ಕೊರೊನಾ ವೈರಸ್ ಭೀತಿ: ಸಲ್ಮಾನ್ ಖಾನ್ ಹೋಮ್ ಕ್ವಾರಂಟೈನ್
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್‌ಗೆ ಕೊರೊನಾ ವೈರಸ್ ಭೀತಿ ಎದುರಾಗಿದೆ. ಕಾರ್ ಡ್ರೈವರ್ ಮತ್ತು ಇಬ್ಬರು ಸಿಬ್ಬಂದಿಗೆ ಕೊರೊನಾ ವೈರಸ್ ದೃಢಪಟ್ಟಿದ್ದು, ಸಲ್ಮಾನ್ ಖಾನ್‌ಗೆ ಆತಂಕ ಎದುರಾಗಿದೆ.
ಹೀಗಾಗಿ, ಮುಂಜಾಗ್ರತೆಯಿಂದ ಬ್ಯಾಡ್‌ಬಾಯ್ ಸಲ್ಲು ಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸೋಂಕಿತ ಸಿಬ್ಬಂದಿಯನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಲ್ಲು ಮತ್ತು ಕುಟುಂಬ ಸದಸ್ಯರು ಹದಿನಾಲ್ಕು ದಿನಗಳ ಕಾಲ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ.
ಸದ್ಯದಲ್ಲೇ ಸಲ್ಲು ಮನೆಯಲ್ಲಿ ವಿವಾಹ ಮಹೋತ್ಸವ ಕಾರ್ಯಕ್ರಮ ನಿಗದಿಯಾಗಿತ್ತು. ಸಲೀಂ ಖಾನ್ ಮತ್ತು ಸಲ್ಮಾ ಖಾನ್ ಮದುವೆ ನಿಶ್ಚಿಯವಾಗಿತ್ತು. ಕೊರೊನಾ ಭೀತಿ ಎದುರಾಗಿರುವ ಹಿನ್ನೆಲೆ ಈ ಕಾರ್ಯಕ್ರಮಕ್ಕೆ ಸದ್ಯಕ್ಕೆ ಸ್ಥಗಿತವಾಗಿದೆ.

ಸದ್ಯ ತಮ್ಮ ಫಾರ್ಮ್ ಹೌಸ್‌ನಲ್ಲಿ ಸಲ್ಮಾನ್ ಖಾನ್ ಉಳಿದುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಈ ಹಿಂದೆ ಕೆಲವು ದಿನಗಳ ಕಾಲ ಜಾಕ್‌ಲೀನ್ ಫರ್ನಾಂಡಿಸ್ ಸಹ ಇದೇ ಫಾರ್ಮ್ ಹೌಸ್‌ನಲ್ಲಿ ಇದ್ದರು.
ಪ್ರಭುದೇವ ನಿರ್ದೇಶನದ ರಾಧೇ ಸಿನಿಮಾದಲ್ಲಿ ಸಲ್ಲು ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸ್ವತಃ ಸಲ್ಮಾನ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ. ಸಲ್ಲುಗೆ ಜೋಡಿಯಾಗಿ ದಿಶಾ ಪಟಾನಿ ಕಾಣಿಸಿಕೊಳ್ಳುತ್ತಿದ್ದು, ರಣ್‌ದೀಪ್ ಹೂಡ, ಜಾಕಿ ಶ್ರಾಫ್ ಸಹ ಪ್ರಮುಖ ಪಾತ್ರದಲ್ಲಿ ಇರಲಿದ್ದಾರೆ.


Click it and Unblock the Notifications











