For Quick Alerts
  ALLOW NOTIFICATIONS  
  For Daily Alerts

  'ರಾಧೆ ಅದ್ಭುತ ಚಿತ್ರವಲ್ಲ': ಸಲ್ಲು ಸಿನಿಮಾವನ್ನು ತಂದೆಯೂ ಇಷ್ಟಪಟ್ಟಿಲ್ಲ, ಏಕೆ?

  |

  ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ರಾಧೆ ಸಿನಿಮಾ ಇತ್ತೀಚಿಗಷ್ಟೆ ಬಿಡುಗಡೆಯಾಗಿತ್ತು. ವಿಮರ್ಶಾತ್ಮಕವಾಗಿ ರಾಧೆ ಚಿತ್ರಕ್ಕೆ ಹಿನ್ನಡೆಯಾಗಿದೆ. ರಾಧೆ ನೋಡಿದ ಬಹುತೇಕರು ಚಿತ್ರ ಚೆನ್ನಾಗಿಲ್ಲ ಎಂದು ಅಭಿಪ್ರಾಯ ಹೊರಹಾಕಿದ್ದರು. ಇದೀಗ, ಸ್ವತಃ ಸಲ್ಮಾನ್ ಖಾನ್ ಸಲೀಮ್ ಖಾನ್ ಸಹ ರಾಧೆ ಚಿತ್ರ ಇಷ್ಟ ಆಗಿಲ್ಲ ಎಂದು ಹೇಳಿದ್ದಾರೆ.

  ಪ್ರಾಮಾಣಿಕ ವಿಮರ್ಶೆ ಕೊಡುವುದಕ್ಕೆ ಸಲ್ಲು ತಂದೆ ಹೆಸರುವಾಸಿಯಾದವರು. ಸಿನಿಮಾ ಯಾವುದೇ ಇರಲಿ ನೇರವಾಗಿ ಇದ್ದುದ್ದನ್ನ ಇದ್ದಂತೆ ಹೇಳುವ ವ್ಯಕ್ತಿತ್ವ. ಈಗ, ಮಗನ ಸಿನಿಮಾ ಎಂದು ಬೀಗದೆ 'ಚಿತ್ರದಲ್ಲಿ ಅಂತಹ ಅದ್ಭುತ ಏನೂ ಇಲ್ಲ. ಇದೊಂದು ಸಾಮಾನ್ಯ ಸಿನಿಮಾ ಅಷ್ಟೆ' ಎಂದಿದ್ದಾರೆ. ಮುಂದೆ ಓದಿ....

  'ರಾಧೆ' ಮೇಲೆ ಭಾರಿ ಬಂಡವಾಳ ಹೂಡಿದ್ದ ಜೀ ಗಳಿಸಿದ್ದೆಷ್ಟು?'ರಾಧೆ' ಮೇಲೆ ಭಾರಿ ಬಂಡವಾಳ ಹೂಡಿದ್ದ ಜೀ ಗಳಿಸಿದ್ದೆಷ್ಟು?

  ರಾಧೆ ಚಿತ್ರದಲ್ಲಿ ಅದ್ಭುತ ಎನ್ನುವ ಅಂಶವಿಲ್ಲ

  ರಾಧೆ ಚಿತ್ರದಲ್ಲಿ ಅದ್ಭುತ ಎನ್ನುವ ಅಂಶವಿಲ್ಲ

  ಡೈನಿಕ್ ಭಾಸ್ಕರ್ ಜೊತೆ ಸಂದರ್ಶನದಲ್ಲಿ ಭಾಗಿಯಾಗಿದ್ದ ಸಲೀಮ್ ಖಾನ್ ''ಈ ಹಿಂದೆ ತೆರೆಕಂಡಿದ್ದ ದಬಾಂಗ್ 3 ಚಿತ್ರ ವಿಭಿನ್ನವಾಗಿತ್ತು. ಭಜರಂಗಿ ಭಾಯ್‌ಜಾನ್ ಸಿನಿಮಾ ತುಂಬಾ ಚೆನ್ನಾಗಿತ್ತು. ಆದರೆ, ರಾಧೆ ಅಂತಹ ಅದ್ಭುತ ಚಿತ್ರವಲ್ಲ'' ಎಂದು ಸಲ್ಲು ಸಿನಿಮಾದ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದಾರೆ.

