ಸಲ್ಮಾನ್ ಅಭಿಮಾನಿಗಳಿಗೆ ಸ್ವಾತಂತ್ರ್ಯೋತ್ಸವ ಕೊಡುಗೆ

By Rajendra

ಕಾತುರ, ಕುತೂಹಲದಿಂದ ಎದುರು ನೋಡುತ್ತಿರುವ ನಟ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಸಂತಸದ ಸಂಗತಿ. ಹಾಗೆಯೇ ಕತ್ರಿನಾ ಕೈಫ್ ಅಭಿಮಾನಿಗಳಿಗೂ ಅಷ್ಟೇ. ಅರುವತ್ತಾರನೇ ಸ್ವಾತಂತ್ರ್ಯೋತ್ಸವ ಕೊಡುಗೆಯಾಗಿ 'ಏಕ್ತಾ ಟೈಗರ್' ಚಿತ್ರ ಆಗಸ್ಟ್ 15ರಂದು ತೆರೆಗೆ ಅಪ್ಪಳಿಸುತ್ತಿದೆ.

ರಜಾದಿನವಾದ ಕಾರಣ ಸಹಜವಾಗಿಯೇ ಟಿಕೆಟ್ ಸಿಗುವುದು ಕಷ್ಟ. ಸಿಕ್ಕಿದರೆ ಅದು ಅವರ ಅದೃಷ್ಟ ಎಂದೇ ಹೇಳಬೇಕು. ಈ ಚಿತ್ರದ ಬಗೆಗಿನ ನಿರೀಕ್ಷೆಗಳೂ ಅಷ್ಟೇ ಹೆಚ್ಚಾಗಿವೆ. ಭಾರಿ ಬಜೆಟ್ ಚಿತ್ರವಾದ ಏಕ್ತಾ ಟೈಗರ್ ಚಿತ್ರ ವಿಶ್ವದಾದ್ಯಂತ 3,000 ತೆರೆಗಳನ್ನು ಅಲಂಕರಿಸುತ್ತಿದೆ.

ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಕತ್ರಿನಾ ಹಾಗೂ ಸಲ್ಮಾನ್ ಜೊತೆಯಾಗಿ ಅಭಿನಯಿಸಿರುವ ಚಿತ್ರವಿದು. 2008ರಲ್ಲಿ ತೆರೆಕಂಡ ಯುವರಾಜ್ ಚಿತ್ರ ಇವರಿಬ್ಬರೂ ಜೊತೆಯಾಗಿ ಅಭಿನಯಿಸಿದ ಚಿತ್ರ. ಅದಾದ ಬಳಿಕ ಇಬ್ಬರೂ ನಾನೊಂದು ತೀರ ನೀನೊಂದು ತೀರ ಎಂಬಂತಾಗಿದ್ದರು.

ಕಬೀರ್ ಖಾನ್ ನಿರ್ದೇಶನದ ಈ ಚಿತ್ರನ್ನು ಆದಿತ್ಯ ಚೋಪ್ರಾ ನಿರ್ಮಿಸಿದ್ದಾರೆ. ಎರಡು ಗುಪ್ತಚರ ಇಲಾಖೆಗಳ ಸುತ್ತ ಏಕ್ತಾ ಟೈಗರ್ ಚಿತ್ರದ ಕತೆ ಸುತ್ತುತ್ತದೆ. ಅವು ಭಾರತದ RAW (Research and Analysis Wing) ಹಾಗೂ ಪಾಕಿಸ್ತಾನದ ISI (Inter-Services Intelligence). ಅದರಲ್ಲೂ ಪಾಕಿಸ್ತಾನದ ಐಎಸ್ಐ ಸಂಸ್ಥೆಯನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಪಾಕ್ ಭಾವಿಸಿದೆ.

ಈ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಮೋಹಕ ತಾರೆ ಕತ್ರಿಕಾ ಕೈಫ್ ಐಟಂ ಹಾಡು. 'ಶೀಲಾ ಕಿ ಜವಾನಿ' ಹಾಗೂ 'ಚಿಕ್ನಿ ಚಮೋಲಿ' ಹಾಡುಗಳ ಬಳಿಕ ಈ ಹಾಡಿನ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆಗಳಿವೆ.

ಏಕ್ತಾ ಟೈಗರ್' ಚಿತ್ರದಲ್ಲಿ ಕತೆ ಎಷ್ಟು ಮುಖ್ಯವೋ ಈ ಹಾಡಿಗೂ ಅಷ್ಟೇ ಪ್ರಾಮುಖ್ಯತೆ ನೀಡಲಾಗಿದೆಯಂತೆ. ಕತ್ರಿನಾ ಮೋಹಕ ಕುಣಿತಕ್ಕೆ ಕ್ಲೀನ್ ಬೌಲ್ಡ್ ಆಗಿರುವುದಾಗಿ ಸ್ವತಃ ಸಲ್ಲು ಹೇಳಿಕೊಂಡಿದ್ದಾನೆ. "ಮಾಷಾ ಅಲ್ಲಾ..." ಎಂಬ ಹಾಡು ವಾಜಿದ್ ಆಲಿ ಹಾಗೂ ಶ್ರೇಯಾ ಘೋಶಾಲ್ ಅವರ ಕಂಠಸಿರಿಯಲ್ಲಿ ಹೊರಹೊಮ್ಮಿದ್ದು ಸೊಹೈಲ್ ಸೇನ್ ಸಂಗೀತ ಸಂಯೋಜಿಸಿದ್ದಾರೆ.

ಟ್ರಿನಿಟಿ ಕಾಲೇಜಿನ ಪ್ರೊಫೆಸರ್ ಭಾರತದ ಕ್ಷಿಪಣಿ ತಂತ್ರಜ್ಞಾನವನ್ನು ಪಾಕ್ ಗೆ ರಹಸ್ಯವಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ಗುಪ್ತ ಮಾಹಿತಿ ಸಿಗುತ್ತದೆ. ಇದನ್ನು ತನಿಖೆ ಮಾಡಲು ಸರ್ಕಾರ ಸೀಕ್ರೆಟ್ ಏಜೆಂಟ್ ಟೈಗರ್ (ಸಲ್ಮಾನ್ ಖಾನ್) ಕಳುಹಿಸುತ್ತದೆ.

ಆದರೆ ಟೈಗರ್ ತನಿಖೆ ಮಾಡ ಮಾಡುತ್ತಾ ಬಂಗಾರ ಜಿಂಕೆಯ ಪ್ರೇಮದ ಬಲೆಗೆ ಬೀಳುತ್ತಾನೆ. ಆ ಬಂಗಾರದ ಜಿಂಕೆ ಬೇರಾರು ಅಲ್ಲ ಪ್ರೊಫೆಸರ್ ಮಗಳು (ಕತ್ರಿನಾ ಕೈಫ್). ಟೈಗರ್ ಕತೆ ಮುಂದೇನಾಗುತ್ತದೆ ಎಂಬ ಕುತೂಹಲದಲ್ಲಿ ಚಿತ್ರ ಸಾಗುತ್ತದೆ. (ಏಜೆನ್ಸೀಸ್)

More from Filmibeat

English summary
Salman Khan and Katrina Kaif starrer big budget film "Ek Tha Tiger" is all set to hit the silver screens tomorrow (August 15, 2012). The movie is releasing tomorrow across 3,000 screens worldwide.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X