ಫ್ಲರ್ಟ್ ಮಾಡಿ ನಟಿ ಭಾಗ್ಯಶ್ರೀಗೆ ಕಿರಿಕಿರಿ ತಂದಿದ್ದ ಸಲ್ಮಾನ್ ಖಾನ್.!
1989 ರಲ್ಲಿ ತೆರೆಗೆ ಬಂದ ಸಲ್ಮಾನ್ ಖಾನ್ ಮತ್ತು ಭಾಗ್ಯಶ್ರೀ ಅಭಿನಯದ 'ಮೈನೇ ಪ್ಯಾರ್ ಕಿಯಾ' ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ತೆರೆಮೇಲೆ ಸಲ್ಮಾನ್ ಖಾನ್ ಮತ್ತು ಭಾಗ್ಯಶ್ರೀ ಪ್ರೇಮ್ ಕಹಾನಿ ಕಣ್ತುಂಬಿಕೊಂಡ ಪ್ರೇಕ್ಷಕರು ಅಂದು ಫಿದಾ ಆಗಿದ್ದರು.
ಇದೇ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ನಟಿ ಭಾಗ್ಯಶ್ರೀಗೆ ಸಲ್ಮಾನ್ ಖಾನ್ ಕಿರಿಕಿರಿ ಉಂಟು ಮಾಡಿದ್ದರಂತೆ. ಹಾಗಂತ ಸ್ವತಃ ಭಾಗ್ಯಶ್ರೀ ಬಾಯ್ಬಿಟ್ಟಿದ್ದಾರೆ.
''ನಾನು ಹಿಮಾಲಯ್ ನೊಂದಿಗೆ ಪ್ರೀತಿ ಮಾಡುತ್ತಿರುವ ವಿಷಯ ಮೊದಲು ಗೊತ್ತಾಗಿದ್ದೇ ಸಲ್ಮಾನ್ ಖಾನ್ ಗೆ. ಅದು 'ದಿಲ್ ದೀವಾನಾ..' ಸಾಂಗ್ ಶೂಟಿಂಗ್ ಸಂದರ್ಭದಲ್ಲಿ. ಅಂದು ಹಿಂದ್ಹಿಂದೆ ಬಂದು ನನ್ನ ಕಿವಿಯಲ್ಲಿ ಸಲ್ಮಾನ್ ಹಾಡು ಹಾಡುತ್ತಿದ್ದರು. ಆಗ ನಮ್ಮ ಬಗ್ಗೆ ಜನ ಇಲ್ಲ-ಸಲ್ಲದು ಮಾತನಾಡುತ್ತಾರೆ, ಬೇಡ ಅಂತ ಸಲ್ಮಾನ್ ಗೆ ವಾರ್ನಿಂಗ್ ಕೊಟ್ಟಿದ್ದೆ. ಆದ್ರೆ, ಅವರು ಕೇಳಲಿಲ್ಲ. ತುಂಬಾ ಹೊತ್ತು ಕಿರಿಕಿರಿ ಮಾಡಿದ ಮೇಲೆ ''ಹಿಮಾಲಯ್ ಬಗ್ಗೆ ನನಗೆ ಗೊತ್ತು'' ಅಂತ ಹೇಳಿದರು. ಜೊತೆಗೆ ಲೋಕೇಶನ್ ಗೂ ಹಿಮಾಲಯ್ ನ ಕರೆಸುವಂತೆ ಸಲ್ಮಾನ್ ಸೂಚಿಸಿದರು'' ಎಂದು ಇತ್ತೀಚೆಗಷ್ಟೇ ನೀಡಿದ ಸಂದರ್ಶನವೊಂದರಲ್ಲಿ ನಟಿ ಭಾಗ್ಯಶ್ರೀ ಹೇಳಿದ್ದಾರೆ.

'ಮೈನೇ ಪ್ಯಾರ್ ಕಿಯಾ' ಚಿತ್ರ ಬಿಡುಗಡೆ ಆದ ಮೇಲೆ, ಭಾಗ್ಯಶ್ರೀ ಮತ್ತು ಹಿಮಾಲಯ್ ವೈವಾಹಿಕ ಬದುಕಿಗೆ ನಾಂದಿ ಹಾಡಿದರು. ಈ ದಂಪತಿಗೆ ಓರ್ವ ಪುತ್ರ ಮತ್ತು ಪುತ್ರಿ ಇದ್ದಾಳೆ.
ಭಾಗ್ಯಶ್ರೀ ಪುತ್ರ ಅಭಿಮನ್ಯು 'ಮರ್ದ್ ಕೊ ದರ್ದ್ ನಹೀ ಹೋತಾ' ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದಾರೆ. ಈ ಚಿತ್ರದಲ್ಲಿನ ನಟನೆಗಾಗಿ ಅಭಿಮನ್ಯುಗೆ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಸಿಕ್ಕಿದೆ.


Click it and Unblock the Notifications











