For Quick Alerts
  ALLOW NOTIFICATIONS  
  For Daily Alerts

  ಹೃದಯ ಕರಗಿಸುತ್ತದೆ 'ವಿಶೇಷ' ಮಕ್ಕಳೊಂದಿಗೆ ಸಲ್ಮಾನ್ ಖಾನ್ ಮಾಡಿದ ನೃತ್ಯ

  |

  ಮಕ್ಕಳ ಎದುರು ಮಗುವಾಗಿಬಿಡುತ್ತಾರೆ ಸಲ್ಮಾನ್ ಖಾನ್. ಮಕ್ಕಳೊಂದಿಗೆ ಸಲ್ಮಾನ್ ಆಟವಾಡುತ್ತಿರುವ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿವೆ.

  ಸಲ್ಮಾನ್ ಖಾನ್ ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿದ್ದು ವಿಡಿಯೋದಲ್ಲಿ 'ವಿಶೇಷ' ಮಕ್ಕಳೊಂದಿಗೆ ಸಲ್ಮಾನ್ ಖಾನ್ ನೃತ್ಯ ಮಾಡುತ್ತಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.

  ಸಲ್ಮಾನ್ ಖಾನ್‌ರ ಆಪ್ತ ನಟಿ, ರಾಜಕಾರಣಿ ಬಿನಾ ಕಾಕ್ ಸ್ಥಾಪಿಸಿರುವ ವಿಶೇಷ ಮಕ್ಕಳ ಶಾಲೆ ಉಮಂಗ್ ಗೆ ಇತ್ತೀಚೆಗೆ ಭೇಟಿ ನೀಡಿದ್ದ ಸಲ್ಮಾನ್ ಖಾನ್ ಅಲ್ಲಿನ ಮಕ್ಕಳೊಂದಿಗೆ ಹಾಡಿ-ಕುಣಿದಿದ್ದಾರೆ. ಮಕ್ಕಳು ಸಹ ಸಲ್ಮಾನ್ ಜೊತೆಗೂಡಿ ಕುಣಿದಿದ್ದಾರೆ. ಈ ಸುಂದರ ದೃಶ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ ಸಲ್ಮಾನ್ ಖಾನ್.

  ಉಮಂಗ್ ಹೆಸರಿನ ವಿಶೇಷ ಮಕ್ಕಳ ಶಾಲೆಗೆ ಭೇಟಿ ನೀಡಿದ್ದ ಸಲ್ಮಾನ್ ಖಾನ್, 'ವಿಶೇಷ ಮಕ್ಕಳೊಂದಿಗೆ ನೃತ್ಯ ಮಾಡಿದೆ. ನಿಮಗೆಲ್ಲಾ ಆ ದೇವರು ಪ್ರೀತಿ, ಆಶೀರ್ವಾದ ನೀಡಲಿ' ಎಂದು ಬರೆದುಕೊಂಡಿದ್ದಾರೆ. 'ಡೌನ್ ಸಿಂಡ್ರೋಮ್ ಡೇ' ದಿನದಂದು ಸಲ್ಮಾನ್ ಖಾನ್ ವಿಶೇಷ ಮಕ್ಕಳ ಶಾಲೆಗೆ ಭೇಟಿ ನೀಡಿದ್ದರು.

  ಬಿನಾ ಕಾಕಾ ಸಹ ಇದೇ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, 'ಉಮಂಗ್ ನ ಮಕ್ಕಳು ಅವರ 'ಭಾಯ್' ಅನ್ನು ಪ್ರೀತಿಸುತ್ತಾರೆ. ಆ ಮಕ್ಕಳ ಮುಖದಲ್ಲಿ ಸಂತಸ ಮೂಡಿಸಿದ್ದಕ್ಕೆ ಬಹಳ ಧನ್ಯವಾದಗಳು. ಅವರು ಸಹ ಸಾಮಾನ್ಯ ಮಕ್ಕಳಂತೆ ಎಂದು ಅವರು ಅಂದುಕೊಳ್ಳುವಂತೆ ಮಾಡಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ ಬಿನಾ.

  Asha Bhat ರಾಬರ್ಟ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದು ಹೇಗೆ?? | Filmibeat Kannada

  ಸಲ್ಮಾನ್ ಖಾನ್ ಅವರ ಈ ವಿಡಿಯೋಕ್ಕೆ ಸಾವಿರಾರು ಲೈಕ್‌, ಕಮೆಂಟ್‌ಗಳು ಬಂದಿವೆ. 'ಬಾಲಿವುಡ್‌ನ ನಿಜವಾದ ಕರುಣಾಮಯಿ ನಟ ಸಲ್ಮಾನ್ ಖಾನ್. ಆದರೂ ಯಾಕೆ ಕೆಲವರು ಸಲ್ಮಾನ್ ಖಾನ್ ಅನ್ನು ಕೆಟ್ಟದಾಗಿ ಬಿಂಬಿಸುತ್ತಾರೆ' ಎಂದು ಹಲವರು ಕಮೆಂಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.

  English summary
  Salman Khan danced with special kids of Umang. Posted that beautiful video on Instagram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X