ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಕಚ್ಚಿದ ಹಾವು! ಆಸ್ಪತ್ರೆಯಲ್ಲಿ ಸಲ್ಮಾನ್ ಚಿಕಿತ್ಸೆ

ಬಾಲಿವುಡ್ ಬಾಯಿಜಾನ್ ನಟ ಸಲ್ಮಾನ್ ಖಾನ್ ಅವರಿಗೆ ಹಾವು ಕಚ್ಚಿರುವ ಸುದ್ದಿ ಈಗ ಬೆಳಕಿಗೆ ಬಂದಿದೆ. ಶನಿವಾರ ರಾತ್ರಿ ಅಂದರೆ ಡಿಸೆಂಬರ್ 25ಕ್ಕೆ ಈ ಘಟನೆ ನಡೆದಿದ್ದು, ಕುಟುಂಬ ಸದಸ್ಯರಿಗೆ ಬಾರಿ ಆತಂಕ ತಂದೊಡ್ಡಿತ್ತು. ಸಲ್ಮಾನ್ ಖಾನ್ ಅವರ ಖಾಸಗಿ ಫಾರ್ಮ್ ಹೌಸ್‌ನಲ್ಲಿ ಸಲ್ಮಾನ್ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿದೆ ಎಂದು ತಿಳಿದು ಬಂದಿದೆ. ತಡ ಮಾಡದೇ ಕೂಡಲೇ ಸಲ್ಮಾನ್ ಖಾನ್ ಅವರನ್ನು ಆಪ್ತರು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ವಿಚಾರ ತಿಳಿದು ಗಾಬರಿಗೊಂಡಿದ್ದ ಕುಟುಂಬ ಸದಸ್ಯರು, ಆಪ್ತರು ಮತ್ತು ಅಭಿಮಾನಿಗಳು ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಯಾಕೆಂದರೆ ಸಲ್ಮಾನ್‌ ಖಾನ್‌ಗೆ ಚಿಕಿತ್ಸೆಯನ್ನು ಈಗಾಗಲೇ ನೀಡಲಾಗಿದ್ದು, ಸಲ್ಲುಗೆ ಕಚ್ಚಿರುವ ಹಾವು ವಿಷಪೂರಿತವಲ್ಲ ಎಂದು ತಿಳಿದು ಬಂದಿದೆ. ವೈದ್ಯರು ಈ ಮಾಹಿತಿಯನ್ನು ತಿಳಿಸಿದ್ದು, 'ಸಲ್ಮಾನ್ ಖಾನ್‌ಗೆ ಯಾವುದೇ ರೀತಿಯ ಅಪಾಯ ಇಲ್ಲ. ಅಪಾಯಕಾರಿ ಹಾವು ಸಲ್ಮಾನ್ ಅವರಿಗೆ ಕಚ್ಚಿಲ್ಲ. ಹಾವು ಹೆದರಿಕೊಂಡ ಸಂದರ್ಭ ಸಲ್ಮಾನ್ ಅವರಿಗೆ ಕಚ್ಚಿದೆಯಷ್ಟೆ. ಇದರಿಂದ ಸಲ್ಮಾನ್‌ಗೆ ಅಪಾಯ ಇಲ್ಲ. ಚಿಕಿತ್ಸೆಯನ್ನು ನೀಡಿದ್ದೇವೆ' ಎಂದಿದ್ದಾರೆ.

