ಗಣೇಶ ಮೂರ್ತಿ ವಿಸರ್ಜನೆ ವೇಳೆ ಬಾಲಿವುಡ್ ನಟ ಸಲ್ಮಾನ್ ಖಾನ್ ಡ್ಯಾನ್ಸ್

ಗಣೇಶ ಹಬ್ಬದ ಸಡಗರ ಮುಂದುವರೆದಿದೆ. ಹಿಂದೂ- ಮುಸಲ್ಮಾನರು ಕೆಲವೆಡೆ ಒಟ್ಟಾಗಿ ಗಣೇಶೋತ್ಸವ ಆಚರಿಸುತ್ತಿದ್ದಾರೆ. ಬಾಲಿವುಡ್ ನಟ-ನಟಿಯರು ಕೂಡ ವಿಘ್ನ ವಿನಾಶಕನ ಪೂಜೆ ಮಾಡಿ ಸಂಭ್ರಮಿಸುತ್ತಾರೆ. ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಸಹೋದರಿ ಮನೆಯಲ್ಲಿ ಗಣೇಶ ಹಬ್ಬ ಪ್ರತಿವರ್ಷ ಜೋರಾಗಿರುತ್ತದೆ.

ಅರ್ಪಿತಾ ಖಾನ್ ಮತ್ತು ಆಯುಷ್ ಶರ್ಮಾ ನಿವಾಸದಲ್ಲಿ ಶನಿವಾರ ಗಣೇಶ ಚತುರ್ಥಿ ಆಚರಿಸಲಾಯಿತು. ಸಲ್ಲು ಕೂಡ ಫ್ಯಾಮಿಲಿ ಸಮೇತ ಈ ಸಂಭ್ರಮದಲ್ಲಿ ಭಾಗಿ ಆಗಿದ್ದರು. ಸಹೋದರಿಯ ಮಗಳು ಆಯತ್ ಖಾನ್ ಜೊತೆ ಆರತಿ ಬೆಳಗಿರುವ ವೀಡಿಯೋ ವೈರಲ್ ಆಗುತ್ತಿದೆ. ಅರ್ಬಾಜ್ ಮಗ ಅರ್ಹಾನ್, ಸೊಹೈಲ್ ಮಕ್ಕಳಾದ ನಿರ್ವಾನ್ ಮತ್ತು ಯೋಹಾನ್ ಜೊತೆಗೆ ಸಲೀಂ ಖಾನ್, ಅರ್ಬಾಜ್ ಖಾನ್, ಸೊಹೈಲ್ ಖಾನ್ ಸೇರಿದಂತೆ ಇಡೀ ಕುಟುಂಬ ಹಾಜರಿತ್ತು.

Salman Khan Family dancing and celebrating Visarjan of Ganesh

ಇನ್ನು ಅರ್ಪಿತಾ ಖಾನ್ ಮನೆಯಲ್ಲಿ ನಡೆಯುವ ಗಣೇಶ ಪೂಜೆಗೆ ಹಲವು ನಟ, ನಟಿಯರು ಭಾಗಿ ಆಗುತ್ತಾರೆ. ಈ ಬಾರಿ ವರುಣ್ ಶರ್ಮಾ, ಓರಿ ಸೇರಿದಂತೆ ಕುಟುಂಬದ ಆಪ್ತರು ಸಾಕ್ಷಿ ಆಗಿದ್ದರು. ಭಾನುವಾರ ಸಂಜೆ ನಡೆದ ಗಣಪತಿ ಮೂರ್ತಿ ವಿಸರ್ಜನೆ ಸಮಯದಲ್ಲಿ ಸಲ್ಲು ಎಲ್ಲರೊಟ್ಟಿಗೆ ಹೆಜ್ಜೆ ಹಾಕಿ ಖುಷಿಪಟ್ಟಿದ್ದಾರೆ.

ಸಲ್ಮಾನ್ ಖಾನ್ ಸದ್ಯ 'ಸಿಕಂದರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳು ನಿರ್ದೇಶಕ ಎ. ಆರ್ ಮುರುಗದಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕೆಲ ದಿನಗಳ ಹಿಂದೆ ಶೂಟಿಂಗ್ ವೇಳೆ ಸೆಟ್‌ನಲ್ಲಿ ಸಲ್ಲು ಗಾಯಗೊಂಡಿದ್ದರು. ಪಕ್ಕೆಲುಬಿಗೆ ಪೆಟ್ಟಾಗಿತ್ತು. ಈ ವಿಚಾರವನ್ನು ಸ್ವತಃ ಬಹಿರಂಗಪಡಿಸಿದ್ದರು. ನೋವಿನ ನಡುವೆಯೂ ಗಣೇಶ ಹಬ್ಬದ ಸಂಭ್ರಮದಲ್ಲಿ ಭಾಗಿ ಆಗಿ ಹೆಜ್ಜೆ ಹಾಕಿದ್ದಾರೆ. ಇದನ್ನು ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ.

ಪಕ್ಕೆಲುಬಿಗೆ ಪೆಟ್ಟಾಗಿದ್ದರೂ ಸಲ್ಮಾನ್ ಖಾನ್ ಬಿಗ್‌ಬಾಸ್ ಶೋ ನಡೆಸಿಕೊಡುತ್ತಿದ್ದಾರೆ. ಈ ವೀಕೆಂಡ್ ಕಪ್ಪು ಬಣ್ಣದ ಸೂಟ್ ಧರಿಸಿ ಸಲ್ಲು ವೇದಿಕೆ ಏರಿದ್ದರು. ಶಾರುಖ್ ಖಾನ್ ಕೂಡ ತಮ್ಮ ಮನ್ನತ್ ಬಂಗಲೆಯಲ್ಲಿ ಗಣೇಶ ಹಬ್ಬ ಆಚರಣೆಯ ಫೋಟೊ ಹಂಚಿಕೊಂಡಿದ್ದರು. ಇನ್ನು ಮುಖೇಶ್ ಅಂಬಾನಿ ಮನೆಯ ಗಣೇಶೋತ್ಸವದಲ್ಲಿ ಸಲ್ಮಾನ್ ಖಾನ್, ರೇಖಾ, ಸಿದ್ದಾರ್ಥ್ ಮಲ್ಹೋತ್ರಾ, ಕೈರಾ ಅದ್ವಾನಿ, ಸಾರಾ ಅಲಿಖಾನ್ ಸೇರಿದಂತೆ ಹಲವರು ಭಾಗಿ ಆಗಿದ್ದರು.

ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ದಂಪತಿ ಮನೆಯಲ್ಲಿ ಗಣೇಶ ಹಬ್ಬ ಆಚರಣೆ ಕಳೆಕಟ್ಟಿತ್ತು. ಗಣೇಶ ಮೂರ್ತಿ ವಿಸರ್ಜನೆ ವೇಳೆ ದಂಪತಿ ಬಿಂದಾಸ್ ಡ್ಯಾನ್ಸ್ ಮಾಡಿರುವ ವೀಡಿಯೋ ವೈರಲ್ ಆಗುತ್ತಿದೆ. ಅನನ್ಯಾ ಪಾಂಡೆ, ಕಾರ್ತಿಕ್ ಆರ್ಯನ್ ಸೇರಿ ಸಾಕಷ್ಟು ಬಾಲಿವುಡ್ ತಾರೆಯರ ಮನೆಗಳಲ್ಲಿ ಗಣೇಶ ಚತುರ್ಥಿ ಆಚರಣೆ ರಂಗೇರಿತ್ತು.

More from Filmibeat

English summary
Sikandar actor Salman dances during Ganpati visarjan; video goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X