For Quick Alerts
  ALLOW NOTIFICATIONS  
  For Daily Alerts

  ತಂಗಿಗೆ ಭರ್ಜರಿ ಗಿಫ್ಟ್ ಕೊಟ್ಟ ದಾನ ಶೂರ ಸಲ್ಲೂ

  By ಜೇಮ್ಸ್ ಮಾರ್ಟಿನ್
  |

  ಸಲ್ಮಾನ್ ಖಾನ್ ರನ್ನು ಬಾಲಿವುಡ್ ಚಿತ್ರ ಜಗತ್ತು ಬ್ಯಾಡ್ ಬಾಯ್ ಎಂದು ಕರೆಯಬಹುದು ಆದರೆ, ಅಭಿಮಾನಿಗಳು ಹಾಗೂ ಸೋದರಿಯರ ಪಾಲಿಗೆ ಆತ ಅಚ್ಚು ಮೆಚ್ಚಿನ ಅಣ್ಣ. ಸಲ್ಮಾನ್ ತನಗೆ ಇಷ್ಟವಾದವರಿಗೆ ಪ್ರೀತಿಯ ಮಹಾಪೂರ ಹರಿಸುವುದು ಎಲ್ಲರಿಗೂ ಗೊತ್ತಿರುವ ವಿಷಯ.

  ಎಷ್ಟೋ ಸಲ ಇವನ ಹುಚ್ಚು ಪ್ರೀತಿ ಅರ್ಥ ಮಾಡಿಕೊಳ್ಳದೇ ಕೈ ಕೊಟ್ಟವರೂ ಎಷ್ಟೋ ಮಂದಿ ಇದ್ದಾರೆ. ಚಿತ್ರರಂಗದಲ್ಲಿ ಈಗಷ್ಟೇ ಕಾಲಿಡುತ್ತಿರುವ ಎಳೆ ಪ್ರತಿಭೆಗಳಿಗೆ ಸಲ್ಮಾನ್ ಎಂದಿಗೂ ಬಿಗ್ ಬಾಸ್. ಜತೆಗೆ ತನ್ನ ಸೋದರಿಯರ ಆಸೆ ಆಕಾಂಕ್ಷೆಗಳನ್ನು ಸಲ್ಲೂ ಕಾಲ ಕಾಲಕ್ಕೆ ಈಡೇರಿಸುತ್ತಾ ಬಂದಿದ್ದಾರೆ.

  ಸದ್ಯಕ್ಕೆ ಬಂದಿರುವ ಸುದ್ದಿ ಪ್ರಕಾರ ಸಲ್ಮಾನ್ ಖಾನ್ ತನ್ನ ತಂಗಿ ಅಲ್ವಿರಾ ಅಗ್ನಿಹೋತ್ರಿಗೆ ಈದ್ ಹಾಗೂ ದೀಪಾವಳಿ ಎರಡೂ ಸೇರಿಸಿ ಭರ್ಜರಿ ಗಿಫ್ಟ್ ನೀಡಿದ್ದಾನೆ ಎನ್ನಲಾಗಿದೆ. ಅಲ್ವಿರಾ ಈಗ ಅತ್ಯಂತ ದುಬಾರಿ ಬ್ರೇಸ್ ಲೆಟ್ ಒಡತಿಯಾಗಿದ್ದಾರೆ.

  ಸಲ್ಮಾನ್ ಖಾನ್ ನೀಡಿರುವ ವಜ್ರದ ಬ್ರೇಸ್ ಲೆಟ್ ಬೆಲೆ ಸುಮಾರು 1.25 ಕೋಟಿ ರು ಎನ್ನಲಾಗಿದೆ. ಸಲ್ಮಾನ್ ಖಾನ್ ಅವರ ಮ್ಯಾನೇಜರ್ ರೇಷ್ಮ ಶೆಟ್ಟಿ ಅವರ ಗೆಳೆಯರೊಬ್ಬರ ಆಭರಣದ ಅಂಗಡಿಯಲ್ಲಿ ವಿಶೇಷವಾಗಿ ಈ ಬ್ರೇಸ್ ಲೇಟ್ ವಿನ್ಯಾಸಗೊಳಿಸಲಾಗಿದೆಯಂತೆ.

