For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್‌ಗೆ ಪ್ರಾಣ ಬೆದರಿಕೆ: ಸ್ವಯಂ ರಕ್ಷಣೆಗಾಗಿ ಸಿಕ್ತು ಗನ್‌ ಲೈಸೆನ್ಸ್!

  |

  ಬಾಲಿವುಡ್ ಬ್ಯಾಡ್‌ಬಾಯ್ ಸಲ್ಮಾನ್ ಖಾನ್‌ಗೆ ಕೊನೆಗೂ ಮುಂಬೈ ಪೊಲೀಸರು ಗನ್ ಲೈಸೆನ್ಸ್ ನೀಡಿದ್ದಾರೆ. ಇತ್ತೀಚೆಗೆ ಸಲ್ಲುಗೆ ಬೆದರಿಕೆ ಪತ್ರಗಳು ಬಂದಿದ್ದ ವರದಿಯಾಗಿತ್ತು. ಈ ಹಿನ್ನೆಲೆ ನಟ ಗನ್ ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದರು.

  ಪ್ರಾಣ ಬೆದರಿಕೆ ಇರುವ ಹಿನ್ನಲೆಯಲ್ಲಿ ಸ್ವಯಂ ರಕ್ಷಣೆಗಾಗಿ ಸಲ್ಮಾನ್ ಖಾನ್‌ಗೆ ಗನ್ ಲೈಸೆನ್ಸ್ ನೀಡಲಾಗಿದೆ. ಕೆಲ ದಿನಗಳ ಹಿಂದೆ ಪಂಜಾಬಿ ಗಾಯಕ ಹಾಗೂ ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಹತ್ಯೆಗೀಡಾಗಿದ್ದರು. ಇದರ ಬೆನ್ನಲ್ಲೇ ನಟ ಸಲ್ಮಾನ್ ಖಾನ್ ಹಾಗೂ ಅವರ ತಂದೆ ಸಲೀಂ ಖಾನ್‌ರನ್ನು ಕೊಲ್ಲುವುದಾಗಿ ಬೆದರಿಕೆ ಪತ್ರ ಬಂದಿದ್ದವು. ಸಿಧು ಮೂಸೆವಾಲಾ ಹತ್ಯೆಯ ಹಿನ್ನೆಲೆಯಲ್ಲಿ ಈ ಬೆದರಿಕೆ ಪತ್ರವನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ಹೀಗಾಗಿ ಸಲ್ಮಾನ್‌ ಖಾನ್‌ಗೆ ಭದ್ರತೆಯನ್ನು ಹೆಚ್ಚಿಸಲಾಗಿತ್ತು.

  ಜೀವ ಬೆದರಿಕೆ ಹಿನ್ನೆಲೆ ಬಂದೂಕು ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಿದ ಸಲ್ಮಾನ್ ಖಾನ್ಜೀವ ಬೆದರಿಕೆ ಹಿನ್ನೆಲೆ ಬಂದೂಕು ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಿದ ಸಲ್ಮಾನ್ ಖಾನ್

  ಜುಲೈ 22ರಂದು ಸಲ್ಲು ಮುಂಬೈ ಪೊಲೀಸ್ ಕಮೀಷನರ್ ವಿವೇಕ್ ಫನ್ಸಾಲ್ಕರ್‌ರನ್ನು ಭೇಟಿ ಮಾಡಿ ಸ್ವಯಂ ರಕ್ಷಣೆಗಾಗಿ ಹಾಗೂ ಕುಟುಂಬ ಸದಸ್ಯರ ರಕ್ಷಣೆಗಾಗಿ ಶಸ್ತ್ರಾಸ್ತ್ರವನ್ನು(ಗನ್) ಇಟ್ಟುಕೊಳ್ಳಲು ಪರವಾನಗಿ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಪರವಾನಗಿ ನೀಡುವ ಪ್ರಾಧಿಕಾರವೂ ಈ ಬಗ್ಗೆ ತನಿಖೆ ನಡೆಸಿ ಈಗ ಒಪ್ಪಿಗೆ ನೀಡಿದೆ. ಮೂಲಗಳ ಪ್ರಕಾರ, ಈಗಾಗಲೇ ಸಲ್ಮಾನ್ ಖಾನ್ ಆಪ್ತರು ಕಮೀಷನರ್ ಕಚೇರಿಯಿಂದ ಶಸ್ತ್ರಾಸ್ತ್ರ ಪರವಾನಗಿ ಪಡೆದುಕೊಂಡಿದ್ದಾರೆ ಎನ್ನಲಾಗ್ತಿದೆ.

   ಸಲ್ಲುಗೆ ಪ್ರಾಣ ಬೆದರಿಕೆ ಒಡ್ಡಿದ್ದು ಯಾರು?

  ಸಲ್ಲುಗೆ ಪ್ರಾಣ ಬೆದರಿಕೆ ಒಡ್ಡಿದ್ದು ಯಾರು?

  ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಾರೆನ್ಸ್ ಬಿಷ್ಣೋಯಿ ವಿಚಾರಣೆ ವೇಳೆ ಸಾಕಷ್ಟು ವಿಚಾರಗಳನ್ನು ಬಾಯಿಬಿಟ್ಟಿದ್ದಾರೆ. ಕೃಷ್ಣಮೃಗ ಬೇಟೆ ವಿಚಾರಕ್ಕೆ ಸಂಬಂಧಿಸಿ ಸಲ್ಲು ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿಯೂ ಹೇಳಿದ್ದಾರೆ. ಕೃಷ್ಣಮೃಗಗಳನ್ನು ಬಿಷ್ಣೋಯಿ ಸಮುದಾಯದವರು ಪವಿತ್ರವೆಂದು ಪರಿಗಣಿಸುತ್ತಾರೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್‌ಗೆ ಜೈಲು ಶಿಕ್ಷೆ ವಿಧಿಸಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೇ ವಿಷಯಕ್ಕಾಗಿ ಲಾರೆನ್ಸ್ ಬಿಶ್ಣೋಯಿ, ಸಲ್ಮಾನ್ ಖಾನ್‌ರನ್ನು ಟಾರ್ಗೆಟ್ ಮಾಡಿದ್ದಾರೆ ಅನ್ನಲಾಗಿದೆ.

  ಆಟದಲ್ಲಿ ನಮ್ಮನ್ನು ಯಾವಾಗಲೂ ಸೋಲಿಸುತ್ತಾರೆ ಸುದೀಪ್: ಸಲ್ಮಾನ್ ಖಾನ್ಆಟದಲ್ಲಿ ನಮ್ಮನ್ನು ಯಾವಾಗಲೂ ಸೋಲಿಸುತ್ತಾರೆ ಸುದೀಪ್: ಸಲ್ಮಾನ್ ಖಾನ್

   ಸಲೀಂ ಖಾನ್‌ಗೆ ಬೆದರಿಕೆ ಪತ್ರ

  ಸಲೀಂ ಖಾನ್‌ಗೆ ಬೆದರಿಕೆ ಪತ್ರ

  ಕೆಲ ದಿನಗಳ ಹಿಂದೆ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಬೆಳಗ್ಗೆ ವಾಕಿಂಗ್ ಮುಗಿಸಿ ಬಾಂದ್ರಾ ಬಸ್‌ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ವೇಳೆ ಅವರಿಗೆ ಬೆದರಿಕೆ ಪತ್ರ ಬಂದಿತ್ತು ಎನ್ನಲಾಗಿದೆ. ಗಾಯಕ ಸಿಧು ಮೂಸೆವಾಲಾ ಅವರನ್ನು ಕೊಂದ ರೀತಿಯಲ್ಲೇ ಸಲ್ಲು ಮತ್ತವರ ತಂದೆಯನ್ನು ಕೊಲ್ಲುವುದಾಗಿ ಪತ್ರದಲ್ಲಿ ಬರೆಯಲಾಗಿತ್ತಂತೆ.

   ಸಲ್ಮಾನ್ ಬಳಿ ಬುಲೆಟ್‌ ಪ್ರೋಫ್ ಕಾರು

  ಸಲ್ಮಾನ್ ಬಳಿ ಬುಲೆಟ್‌ ಪ್ರೋಫ್ ಕಾರು

  ಬೆದರಿಕೆ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಬಾಡಿಗಾರ್ಡ್‌ಗಳ ಸಂಖ್ಯೆ ಹೆಚ್ಚಿಸಿರುವ ಸಲ್ಲು, ಬುಲೆಟ್ ಪ್ರೋಫ್ ಕಾರು ಖರೀದಿಸಿದ್ದಾರೆ ಎಂದು ಕೆಲ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

   ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯ

  ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯ

  ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ಸಲ್ಮಾನ್ ಖಾನ್ ಸದ್ಯ 'ಟೈಗರ್‌-3' ಹಾಗೂ 'ಪಠಾಣ್' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. 'ಟೈಗರ್'ಸರಣಿಯ ಮೂರನೇ ಚಿತ್ರದಲ್ಲಿ ಹೀರೊ ಆಗಿ ನಟಿಸ್ತಿದ್ದು, ಶಾರುಖ್ ಖಾನ್ ನಟನೆಯ 'ಪಠಾಣ್' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್‌ಬಾಸ್‌ ಸೀಸನ್‌ 16ರ ನಿರೂಪಣೆಗೂ ಸಲ್ಲು ಸಿದ್ಧತೆ ನಡೆಸಿದ್ದಾರೆ.

  English summary
  Salman Khan Has Been Issued An Arms License After He Got Death Threat Letter Recently. Know More.
  Monday, August 1, 2022, 14:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X