಾರಿ ಮೊತ್ತದ ಉಡುಗೊರೆಯನ್ನು ನೀಡಿದ್ದಾರೆ. ಸಲ್ಮಾನ್ ಖಾನ್ ಜೊತೆ ಉತ್ತಮ ಸಂಬಂಧವಿಟ್ಟುಕೊಂಡಿರುವ ಜಾಕ್ವೆಲಿನ್, ಹುಟ್ಟುಹಬ್ಬದ ಉಡುಗೊರೆಯಾಗಿ 10 ರಿಂದ 12 ಲಕ್ಷ ಮೊತ್ತದ ಚೊಪರ್ಡ್ ಬ್ರ್ಯಾಂಡ್ನ ವಾಚ್ ಅನ್ನು ನೀಡಿದ್ದಾರೆ ಎಂದು ವರದಿಯಾಗಿದೆ.

ಶಿಲ್ಪಾ ಶೆಟ್ಟಿಯಿಂದ 16 ಲಕ್ಷ ಮೊತ್ತ ಗಿಫ್ಟ್
ಬಾಲಿವುಡ್ ನಟಿಯರೊಂದಿಗೆ ಸಲ್ಮಾನ್ ಖಾನ್ ಉತ್ತಮ ಬಾಂದವ್ಯ ಹೊಂದಿದ್ದಾರೆ. ಅಂತಹ ನಟಿಯರಲ್ಲಿ ಶಿಲ್ಪಾ ಶೆಟ್ಟಿ ಕೂಡ ಒಬ್ಬರು. ಈ ನಟಿ ಸಲ್ಮಾನ್ ಖಾನ್ ಹುಟ್ಟುಹಬ್ಬಕ್ಕೆ 16 ರಿಂದ 17 ಲಕ್ಷದ ವ್ರಜ್ರದ ಬ್ರೇಸ್ಲೆಟ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ ಎನ್ನಲಾಗಿದೆ.

ಅನಿಲ್, ಸಂಜಯ್ ದುಬಾರಿ ಗಿಫ್ಟ್
ಸಲ್ಮಾನ್ ಖಾನ್ರನ್ನು ಇಷ್ಟ ಪಡುವ ನಟರಲ್ಲಿ ಬಾಲಿವುಡ್ ನಟರ ದೊಡ್ಡ ಪಟ್ಟಿಯಲ್ಲಿ ಅನಿಲ್ ಕಪೂರ್ ಹಾಗೂ ಸಂಜಯ್ ದತ್ ಕೂಡ ಇದ್ದಾರೆ. ಹೀಗಾಗಿ ಸಲ್ಮಾನ್ ಖಾನ್ ಹುಟ್ಟುಹಬ್ಬಕ್ಕೆ ಅನಿಲ್ ಕಪೂರ್ 27 ರಿಂದ 28 ಲಕ್ಷ ಬೆಲೆ ಬಾಳುವ ಲೆದರ್ ಜಾಕೆಟ್ ಅನ್ನು ನೀಡಿದ್ದರೆ, ಇತ್ತ ಕೆಜಿಎಫ್ 2 ಸಿನಿಮಾದ ಅಧೀರ ಸಂಜಯ್ ದತ್ 7 ರಿಂದ 8 ಲಕ್ಷ ಬೆಲೆ ಬಾಳುವ ಡೈಮಂಡ್ ಬ್ರೇಸ್ಲೆಟ್ ನೀಡಿದ್ದಾರೆ.

ಸಲ್ಮಾನ್ ಕುಟುಂಬದಿಂದ ಕೋಟಿ ಲೆಕ್ಕದ ಉಡುಗೊರೆ
ಸಲ್ಮಾನ್ ಸಹೋದರರಾದ ಸೊಹೇಲ್ ಖಾನ್ ಹಾಗೂ ಅರ್ಬಾಜ್ ಖಾನ್ ಲಕ್ಷ, ಕೋಟಿ ಲೆಕ್ಕದಲ್ಲಿ ಉಡುಗೊರೆ ನೀಡಿದ್ದಾರೆ. ಸೋಹೆಲ್ ಖಾನ್, 25 ಲಕ್ಷದ BMW S 1000 RR ಕಾರನ್ನು ಗಿಫ್ಟ್ ಮಾಡಿದ್ದರೆ, ಇತ್ತ ಅರ್ಬಾಜ್ ಖಾನ್ 2 ಕೋಟಿ ಬೆಲೆಯ Audi RS Q8 ಕಾರನ್ನು ನೀಡಿದ್ದಾರೆ. ತಂದೆ ಸಲೀಂ ಖಾನ್ ಮಗನಿಗಾಗಿ ಮುಂಬೈನ ಜುಹುವಿನಲ್ಲಿ 12 ಕೋಟಿ ಮೌಲ್ಯದ ಅಪಾರ್ಟ್ಮೆಂಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ಸಲ್ಮಾನ್ ಹುಟ್ಟುಹಬ್ಬಕ್ಕೆ ಸಿಕ್ಕ ಅತೀ ದುಬಾರಿ ಉಡುಗೊರೆ. ಇನ್ನು ಸಹೋದರಿ ಅರ್ಪಿತಾ ಖಾನ್ ಕೂಡ 15 ಲಕ್ಷ ಮೌಲ್ಯದ ರೊಲೆಕ್ಸ್ ವಾಚ್ ನೀಡಿದ್ದಾರೆ ಎಂದು ಬಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ.