»   » ಚೀನಾ ಬೆಡಗಿಗೆ ಸಂಥಿಂಗ್ ಸ್ಪೆಷಲ್ ಉಡುಗೊರೆ ಕೊಟ್ಟ ಸಲ್ಮಾನ್!

ಚೀನಾ ಬೆಡಗಿಗೆ ಸಂಥಿಂಗ್ ಸ್ಪೆಷಲ್ ಉಡುಗೊರೆ ಕೊಟ್ಟ ಸಲ್ಮಾನ್!

Posted By:
Subscribe to Filmibeat Kannada

'ಸುಲ್ತಾನ್' ನಟ ಸಲ್ಮಾನ್ ಖಾನ್ ರವರಿಗೆ ನಿಮಗೆ ತಿಳಿಯದ ಒಂದು ವಿಶೇಷ ಗುಣವಿದೆ. ಅದೇನಂದ್ರೆ ಅವರ ಜೊತೆ ಚಿತ್ರದಲ್ಲಿ ನಟಿಸಿದ ಪ್ರತಿ ನಟಿಯರಿಗೂ ಒಂದು ಉಡುಗೊರೆ ನೀಡುವ ಹವ್ಯಾಸ. ಸಿನಿಮಾ ಚಿತ್ರೀಕರಣ ಮುಗಿದ ನಂತರ ಸಹ-ಕಲಾವಿದರಿಗೆ ತಮ್ಮ ಜೀವನದಲ್ಲಿ ಮರೆಯಲಾಗದಂತಹ ಗಿಫ್ಟ್ ಕೊಡುವುದನ್ನು ಮರೆಯುವುದಿಲ್ಲ ಸಲ್ಮಾನ್. ಈ ಹಿಂದೆಯೂ ಹಲವು ಕಲಾವಿದರಿಗೆ ತಮ್ಮ ಪೇಯಿಂಟಿಂಗ್ಸ್ ಮತ್ತು ಹಲವು ವಿಶೇಷ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.[ಸಲ್ಮಾನ್ ಜೊತೆ ಸಿನಿಮಾ ಮಾಡುವ ಬಗ್ಗೆ ರಾಜಮೌಳಿ ಹೇಳಿದ್ದೇನು?]

ಅಂದಹಾಗೆ ಬಾಲಿವುಡ್ ಸೂಪರ್ ಸ್ಟಾರ್ ಬಗೆಗಿನ ಲೇಟೆಸ್ಟ್ ಸುದ್ದಿ ಅಂದ್ರೆ, ಸಲ್ಮಾನ್ ಖಾನ್ ರವರು 'ಟ್ಯೂಬ್ ಲೈಟ್' ಚಿತ್ರದ ಕ್ಯೂಟ್ ನಟಿ ಚೀನಾದ ಝು ಝು ಗೆ ಸಂಥಿಂಗ್ ಸ್ಪೆಷಲ್ ಗಿಫ್ಟ್ ಒಂದನ್ನು ನೀಡಿರುವುದು. ಈ ಬಗ್ಗೆ ಬಾಲಿವುಡ್ ಲೈಫ್ ರಿವೀಲ್ ಮಾಡಿದ್ದು, ಸಲ್ಮಾನ್ ಖಾನ್ ಲಿಟ್ಲು ಬೇಬ್ ಝು ಝು ಗೆ ನೀಡಿದ ಆ ವಿಶೇಷ ಗಿಫ್ಟ್ ಏನು ತಿಳಿಯಲು ಮುಂದೆ ಓದಿ...

ಝು ಝು ಗೆ ಸಲ್ಮಾನ್ ವಿಶೇಷ ಗಿಫ್ಟ್

ಈ ಹಿಂದೆ ತಮ್ಮ ಜೊತೆ ಅಭಿನಯಿಸಿದ ನಟಿಯರಿಗೆ ತಮ್ಮ ಪೇಯಿಂಟಿಂಗ್ಸ್ ನೀಡುತ್ತಿದ್ದ ಸಲ್ಮಾನ್ ಖಾನ್ ಈಗ ಚೀನ ಮೂಲದ ನಟಿ ಝು ಝು ಗೆ ಸಂಥಿಂಗ್ ಸ್ಪೆಷಲ್ ಗಿಫ್ಟ್ ಒಂದನ್ನು ನೀಡಿದ್ದಾರೆ.[ಮಾಜಿ ಲವರ್ ಕತ್ರಿನಾ ಕೈಫ್ ಮೇಲೆ ಸಲ್ಮಾನ್ ಖಾನ್ ಕಾಳಜಿ!]

ಸಲ್ಮಾನ್ ವಿಶೇಷ ಉಡುಗೊರೆ ಏನದು?

ಅಂದಹಾಗೆ ಸಲ್ಮಾನ್ ಖಾನ್ 'ಟ್ಯೂಬ್ ಲೈಟ್' ಚಿತ್ರದ ನಟಿ ಝು ಝು ಗೆ ಪುಟಾಣಿ ಕ್ಯೂಟ್ ನಾಯಿ ಮರಿಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಖುಷಿಯಾದ ಝು ಝು

ಚೀನ ಮೂಲದ ಬೆಡಗಿ ಝು ಝು ಗೆ ನಾಯಿಮರಿ ಅಂದ್ರೆ ತುಂಬಾ ಪ್ರೀತಿ ಅಂತೆ. ಆದ್ದರಿಂದ ಸಲ್ಲು ಸಹ ಮುದ್ದಿನ ನಾಯಿಮರಿಯನ್ನು ಗಿಫ್ಟ್ ನೀಡಿರುವುದಕ್ಕೆ ಹ್ಯಾಪಿ ಆಗಿದ್ದಾರೆ.

ದೀರ್ಘಕಾಲದ ನಂತರ ಸಲ್ಲು ಸಂಥಿಂಗ್ ಸ್ಪೆಷಲ್

ಅಂದಹಾಗೆ ಸಲ್ಮಾನ್ ಖಾನ್ ಹಲವು ವರ್ಷಗಳ ನಂತರ ಇದೇ ಮೊದಲು ತಮ್ಮ ಜೊತೆ ಅಭಿನಯಿಸಿದ ನಟಿಗೆ ಅತೀ ವಿಶಿಷ್ಟವಾದ ಮತ್ತು ಸ್ಪೆಷಲ್ ಉಡುಗೊರೆ ನೀಡಿರುವುದು.

ವರ್ಣಚಿತ್ರಗಳು ಉಡುಗೊರೆ

ಈ ಹಿಂದೆ ಸಲ್ಮಾನ್ ಖಾನ್ ಸಿನಿಮಾ ಕ್ಷೇತ್ರದ ಹಲವು ಗೆಳೆಯ-ಗೆಳತಿಯರಿಗೆ ತಮ್ಮ ಪೇಯಿಂಟಿಂಗ್ಸ್ ಗಿಫ್ಟ್ ನೀಡಿದ್ದರು.

'ಕುದುರೆ' ಉಡುಗೊರೆ ನೀಡಿದ್ದ ಸಲ್ಮಾನ್

ಕಳೆದ ಕೆಲವು ತಿಂಗಳ ಹಿಂದಷ್ಟೇ ಸಲ್ಮಾನ್ ಖಾನ್ ರವರು ನಟಿ Iulia Vantur ಗೆ ಕುದುರೆಯನ್ನು ಗಿಫ್ಟ್ ಆಗಿ ನೀಡಿದ್ದರು.

'ಟ್ಯೂಬ್ ಲೈಟ್' ಝು ಝು ಗೆ ಮೊದಲ ಹಿಂದಿ ಸಿನಿಮಾ

ಅಂದಹಾಗೆ ಚೀನಾ ಮೂಲದ ಮಾಡೆಲ್ ಮತ್ತು ನಟಿ ಝು ಝು ಅಭಿನಯಿಸುತ್ತಿರುವ ಮೊದಲ ಹಿಂದಿ ಸಿನಿಮಾ ಸಲ್ಮಾನ್ ಖಾನ್ ರವರ 'ಟ್ಯೂಬ್ ಲೈಟ್'.

English summary
Salman Khan has gifted something special to his Tubelight co-star Zhu Zhu and the Chinese actress is loving her new cute little adorable gift.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada