»   » ಸಲ್ಮಾನ್ 'ಟೈಗರ್' ಸ್ಟಂಟ್ ಅನುಕರಿಸಲು ಹೋಗಿ ಜೀವ ತೆತ್ತ!

ಸಲ್ಮಾನ್ 'ಟೈಗರ್' ಸ್ಟಂಟ್ ಅನುಕರಿಸಲು ಹೋಗಿ ಜೀವ ತೆತ್ತ!

Posted By:
Subscribe to Filmibeat Kannada
ಸಲ್ಮಾನ್ ಖಾನ್ ಇತ್ತೀಚಿನ ಸೂಪರ್ ಹಿಟ್ 'ಏಕ್ ಥಾ ಟೈಗರ್' ದೃಶ್ಯವೊಂದನ್ನು ಅನುಕರಿಸಲು ಹೋಗಿ ಬೆಂಗಳೂರಿನ ವಿದ್ಯಾರ್ಥಿಯೊಬ್ಬ ಇಹಲೋಕ ತ್ಯಜಿಸಿದ್ದಾನೆ. ನ್ಯೂ ಬಂಬೂ ಬಜಾರಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಮಹಮ್ಮದ್ ಪೈಜನ್ ಹೆಸರಿನ 16 ವರ್ಷದ ವಿದ್ಯಾರ್ಥಿ ಮೃತಪಟ್ಟ ದುರ್ದೈವಿ. ಸಿನಿಮಾದಲ್ಲಿ ಸಲ್ಮಾನ್ ಖಾನ್ ರೈಲಿನ ಮೇಲಿಂದ ಕೆಳಗೆ ಜಿಗಿಯುವಂತೆ ಆತನೂ ಮಾಡಲು ಹೋಗಿ ಸಾವಿಗೆ ಬಲಿಯಾಗಿದ್ದಾನೆ.

ಅಕ್ಟೋಬರ್ 3 ರಂದು ಪರೀಕ್ಷೆಗೆ ಚಕ್ಕರ್ ಹಾಕಿ ತನ್ನಿಬ್ಬರು ಸ್ನೇಹಿತರೊಂದಿಗೆ ಕಾಂಟೋನ್ಮೇಟ್ ರೈಲು ನಿಲ್ದಾಣಕ್ಕೆ ಹೋಗಿದ್ದ ಮಹಮ್ಮದ್ ಫೈಜನ್, ನಿಲ್ದಾಣದಲ್ಲಿ ನಿಂತಿದ್ದ 'ಗೋಲ್ಡನ್ ಚಾರಿಯಟ್' ರೈಲಿನ ಮೇಲೆ ಹತ್ತಿದ್ದಾರೆ. 'ಏಕ್ ಥಾ ಟೈಗರ್' ಚಿತ್ರದಲ್ಲಿ ಸಲ್ಲೂ ರೈಲಿನ ಮೇಲಿಂದ ಕೆಳಗೆ ಜಿಗಿಯುವ ಸಾಹಸವನ್ನು ತಾನೂ ಮಾಡಿ ತೋರಿಸುತ್ತೇನೆ ಎಂದು ಜೊತೆಯಲ್ಲಿದ್ದ ಸ್ನೇಹಿತರೊಂದಿಗೆ ಹೇಳಿ ಜಿಗಿದಿದ್ದಾನೆ.

ಆದರೆ ರೈಲಿನ ಮೇಲಿಂದ ಜಿಗಿದ ಆತ ಪಕ್ಕದಲ್ಲೇ ಇದ್ದ ಹೈ ಟೆನ್ಷನ್ ವಿದ್ಯತ್ ತಂತಿ ಮೇಲೆ ಬಿದ್ದಿದ್ದಾನೆ. ತೀವ್ರ ಸುಟ್ಟ ಗಾಯಗಳಾಗಿ ಕೆಳಗೆ ಬಿದ್ದಿದ್ದ ಆತನನ್ನು ರೇಲ್ವೆ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಜೊತೆಯಲ್ಲಿದ್ದ ಗೆಳೆಯರು ಘಟನೆ ನಡೆಯುತ್ತಿದ್ದಂತೆ ಭಯಭೀತರಾಗಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದ್ದ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಗೆ ಸಾಗಿಸಲಾಗಿತ್ತು.

ನಿಮ್ಹಾನ್ಸ್ ನಲ್ಲಿ ಜೀವನ್ಮರಣ ಹೋರಾಟ ನಡೆಸಿದ ಮಹಮ್ಮದ್ ಪೈಜನ್, ಕಳೆದ ಶುಕ್ರವಾರ (05 ಅಕ್ಟೋಬರ್ 2012) ಬೆಳಗಿನ ಜಾವ ಚಿಕತ್ಸೆ ಫಲಕಾರಿಯಾಗದೇ ಮರಣಹೊಂದಿದ್ದಾನೆ. ಕಾಂಟೋನ್ಮೆಂಟ್ ರೇಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. 'ಏಕ್ ಥಾ ಟೈಗರ್' ಸಿನಿಮಾ ಎಫೆಕ್ಟ್, ಈ ರೀತಿಯಲ್ಲಿ ಒಬ್ಬನ ಜೀವ ಬಲಿ ತೆಗೆದುಕೊಂಡಿದೆ. (ಏಜೆನ್ಸೀಸ್)

English summary
Bangalore student Mohammad Paijan followed a Stunt Scene of Bollywood Super Star Salman Khan's recent movie 'Ek Tha Tiger' and died. He jumped from the Top of a Railway and got injured and admitted in Hospta. But, after he died in Hospial. This is Salman Khan Movie Effect. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada