ಸಲ್ಮಾನ್ ಮೇಲೆ ಸನ್ನಿ ಕಣ್ಣು; ಸಲ್ಲೂ ಹೇಳಿದ್ದೇನು?
ಬಾಲಿವುಡ್ ಹಾಟ್ ಜೋಡಿಗಳನ್ನು ನೋಡಲು ಯಾರಿಗೆ ಇಷ್ಟವಿಲ್ಲ ಹೇಳಿ! ಸಲ್ಮಾನ್-ಕತ್ರಿನಾ, ಶಾರುಖ್-ಪ್ರಿಯಾಂಕಾ ಹೀಗೆ ಸಾಕಷ್ಟು ಹಾಟ್ ಜೋಡಿಗಳನ್ನು ತೆರೆಯ ಮೇಲೆ ನೋಡಲು ಪ್ರೇಕ್ಷಕರು ತುಂಬಾ ಇಷ್ಟಪಡುತ್ತಾರೆ. ಅದರಂತೆ ನೀಲಿ ತಾರೆ ಸನ್ನಿ ಲಿಯೋನ್ ಹಾಗೂ ಸಲ್ಮಾನ್ ಖಾನ್ ತೆರೆಯ ಮೇಲೆ ಜೋಡಿಯಾಗಿ ಬಂದರೆ ಬಹುಶಃ ಪ್ರೇಕ್ಷಕರು ಮಾತ್ರವಲ್ಲ, ಇಡೀ ಬಾಲಿವುಡ್ ಚಿತ್ರರಂಗವೇ ಕಣ್ಣುಮುಚ್ಚಲು ಮರೆಯಬಹುದು.
ಆದರೆ ಇದು ಸದ್ಯಕ್ಕೆ ಸಾಧ್ಯವೇ ಎಂಬುದೀಗ ಪ್ರಶ್ನೆ! ಸನ್ನಿ ಲಿಯೋನ್ ಅವರಿಗೆ ಸಲ್ಮಾನ್ ಎಂದರೆ ಪಂಚಪ್ರಾಣ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಸನ್ನಿ ಲಿಯೋನ್, "ನನಗೆ ಸಲ್ಮಾನ್ ಖಾನ್ ಜೊತೆ ಅಭಿನಯಿಸಲು ಇಷ್ಟ. ನನ್ನ ಜೊತೆ ಯಾರೇ ಅಭಿನಯಿಸಲು ಇಷ್ಟಪಟ್ಟರೂ ನಾನು ಅವರೊಂದಿಗೆ ನಟಿಸುತ್ತೇನೆ. ಅದಕ್ಕೆ ನನಗೆ ಯಾವ ಅಭ್ಯಂತರವೂ ಇಲ್ಲ. ಆದರೆ ನಾನು ಇಷ್ಟಪಡುವ ನಟರ ಲಿಸ್ಟ್ ನಲ್ಲಿ ಸಲ್ಮಾನ್ ಖಾನ್ 'ಟಾಪ್' ಸ್ಥಾನದಲ್ಲಿದ್ದಾರೆ" ಎಂದಿದ್ದಾರೆ. ಅರ್ಥವಾಯಿತಲ್ಲವೇ?
ಸನ್ನಿ ಸಲ್ಲೂ ಇಷ್ಟಪಡುವ ವಿಚಾರ ಒಂದು ಕಡೆ ಸಮಾಚಾರ ಅಷ್ಟೇ! ಆದರೆ ಇನ್ನೊಂದು ಕಡೆ ಸಮಾಚಾರವೆಂದರೆ, ಸ್ವತಃ ಸಲ್ಲೂಗೆ ಸನ್ನಿ ಜೊತೆ ನಟಿಸಲು ಇಷ್ಟವಾಗಿದೆಯಂತೆ. ಅದಕ್ಕಾಗಿ ತಮ್ಮ ಕೈಸೇರಿರುವ ಹೊಸ ಚಿತ್ರಗಳಲ್ಲಿ ಸನ್ನಿ ಲಿಯೋನ್ ರನ್ನು ನಾಯಕಿಯನ್ನಾಗಿಸಲು ಸಲ್ಲೂ ಸತತ ಪ್ರಯತ್ನ ನಡೆಸುತ್ತಿದ್ದಾರೆ. "ನಮ್ಮಿಬ್ಬರ ಜೋಡಿ ತೆರೆಯಲ್ಲಿ ಪ್ರೇಕ್ಷಕರ ಪ್ರಶಂಸೆ ಗಳಿಸುವುದು ಖಂಡಿತ" ಎಂದು ಸಲ್ಲೂ ಹೇಳಿದ್ದು ವಿಶೇಷ ಲೇಟೆಸ್ಟ್ ಸುದ್ದಿ.
ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದ 'ಬಿಗ್ ಬಾಸ್' ರಿಯಾಲಿಟಿ ಶೋ ಮೂಲಕ ಸನ್ನಿ ಲಿಯೋನ್ ಬಾಲಿವುಡ್ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದು ಎಂಬುದನ್ನೊಮ್ಮೆ ನೆನಪು ಮಾಡಿಕೊಳ್ಳಿ. ಆಗಲೇ ಸನ್ನಿ ಬಗ್ಗೆ ಸಲ್ಲೂಗೂ ಹಾಗೇ ಸಲ್ಲೂ ಬಗ್ಗೆ ಸನ್ನಿಗೂ ಸಾಕಷ್ಟು ಗೆಳೆತನ ಶುರುವಾಗಿದೆ. ಆದರೆ ಎಲ್ಲೂ ಅದು ಮೇರೆ ಮೀರಿರಲಿಲ್ಲ. ಬಿಗ್ ಬಾಸ್ ನಂತರವೇ ಇದೀಗ ಪ್ರದರ್ಶನ ಕಾಣುತ್ತಿರುವ 'ಜಿಸ್ಮ್ 2' ಚಿತ್ರದಲ್ಲಿ ಸನ್ನಿ ನಟಿಸಿರುವುದು.
ಜಿಸ್ಮ್ 2 ಬಾಲಿವುಡ್ ಚಿತ್ರದ ಮೂಲಕ ಸನ್ನಿ ಲಿಯೋನ್ ನೀಲಿ ತಾರೆ ಪಟ್ಟದಿಂದ, ಬಾಲಿವುಡ್ ಚಿತ್ರತಾರೆ ಪಟ್ಟಕ್ಕೆ ಜಿಗಿದಾಗಿದೆ. ಈಗ ಸಲ್ಲೂ ಜೊತೆ ನಟಿಸುವ ಸನ್ನಿ ಆಸೆ ಕೈಗೂಡಿದರೆ ಆಶ್ಚರ್ವಿಲ್ಲ. ಅದರಲ್ಲೂ ಸ್ವತಃ ಸಲ್ಮಾನ್ ಖಾನ್ ಪ್ರಯತ್ನಿಸುತ್ತಿರುವಾಗ ಅಸಾಧ್ಯವೇ? ಒಟ್ಟಿನಲ್ಲಿ ಸದ್ಯವೇ ಈ ಹಾಟ್ ಜೋಡಿಯನ್ನು ತೆರೆ ಮೇಲೆ ನೋಡುವ ಭಾಗ್ಯ ಪ್ರೇಕ್ಷಕರಿಗೆ ಲಭಿಸಬಹುದು. (ಏಜೆನ್ಸೀಸ್)


Click it and Unblock the Notifications











