ಟ್ರ್ಯಾಕ್ಟರ್ ಹತ್ತಿ ಭತ್ತದ ಗದ್ದೆ ಉಳುಮೆ ಮಾಡುತ್ತಿರುವ ಸಲ್ಮಾನ್ ಖಾನ್ ವಿಡಿಯೋ ವೈರಲ್

ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗುತ್ತಿದ್ದಾರೆ. ಸುಶಾಂತ್ ಸಿಂಗ್ ಸಾವಿಗೆ ಸಲ್ಮಾನ್ ಕೂಡ ಕಾರಣರಾದ್ದಾರೆ, ಸುಶಾಂತ್ ಗೆ ಸಿಗಬೇಕಿದ್ದ ಸಿನಿಮಾ ಅವಕಾಶಗಳನ್ನು ಸಲ್ಮಾನ್ ಖಾನ್ ತಪ್ಪಿಸಿದ್ದಾರೆ ಎನ್ನುವ ಆರೋಪ ಸಲ್ಮಾನ್ ವಿರುದ್ಧ ಕೇಳಿ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಹಾಕಿದ್ರು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

Recommended Video

Jogi Prem : ಅಮ್ಮನನ್ನು ನೆನೆದು ಭಾವುಕರಾದ ಪ್ರೇಮ್ | Filmibeat Kannada

ಆದರೆ ಇದ್ಯಾವುದಕ್ಕು ತಲೆಕೆಡಿಸಿಕೊಳ್ಳದ ಸಲ್ಮಾನ್ ತನ್ನ ಫಾರ್ಮ್ ಹೌಸ್ ನಲ್ಲಿ ಕೃಷಿ ಮಾಡುತ್ತಿದ್ದಾರೆ. ಇತ್ತೀಚಿಗೆ ರೈತರ ಬಗ್ಗೆ ಒಂದು ಪೊಸ್ಟ್ ಹಾಕಿ ಟ್ರೋಲ್ ಆಗಿದ್ದ ಸಲ್ಮಾನ್ ಈಗ ಟ್ರ್ಯಾಕ್ಟರ್ ಹತ್ತಿ ಉಳುಮೆ ಮಾಡುತ್ತಿದ್ದಾರೆ. ಉಳುಮೆ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಮುಂದೆ ಓದಿ...

ಭತ್ತದ ಗದ್ದೆಯಲ್ಲಿ ಸಸಿ ಹಿಡಿದು ಓಡಾಡುತ್ತಿರುವ ನಟ

ಭತ್ತದ ಗದ್ದೆಯಲ್ಲಿ ಸಸಿ ಹಿಡಿದು ಓಡಾಡುತ್ತಿರುವ ನಟ

ಇತ್ತೀಚಿಗೆ ಭತ್ತದ ಗದ್ದೆಯಲ್ಲಿ ಸಸಿಯನ್ನು ಹಿಡಿದು ಓಡಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು. ಫೋಟೋ ಜೊತೆಗೆ 'ಪ್ರತಿ ಅಗಳಿನಲ್ಲಿಯೂ ತಿನ್ನುವವರ ಹೆಸರು ಬರೆದಿರುತ್ತೆ' ಎಂದು ಕ್ಯಾಪ್ಷನ್ ಹಾಕಿದ್ದರು. ಆ ನಂತರ ಮೈಯೆಲ್ಲ ಕೆಸರು ಮಾಡಿಕೊಂಡು 'ರೈತರನ್ನು ಗೌರವಿಸಿ' ಎಂದು ಬರೆದುಕೊಂಡಿದ್ದರು.

ರೈತರನ್ನು ಗೌರವಿಸಿ ಎಂದು ಟ್ರೋಲ್ ಆಗಿದ್ದ ಸಲ್ಮಾನ್

ರೈತರನ್ನು ಗೌರವಿಸಿ ಎಂದು ಟ್ರೋಲ್ ಆಗಿದ್ದ ಸಲ್ಮಾನ್

ಸಲ್ಮಾನ್ ಖಾನ್ ರೈತರನ್ನು ಗೌರವಿಸಿ ಎಂದು ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು. ಮಣ್ಣು ಎಸೆದುಕೊಂಡ ಮಾತ್ರಕ್ಕೆ ನೀವು ರೈತರಾಗುವುದಿಲ್ಲ. ಎಂದು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ಇದರ ಬೆನ್ನಲ್ಲೆ ಈಗ ಟ್ರ್ಯಾಕ್ಟರ್ ಹತ್ತಿ ಗದ್ದೆ ಉಳುಮೆ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಭತ್ತದ ಗದ್ದೆ ಉಳುಮೆ ಮಾಡುತ್ತಿರುವ ಸಲ್ಮಾನ್

ಭತ್ತದ ಗದ್ದೆ ಉಳುಮೆ ಮಾಡುತ್ತಿರುವ ಸಲ್ಮಾನ್

ಸಲ್ಮಾನ್ ವಿಡಿಯೋ ಶೇರ್ ಮಾಡಿ ಕೃಷಿ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಮಳೆಯ ನಡುವೆಯೂ ಸಲ್ಮಾನ್ ಟ್ರ್ಯಾಕ್ಟರ್ ಹತ್ತಿ ಭತ್ತದ ಗದ್ದೆ ಉಳುಮೆ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ರೆ ಇನ್ನೂ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಆದರೆ ಇದ್ಯಾವುದನ್ನು ಲೆಕ್ಕಿಸದೆ ಸಲ್ಲು ತನ್ನ ಫಾರ್ಮ್ ಹೌಸ್ ನಲ್ಲಿ ಕೃಷಿ ಮಾಡುತ್ತ ಸಮಯ ಕಳೆಯುತ್ತಿದ್ದಾರೆ.

ಲಾಕ್ ಡೌನ್ ನಂತರ ಫಾರ್ಮ್ ನಲ್ಲಿಯೆ ಸಲ್ಲು ವಾಸ

ಲಾಕ್ ಡೌನ್ ನಂತರ ಫಾರ್ಮ್ ನಲ್ಲಿಯೆ ಸಲ್ಲು ವಾಸ

ಫಾರ್ಮ್ ಹೌಸ್ ನಲ್ಲಿ ಸಲ್ಮಾನ್ ಖಾನ್ ರೂಮರ್ ಗರ್ಲ್ ಫ್ರೆಂಡ್ ಲುಲಿಯಾ ವಾಂತೂರ್ ಕೂಡ ವಾಸವಿದ್ದಾರೆ. ಜೊತೆಗೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸಲ್ಮಾನ್ ಖಾನ್ ಸ್ನೇಹಿತರು ಫಾರ್ಮ್ ಹೌಸ್ ನಲ್ಲಿದ್ದಾರೆ, ಕೊರೊನಾ ಲಾಕ್ ಡೌನ್ ಆದಗಿಂದ ಸಲ್ಮಾನ್ ಫಾರ್ಮ್ ಹೌಸ್ ನಲ್ಲಿಯೆ ಕಾಲಕಳೆಯುತ್ತಿದ್ದಾರೆ. ಚಿತ್ರೀಕರಣ ಪ್ರಾರಂಭವಾಗುವ ವರೆಗೂ ಸಲ್ಲು ಫಾರ್ಮ್ ನಲ್ಲಿಯೆ ಇರಲಿದ್ದಾರೆ.

More from Filmibeat

English summary
Salman khan drives tractor and farming in his farm house video viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X