  ಅಲ್ವಿರಾ ಹಲವು ದಿನಗಳಿಂದ ಯಾವುದೇ ಗಿಫ್ಟ್ ನೀಡಿರಲಿಲ್ಲ.ಹೀಗಾಗಿ ಭರ್ಜರಿ ಗಿಫ್ಟ್ ನೀಡಲು ಸಲ್ಮಾನ್ ನಿರ್ಧರಿಸಿದ್ದರು ಎನ್ನಲಾಗಿದೆ.ಅಲ್ವಿರಾ ಹಲವು ದಿನಗಳಿಂದ ಯಾವುದೇ ಗಿಫ್ಟ್ ನೀಡಿರಲಿಲ್ಲ.ಹೀಗಾಗಿ ಭರ್ಜರಿ ಗಿಫ್ಟ್ ನೀಡಲು ಸಲ್ಮಾನ್ ನಿರ್ಧರಿಸಿದ್ದರು ಎನ್ನಲಾಗಿದೆ. ಮ್ಯಾನೇಜರ್ ರೇಷ್ಮಾ ಶೆಟ್ಟಿ ಸಲಹೆಯಂತೆ ಆಭರಣ ವಿನ್ಯಾಸಗಾರರ ಬಳಿ ಕುಳಿತು ತಮ್ಮ ಅಗತ್ಯಕ್ಕೆ ತಕ್ಕಂತೆ ಬ್ರೇಸ್ ಲೆಟ್ ವಿನ್ಯಾಸ ಮಾಡಿಸಿಕೊಂಡರು ಎಂದು ಮುಂಬೈನ ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ.

  ಈ ಹಿಂದೆ ಸಲ್ಮಾನ್ ಖಾನ್ ಅವರು ತಮ್ಮ ಮಾಜಿ ಪ್ರಿಯತಮೆ ಕತ್ರೀನಾ ಕೈಫ್ ಅವರಿಗೆ ಸ್ಫೋರ್ಟ್ ಯುಟಿಲಿಟಿ ವೆಹಿಕಲ್ ನೀಡಿದ್ದರು. ನಂತರ ಕೈಫ್ ಗೆ ಅನೇಕ ಆಭರಣಗಳನ್ನು ಸಲ್ಲೂ ನೀಡಿದ್ದರು ಎನ್ನಲಾಗಿದೆ. ಇದರ ಜತೆಗೆ ಮನೆಗೆ ಸಹಾಯ ಬೇಡಿ ಬರುವ ಅಭಿಮಾನಿಗಳು ಸಾರ್ವಜನಿಕರಿಗೆ ಸಲ್ಲೂ ಯಾವಾಗಲೂ ಇಲ್ಲ ಎಂದಿಲ್ಲ. ಒಮ್ಮೆ ಮಹಿಳೆಯೊಬ್ಬರು ತಮ್ಮ ಮಗನಿಗೆ ಕಂಪ್ಯೂಟರ್ ತೆಗೆದುಕೊಳ್ಳಲು ಸಹಾಯ ಬೇಡಿದಾಗ ರೂಮಿನಲ್ಲಿದ್ದ ಹೊಚ್ಚ ಹೊಸ ಲ್ಯಾಪ್ ಟಾಪ್ ದಾನ ಮಾಡಿದ್ದರಂತೆ. ಸಲ್ಮಾನ್ ಅರ್ಥ ಮಾಡಿಕೊಂಡವರಿಗೆ ಭಗವಂತ ಉಳಿದವರಿಗೆ ಬ್ಯಾಡ್ ಬಾಯ್.

  English summary
  Bollywood superstar Salman Khan is known for presenting lavish gifts to his near and dear ones. The latest we hear is that Khan has reportedly gifted a very precious and expensive bracelet to sister Alvira Agnihotri on the festive occasions of Eid and Diwali.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X