'ದಬಾಂಗ್' ಕನ್ನಡ ವರ್ಷನ್ಗೆ ಸಲ್ಮಾನ್ ಖಾನ್ ಡಬ್ ಮಾಡಿದ್ದಾರಾ?
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯಿಸುತ್ತಿರುವ ದಬಾಂಗ್-3 ಕನ್ನಡದಲ್ಲಿ ಡಬ್ಬಿಂಗ್ ಆಗ್ತಿರುವುದು ಗೊತ್ತಿರುವ ವಿಚಾರ. ಆದರೆ ಕನ್ನಡ ವರ್ಷನ್ ದಬಾಂಗ್ ನಲ್ಲಿ ಸಲ್ಮಾನ್ ಖಾನ್ ಪಾತ್ರಕ್ಕೆ ಯಾರೂ ಡಬ್ ಮಾಡಲಿದ್ದಾರೆ ಎಂಬುದು ಕುತೂಹಲ ಹುಟ್ಟಿಸಿತ್ತು.
ಇದೀಗ, ದಬಾಂಗ್ 3 ಕನ್ನಡ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಈ ಮೋಷನ್ ಪೋಸ್ಟರ್ ಟೀಸರ್ ನಲ್ಲಿ ಸಲ್ಲು ಭಾಯ್ ಒಂದು ಡೈಲಾಗ್ ಹೇಳ್ತಾರೆ. 'ಟೈಂ ನಂದು, ತಾರೀಕು ನಂದು'. ಈ ಡೈಲಾಗ್ ಕೇಳಿದ್ರು ಇದು ಪಕ್ಕಾ ಸಲ್ಮಾನ್ ಖಾನ್ ವಾಯ್ಸ್ ಎನ್ನುವಷ್ಟು ಹೋಲಿಕೆಯಾಗಿದೆ. ಇದನ್ನ ಸಲ್ಮಾನ್ ಖಾನ್ ಅವರೇ ಹೇಳಿದ್ದಾರೆ ಎನ್ನಲಾಗಿದೆ.
ಹಾಗಿದ್ರೆ, ದಬಾಂಗ್ ಕನ್ನಡ ವರ್ಷನ್ ಚಿತ್ರಕ್ಕೆ ಖುದ್ದು ಸಲ್ಮಾನ್ ಖಾನ್ ಅವರೇ ಡಬ್ ಮಾಡಿದ್ದಾರಾ ಎಂಬ ನಿರೀಕ್ಷೆ ಹುಟ್ಟಿಕೊಂಡಿದೆ. ಆದರೆ ಅದರ ಬಗ್ಗೆ ಸ್ಪಷ್ಟ ಉತ್ತರ ಇಲ್ಲ. ಸದ್ಯಕ್ಕೆ ಕನ್ನಡ ಮೋಷನ್ ಪೋಸ್ಟರ್ ನೋಡಿದ ಸ್ಯಾಂಡಲ್ ವುಡ್ ಪ್ರೇಕ್ಷಕರು ಬಹಳ ಖುಷಿಯಾಗಿದ್ದಾರೆ. ಸಲ್ಮಾನ್ ಖಾನ್ ಅವರನ್ನ ಕನ್ನಡ ಚಿತ್ರರಂಗಕ್ಕೆ ಸ್ವಾಗತ ಮಾಡುತ್ತಿದ್ದಾರೆ.

ವಿಶೇಷ ಅಂದ್ರೆ ದಬಾಂಗ್-3 ಚಿತ್ರದಲ್ಲಿ ಸಲ್ಮಾನ್ ಖಾನ್ ಎದುರಲ್ಲಿ ಕನ್ನಡದ ಆರಡಿ ಕಟೌಟ್ ಕಿಚ್ಚ ಸುದೀಪ್ ಕೂಡ ನಟಿಸಿದ್ದಾರೆ. ಹಾಗಾಗಿ, ಕನ್ನಡ ಪ್ರೇಕ್ಷಕರಿಗೆ ಇದು ಡಬಲ್ ಧಮಾಕ.
ಕನ್ನಡ ಮೋಷನ್ ಪೋಸ್ಟರ್ ಕುರಿತು ಸುದೀಪ್ ಟ್ವೀಟ್ ಮಾಡಿದ್ದು ''ಮೈ ಡಿಯರ್ ಚುಲ್ ಬುಲ್ ಪಾಂಡೆ ಗೆ ನನ್ನ ಅಪ್ಪುಗೆ ಮತ್ತು ಸಲ್ಯೂಟ್. ನನ್ನ ನಲ್ಮೆಯ ಸಹೋದರ ಸಲ್ಮಾನ್ ಖಾನ್ ಅವರಿಗೆ ಕನ್ನಡ ಇಂಡಸ್ಟ್ರಿಗೆ ಸುಸ್ವಾಗತ'' ಎಂದು ಸ್ವಾಗತಿಸಿದ್ದಾರೆ.
ಪ್ರಭುದೇವ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಡಿಸೆಂಬರ್ 20, 2019 ರಂದು ವರ್ಲ್ಡ್ ವೈಡ್ ದಬಾಂಗ್ ತೆರೆಗೆ ಬರಲಿದೆ.


Click it and Unblock the Notifications