ಡಿಸೆಂಬರ್ 25 ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದ ಸಲ್ಮಾನ್ ಖಾನ್ ಅಲ್ಲೆ ದಾಖಲಾಗಿ ಚಿಕಿತ್ಸೆಯನ್ನು ಪಡೆದು ಈಗ ಡಿಸ್ಚಾರ್ಜ್ ಆಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಸದ್ಯ ಸಲ್ಮಾನ್ ಖಾನ್ ತಮ್ಮ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ಮಹಾರಾಷ್ಟ್ರದ ರಾಯಘಡ್‌ ಜಿಲ್ಲೆಯ ಪನ್ವೇಲ್‌ನಲ್ಲಿ ಸಲ್ಮಾನ್ ಖಾನ್ ಅವರ ಫಾರ್ಮ್‌ ಹೌಸ್ ಇದೆ. ಇಲ್ಲಿಗೆ ಆಗಾಗ ಆಗಮಿಸುವ ಸಲ್ಲು ವಿಶ್ರಾಂತಿ ಪಡೆಯುತ್ತಾರೆ. ಅಷ್ಟೇ ಅಲ್ಲದೇ ಶೂಟಿಂಗ್ ಬಿಡುವಿನಲ್ಲಿ ಇಲ್ಲಿಗೆ ಆಗಮಿಸುವ ಸಲ್ಲು ಮತ್ತು ಸ್ನೇಹಿತರು ಫಾರ್ಮ್ ಹೌಸ್‌ನಲ್ಲಿ ಗಿಡಗಳನ್ನು ನೆಡುವುದು, ಅವುಗಳನ್ನು ಪೋಷಿಸುವ ಕೆಲಸ ಮಾಡುತ್ತಿರುತ್ತಾರೆ. ಅಂತೆಯೇ ಡಿಸೆಂಬರ್ 25ಕ್ಕು ಸ್ನೇಹಿತರೊಟ್ಟಿಗೆ ಆಗಮಿಸಿದ್ದ ಸಲ್ಲು ತೋಟದಲ್ಲಿ ಕೆಲಸ ಮಾಡಬೇಕಾದರೆ ಅದೆಲ್ಲಿಂದಲೊ ಬಂದ ಹಾವು ಸಲ್ಮಾನ್ ಖಾನ್‌ಗೆ ಕಚ್ಚಿದೆ."

Salman Khan has been bitten by a non venomous snake at his farmhouse

ಇನ್ನು ಡಿಸೆಂಬರ್ 26ಕ್ಕೆ ಸಲ್ಮಾನ್ ಖಾನ್ ಅವರ ಹುಟ್ಟುಹಬ್ಬ. ಇದಕ್ಕಾಗಿ ಅಭಿಮಾನಿಗಳು ಸಾಕಷ್ಟು ತಯಾರಿ ನಡೆಸಿಕೊಂಡಿದ್ದರು. ಇದೀಗ ಸಲ್ಮಾನ್‌ಗೆ ಹಾವು ಕಚ್ಚಿರುವ ವಿಚಾರ ತಿಳಿದು ಗಾಬರಿಗೊಂಡಿರುವ ಅವರು, ಸಲ್ಲು ಹುಟ್ಟುಹಬ್ಬದ ದಿನ ನೆಚ್ಚಿನ ನಟನನ್ನು ನೋಡಲು ಸಾಧ್ಯವಾಗುತ್ತಾ ಇಲ್ವೋ ಎಂಬ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಹಾವು ಕಚ್ಚಿರುವ ಹಿನ್ನೆಲೆ ಸಲ್ಲು ಈ ಬಾರಿ ಬರ್ತ್‌ಡೇ ಆಚರಣೆಗೆ ಬ್ರೇಕ್ ಹಾಕಲಿದ್ದಾರೆ ಎಂಬ ಸುದ್ದಿ ಕೂಡ ಕೇಳಿಬರುತ್ತಿದ್ದು, ಈ ಬಗ್ಗೆ ಸಲ್ಮಾನ್ ಖಾನ್ ಇನ್ನು ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಕುಟುಂಬ ಸದಸ್ಯರು ಕೂಡ ಈ ಬಗ್ಗೆ ಎಲ್ಲೂ ಮಾತನಾಡಿಲ್ಲ. ಹೀಗಾಗಿ ಸಲ್ಮಾನ್ ಖಾನ್ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್ ಕಾಯುತ್ತಿದ್ದಾರೆ.

Salman Khan has been bitten by a non venomous snake at his farmhouse

More from Filmibeat

English summary
Salman Khan has been bitten by a non venomous snake at his farmhouse in panvel mumbai. he was rushed to a private hospital for treatment and is now discharged
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X