»   » ಸಲ್ಮಾನ್ ಬಗ್ಗೆ 'ಎಬಿಸಿಡಿ' ನಿರ್ದೇಶಕನಿಂದ ಹೊರಬಿತ್ತು ಆಶ್ಚರ್ಯಕರ ಹೇಳಿಕೆ!

ಸಲ್ಮಾನ್ ಬಗ್ಗೆ 'ಎಬಿಸಿಡಿ' ನಿರ್ದೇಶಕನಿಂದ ಹೊರಬಿತ್ತು ಆಶ್ಚರ್ಯಕರ ಹೇಳಿಕೆ!

Posted By:
Subscribe to Filmibeat Kannada

ಕೊರಿಯೋಗ್ರಾಫರ್ ಮತ್ತು ಫಿಲ್ಮ್‌ ಮೇಕರ್ ರೆಮೋ ಡಿಸೋಜಾ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜೊತೆ ಹಲವು ಸಿನಿಮಾಗಳಿಗಾಗಿ ವರ್ಕ್ ಮಾಡಿದ್ದಾರೆ. ಇವರು ಈಗ ಸಲ್ಲು ಬಗ್ಗೆ ಒಂದು ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ.

ಅದೇನಂದ್ರೆ ಸಲ್ಮಾನ್ ಖಾನ್ ತಾವು ಡ್ಯಾನ್ಸ್ ರಿಹರ್ಸಲ್ ನಲ್ಲಿ ನಂಬಿಕೆ ಇಟ್ಟಿಲ್ಲ. ಒಬ್ಬ ಕ್ವಿಕ್ ಲರ್ನರ್ ಆಗಿ ಎಂತಹ ಸ್ಟೆಪ್‌ಗಳನ್ನಾದರು ಕೆಲವೇ ನಿಮಿಷಗಳಲ್ಲಿ ತಿಳಿದುಕೊಂಡು ಶೂಟ್ ಗೆ ಬರುತ್ತಾರೆ ಎಂದು 'ಎಬಿಸಿಡಿ' ಚಿತ್ರದ ಖ್ಯಾತ ನಿರ್ದೇಶಕ ರೆಮೋ ಡಿಸೋಜಾ ಹೇಳಿದ್ದಾರೆ. ಡ್ಯಾನ್ಸ್ ಅಭ್ಯಾಸಕ್ಕಾಗಿ ಅಂತಲೇ ಯಾವಾಗಲು ಚಿತ್ರಸೆಟ್ ಗೆ ಬರುವುದಿಲ್ಲ. ಸಾಂಗ್ ಶೂಟಿಂಗ್ ಗೆ ಯಾವುದೇ ರೀತಿಯ ಸ್ಟೆಪ್ ಗಳಾದರೂ ಸಹ ಗರಿಷ್ಠ 15 ನಿಮಿಷಗಳಲ್ಲಿ ಅರ್ಥಮಾಡಿಕೊಳ್ಳುತ್ತಾರೆ. ಅವರು ತುಂಬಾ ಫಾಸ್ಟ್ ಲರ್ನರ್ ಎಂದಿದ್ದಾರೆ ರೆಮೋ.

Salman Khan Doesn't Need Rehearsals: Remo D'Souza

ಸಲ್ಮಾನ್ ಖಾನ್ ಬಗ್ಗೆ ಮಾತನಾಡುತ್ತ, "ನಾನು ಹಲವು ಸಿನಿಮಾಗಳಲ್ಲಿ ಅವರ ಜೊತೆ ವರ್ಕ್ ಮಾಡಿದ್ದೇನೆ. ಹಾಗೆ ಅವರಿಗೆ ಕೊರಿಯೋಗ್ರಫಿ ಮಾಡಿದ್ದಾನೆ. ಅವರು ಯಾವಾಗಲು ಡ್ಯಾನ್ಸ್ ರಿಹರ್ಸಲ್ ಮಾಡುವುದಿಲ್ಲ. ಅದಕ್ಕಾಗಿ ಅವರು ಬರುವುದಿಲ್ಲ. ನೃತ್ಯ ಅಭ್ಯಾಸಕ್ಕಾಗಿ ಬರದ ಒಬ್ಬರೇ ಆಕ್ಟರ್ ಎಂದರೇ ಸಲ್ಮಾನ್ ಖಾನ್. ನಾನು ನನ್ನ ವರ್ಕ್ ನಲ್ಲಿ ಯಾವಾಗಲು ಕಾಂಪ್ರೊಮೈಸ್ ಮಾಡಿಕೊಳ್ಳುವುದಿಲ್ಲ. 'ಭಜರಂಗಿ ಭಾಯ್‌ಜಾನ್' ಚಿತ್ರದ 'ಸೆಲ್ಫಿ' ಸಾಂಗ್ ಗೆ ಒಂದೇ ಟೇಕ್ ನಲ್ಲಿ ಒಂದು ಸೀನ್ ಬೇಕಿತ್ತು. ಈ ಬಗ್ಗೆ ಅವರಿಗೆ ಹೇಳಿದೆ. ಆಗ ಏಕೆ? ಕಟ್ ಮಾಡಿ ಮಾಡಲು ಆಗುವುದಿಲ್ಲವೇ ಎಂದಿದ್ದರು. ನಾನು ನೋ ಸರ್.. ಅದು ಒಂದೇ ಟೇಕ್ ನಲ್ಲಿ ಮಾತ್ರ ಚೆನ್ನಾಗಿ ಬರುವುದು ಎಂದಿದ್ದೆ. ನಂತರ ಅವರು ಓಕೆ ಎಂದು ಹಾಗೆ ಉತ್ತಮವಾಗಿ ಆ ಸೀನ್ ಮಾಡಿದ್ದರು" ಎಂದು ರೆಮೋ ಐಎಎನ್‌ಎಸ್ ಜೊತೆ ಹಂಚಿಕೊಂಡಿದ್ದಾರೆ.

ರೆಮೋ ಡಿಸೋಜಾ ಸಲ್ಮಾನ್ ಖಾನ್ ರ 'ಟ್ಯೂಬ್‌ ಲೈಟ್' ಚಿತ್ರದ ರೇಡಿಯೋ ಸಾಂಗ್ ಗೂ ಕೊರಿಯೋಗ್ರಫಿ ಮಾಡಿದ್ದಾರೆ. ಈ ಚಿತ್ರವನ್ನು ಕಬೀರ್ ಖಾನ್ ನಿರ್ದೇಶನ ಮಾಡಿದ್ದಾರೆ.['ಎಬಿಸಿಡಿ 3'ಗಾಗಿ ಮತ್ತೆ ಒಂದಾಗುತ್ತಿದ್ದಾರೆ ಸಲ್ಮಾನ್-ಜಾಕ್ವೆಲಿನ್]

English summary
Choreographer-filmmaker Remo D'Souza, who has worked with Bollywood superstar Salman Khan in various projects, says the actor doesn't believe in doing rehearsals as being a "quick learner", he likes to know his moves just a few minutes before the shoot.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada