»   » ಶಾರುಖ್, ಅಮೀರ್ ಗಿಂತ ಅಕ್ಷಯ್ ದೊಡ್ಡ ಸ್ಟಾರ್: ಸಲ್ಲು ಹೀಗೆ ಹೇಳಿದ್ದೇಕೆ?

ಶಾರುಖ್, ಅಮೀರ್ ಗಿಂತ ಅಕ್ಷಯ್ ದೊಡ್ಡ ಸ್ಟಾರ್: ಸಲ್ಲು ಹೀಗೆ ಹೇಳಿದ್ದೇಕೆ?

Posted By:
Subscribe to Filmibeat Kannada

ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರು ಗಳೆಂದರೆ ಅದು ಖಾನ್ ಗಳು. ಖಾನ್ ಗಳು ಮತ್ತು ಭಾರತದ ಸೂಪರ್ ಸ್ಟಾರ್ ಗಳು ಎಂದ ತಕ್ಷಣ ಎಲ್ಲರ ಮೈಂಡ್ ಗೆ ಬರುವುದು ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಅಮೀರ್ ಖಾನ್.

ಆದರೆ ಸಲ್ಮಾನ್ ಖಾನ್ ಬಾಲಿವುಡ್ ನಲ್ಲಿ ಈ ಮೂವರು ಖಾನ್ ಗಳಿಗಿಂತ ಬಿಗ್ ಸ್ಟಾರ್ ಎಂದರೇ ಅದು ಅಕ್ಷಯ್ ಕುಮಾರ್, ಅದಕ್ಕೆ ಒಂದು ಉತ್ತಮ ಕಾರಣವು ಇದೆ ಎಂದು ಹೇಳಿದ್ದಾರೆ. ಅಲ್ಲದೇ ಅಕ್ಷಯ್ ಕುಮಾರ್ ಎಲ್ಲಾ ಖಾನ್ ಗಳು ಕಷ್ಟಪಟ್ಟು ಕೆಲಸ ಮಾಡಬೇಕು ಎಂದು ಯೋಚಿಸುತ್ತಾರೆ ಎಂದಿದ್ದಾರೆ. ಅಂದಹಾಗೆ ಸಲ್ಲು, 'ಟ್ಯೂಬ್‌ಲೈಟ್' ಪ್ರಮೋಷನ್ ವೇಳೆ ಅಕ್ಷಯ್ ಕುಮಾರ್ ರನ್ನು ಬಿಗ್ ಸ್ಟಾರ್ ಎಂದಿದ್ದೇಕೆ ಎಂಬುದರ ಕಹಾನಿ ಇಲ್ಲಿದೆ ನೋಡಿ..

ಸೂಪರ್ ಸ್ಟಾರ್ ಗಳು ಯಾರು?

'ಇಂದು ಸೂಪರ್ ಸ್ಟಾರ್ ಗಳು ಯಾರು ಎಂದು ಹೇಳುವುದಾದರೆ ಐ ಥಿಂಕ್ ಅಮೀರ್ ಖಾನ್, ಶಾರುಖ್ ಖಾನ್, ನಾನು ಮತ್ತು ಅಕ್ಷಯ್ ಕುಮಾರ್' ಎಂದು ಸಲ್ಮಾನ್ ಖಾನ್ ಇತ್ತೀಚೆಗೆ ಲೀಡಿಂಗ್ ಡೈಲಿ ಜೊತೆ ಹೇಳಿದ್ದಾರೆ.

ಸಿನಿಮಾಗಳ ಬಗ್ಗೆ ಸಲ್ಲು ಹೇಳಿದ್ದು..

"ಖಾನ್ ಗಳಾದ ನಾವು ಕಡಿಮೆ ಸಿನಿಮಾಗಳನ್ನು ಮಾಡುತ್ತೇವೆ. ನಾನು ಒಂದು ವರ್ಷದಲ್ಲಿ ಎರಡು ಸಿನಿಮಾ ಮಾಡುತ್ತೇನೆ. ಅಮೀರ್ ಖಾನ್ ಮೂರು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಾರೆ. ಆದರೆ ಅಕ್ಷಯ್ ಕುಮಾರ್ ಒಂದು ವರ್ಷಕ್ಕೆ 4-5 ಸಿನಿಮಾಗಳನ್ನು ಮಾಡುತ್ತಾರೆ. ನೀವೆ ಲೆಕ್ಕ ಹಾಕಿ.." ಎಂದ ಸಲ್ಲು, ಅಕ್ಷಯ್ ರನ್ನು ಬಿಗ್ಗರ್ ಸ್ಟಾರ್ ಎನ್ನಲು ನೀಡಿದ ಕಾರಣ...

"ಅಕ್ಷಯ್ ಕುಮಾರ್ ಹಾರ್ಡ್ ವರ್ಕ್ ಮಾಡುತ್ತಾರೆ,

"ಅಕ್ಷಯ್ ಕುಮಾರ್ ಹಾರ್ಡ್ ವರ್ಕ್ ಮಾಡುತ್ತಾರೆ, ಗರಿಷ್ಠ ಮಟ್ಟದ ಹಣ ಸಂಪಾದನೆ ಮಾಡುತ್ತಾರೆ. ಅವರು ಹಲವು ನಿರ್ಮಾಣ ಕಂಪನಿಗಳಿಗೆ, ಹಲವು ಚಿತ್ರತಂಡಗಳಿಗೆ, ನಿರ್ದೇಶಕರಿಗೆ ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ ಸಹಾಯ ಮಾಡುತ್ತಾರೆ. ಆದ್ದರಿಂದ ಅವರು ಖಾನ್ ಗಳಿಗಿಂತ ದೊಡ್ಡ ಸ್ಟಾರ್" ಎಂದಿದ್ದಾರೆ ಸಲ್ಮಾನ್ ಖಾನ್.

ಸಲ್ಮಾನ್, ಅಕ್ಷಯ್ ಗಿಂತ ಹೆಚ್ಚು ಚಿತ್ರ ಮಾಡದಿರಲು ಕಾರಣ..

ಲೀಡಿಂಗ್ ಡೈಲಿಯ ಈ ಮೇಲಿನ ಪ್ರಶ್ನೆಗೆ 'ನಾನು ಸಹ ಹೆಚ್ಚು ಸಿನಿಮಾಗಳನ್ನು ಮಾಡಲು ಪ್ರಯತ್ನಿಸುತ್ತೇನೆ. ಆದರೆ ಇದರ ಬಗ್ಗೆ ಅಕ್ಕಿಯೇ ಹೆಚ್ಚಾಗಿ ಹಿಂದೆ ಒಮ್ಮೆ ಅರ್ಥಮಾಡಿಕೊಂಡಿದ್ದಾರೆ. ಸದ್ಯದಲ್ಲಿ ಒಂದು ವರ್ಷಕ್ಕೆ ಎರಡುವರೆ ಚಿತ್ರಗಳನ್ನು ಮಾಡುತ್ತಿದ್ದೇನೆ. ಮುಂದಿನ ವರ್ಷಗಳಲ್ಲಿ ಮೂರು ಚಿತ್ರಗಳನ್ನು ಮಾಡುತ್ತೇನೆ" ಎಂದು ಸಲ್ಲು ಉತ್ತರಿಸಿದ್ದಾರೆ.

English summary
The Khans are the most bankable stars in Bollywood. When we talk about superstars in India, the names of Salman Khan, Shahrukh Khan and Aamir Khan come to the mind. But Salman Khan says that Akshay Kumar is a bigger star than all the three Khans and he has a valid reason.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada