For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಕ್ರೇಸಿ ಸ್ಟಂಟ್ ಗೆ ಅಭಿಮಾನಿಗಳು ಫಿದಾ

  |
  ಸಲ್ಮಾನ್ ಖಾನ್ ಕ್ರೇಸಿ ಸ್ಟಂಟ್ ಗೆ ಅಭಿಮಾನಿಗಳು ಫಿದಾ | FILMIBEAT KANNADA

  ಬಾಲಿವುಡ್ ಬ್ಯಾಡ್ ಭಾಯ್ ಸಲ್ಮಾನ್ ಖಾನ್ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳ ಜೊತೆಗೆ ಫಿಟ್ ನೆಸ್ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಜಿಮ್ ನಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಮಾಡುವ ಮೂಲಕ ಯುವಕರ ಗಮನ ಸೆಳೆಯುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಇಬ್ಬರು ಬಾಡಿಗಾರ್ಡ್ಸ್ ಅನ್ನು ಕಾಲಿನಲ್ಲಿ ಲಿಫ್ಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದ ಸಲ್ಲು ಈಗ ಮತ್ತೊಂದು ಸಾಹಸ ಮಾಡಿ ಅಚ್ಚರಿ ಮೂಡಿಸಿದ್ದಾರೆ.

  53ನೇ ವಯಸ್ಸಿನಲ್ಲು ಚಿರ ಯುವಕನಂತೆ ಕಾಣುವ ಬಾಲಿವುಡ್ ನ ಮೋಸ್ಟ್ ಬ್ಯಾಚುಲರ್ ಸಲ್ಮಾನ್ ಖಾನ್, ಸ್ವಿಮ್ಮಿಂಗ್ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ವಿಮ್ಮಿಂಗ್ ಮಾಡೋದ್ರಲ್ಲಿ ಏನು ವಿಶೇಷ ಎಂದುಕೊಳ್ಳುತ್ತಿದ್ದೀರಾ. ಇದೆ ಯಾಕಂದ್ರೆ, ಸಲ್ಲು ಮಾಡಿರುವ ಸಾಹಸ ನಿಜಕ್ಕು ಮೈ ಜುಮ್ ಎನಿಸುತ್ತೆ.

  ಬಾಡಿಗಾರ್ಡ್ಸ್ ಜೊತೆ ಸಲ್ಮಾನ್ ಖಾನ್ ಕ್ರೇಜಿ ವರ್ಕ್ ಔಟ್

  ಸ್ವಿಮ್ಮಿಂಗ್ ಪೂಲ್ ಬಳಿ ಇರುವ ಎತ್ತರದ ಬಂಡೆಯನ್ನು ಹತ್ತಿ ಸಲ್ಮಾನ್ ಪೂಲ್ ಗೆ ಬ್ಯಾಕ್ ಜಂಪ್ ಮಾಡಿದ್ದಾರೆ. ಸಲ್ಲು ಭಾಯ್ ಸಾಹಸ ನೋಡಿದ ಅಭಿಮಾನಿಗಳು ಬೆರಗಾಗಿದದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಅಮೇಜಿಂಗ್ ಎಂದು ಕಮೆಂಟ್ಸ್ ಗಳ ಸುರಿಮಳೆ ಹರಿಸುತ್ತಿದ್ದಾರೆ. ಜೊತೆಗೆ ಸಿಕ್ಕಾಪಟ್ಟೆ ಲೈಕ್ಸ್ ಕೂಡ ಒತ್ತಿದ್ದಾರೆ.

  ಸಲ್ಮಾನ್ ಖಾನ್ ಈ ಕ್ರೇಸಿ ಸ್ಟಂಟ್ ಗೆ ಅನೇಕರು ಫಿದಾ ಆಗಿದ್ದಾರೆ. ಸಲ್ಲು ಭಾಯ್ ಸದ್ಯ 'ದಬಾಂಗ್-3' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತಿಚೀಗಷ್ಟೆ ರಿಲೀಸ್ ಆದ 'ಭಾರತ್' ಸಿನಿಮಾ ಉತ್ತಮ ಪ್ರದರ್ಶನ ಕಾಣುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದೆ.

  English summary
  Bollywood actor Salman Khan has been sharing video a jumping into a pool. Salman performs a back flip into the water.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X