  ಬಿಸಿನೆಸ್ ಮಾಡಿದೆ ಎನ್ನುವುದು ನಿರಾಳ

  ಬಿಸಿನೆಸ್ ಮಾಡಿದೆ ಎನ್ನುವುದು ನಿರಾಳ

  ''ಕಮರ್ಷಿಯಲ್ ಆಗಿ ಹಣ ಗಳಿಸುವುದು ಪ್ರಮುಖವಾಗುತ್ತದೆ. ಅಂತಹ ಉದ್ದೇಶದಿಂದ ನೋಡಿದ್ರೆ ರಾಧೆ ಆ ಕೆಲಸ ಮಾಡಿದೆ. ಸಿನಿಮಾ ಅಂದ್ಮೇಲೆ ಕಲಾವಿದರು, ನಿರ್ಮಾಪಕರು, ವಿತರಕರು, ಪ್ರದರ್ಶಕರಿಗೆ ಹಣ ತಂದುಕೊಡಬೇಕಾಗುತ್ತದೆ. ಹಾಗ್ನೋಡಿದ್ರೆ ಸಲ್ಮಾನ್ ಖಾನ್ ಸಿನಿಮಾ ಉತ್ತಮ ಪ್ರದರ್ಶನ ತೋರಲಿದೆ. ಅದು ಬಿಟ್ಟರೆ ಸಿನಿಮಾ ಅಷ್ಟು ದೊಡ್ಡದಲ್ಲ'' ಎಂದು ಅಭಿಪ್ರಾಯಪಟ್ಟರು.

  ರಾಧೇ ಪೈರಸಿ ಮಾಡಿದ್ರೆ ವಾಟ್ಸಾಪ್ ರದ್ದುಗೊಳಿಸಿ: ದೆಹಲಿ ಹೈ ಕೋರ್ಟ್ರಾಧೇ ಪೈರಸಿ ಮಾಡಿದ್ರೆ ವಾಟ್ಸಾಪ್ ರದ್ದುಗೊಳಿಸಿ: ದೆಹಲಿ ಹೈ ಕೋರ್ಟ್

  ಉತ್ತಮ ಬರಹಗಾರರಿಲ್ಲ

  ಉತ್ತಮ ಬರಹಗಾರರಿಲ್ಲ

  ಈ ವೇಳೆ ಮಾತು ಮುಂದುವರಿಸಿದ ಸಲೀಮ್ ಖಾನ್ ಇಂಡಸ್ಟ್ರಿಯಲ್ಲಿ ಬರಹಗಾರರ ಕೊರತೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು. ''ಇಂಡಸ್ಟ್ರಿಯಲ್ಲಿ ಉತ್ತಮ ಬರಹಗಾರರ ಸಮಸ್ಯೆ ಇದೆ. ಇದು ಚಿತ್ರರಂಗದ ದೊಡ್ಡ ಕೊರತೆ. ಬರಹಗಾರರ ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಸಾಹಿತ್ಯ ಓದುವುದಿಲ್ಲ. ಹೊರಗೆ ಏನನ್ನೋ ನೋಡ್ತಾರೆ. ಅದನ್ನು ಇಲ್ಲಿ ನಕಲು ಮಾಡಲು ಪ್ರಯತ್ನಿಸುವರು'' ಎಂದಿದ್ದಾರೆ.

  ಇನ್ಯಾವತ್ತೂ Salman Khan ಸಿನಿಮಾ ವಿಮರ್ಶೆ ಮಾಡೋದಿಲ್ಲ ಎಂದ‌ KRK | Filmibeat Kannada
  ಪೈರಸಿ ವಿರುದ್ಧ ಸಲ್ಲು ಹೋರಾಟ

  ಪೈರಸಿ ವಿರುದ್ಧ ಸಲ್ಲು ಹೋರಾಟ

  ರಾಧೆ ಸಿನಿಮಾ ಬಿಡುಗಡೆಯಾದ ದಿನವೇ ಪೈರಸಿಯಾಯಿತು. ಸಾಮಾಜಿಕ ಜಾಲತಾಣದಲ್ಲಿ ರಾಧೆ ಪೈರಸಿ ಕಾಪಿ ಹರಿದಾಡಿದೆ. ಇದರ ವಿರುದ್ಧ ಸಲ್ಮಾನ್ ಖಾನ್ ಮತ್ತು ಜೀ ಸಂಸ್ಥೆ ನ್ಯಾಯಾಲಯದ ಮೊರೆ ಹೋಗಿದೆ. ರಾಧೆ ಪೈರಸಿ ಕುರಿತು ಆದೇಶ ನೀಡಿರುವ ಕೋರ್ಟ್ ''ಪೈರಸಿ ಹರಡಿಸುವ ಖಾತೆಯನ್ನು ರದ್ದುಗೊಳಿಸಿ'' ಎಂದು ವಾಟ್ಸಾಪ್ ಸಂಸ್ಥೆಗೆ ಸೂಚಿಸಿದೆ.

  English summary
  Salman khan’s father Salima khan said radha is not a great film. radhe is recently released movie, directed by prabhudeva.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X