For Quick Alerts
  ALLOW NOTIFICATIONS  
  For Daily Alerts

  ಇಲ್ಲಿ ಯಶ್, ಅಲ್ಲಿ ಸಲ್ಮಾನ್: 25 ಸಾವಿರ ಕಾರ್ಮಿಕರ ಖಾತೆಗೆ ಹಣ ಜಮಾ

  |

  ಲಾಕ್‌ಡೌನ್ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸಿನಿ ಕಾರ್ಮಿಕರಿಗೆ ಹಲವು ಸ್ಟಾರ್‌ಗಳು ಸಹಾಯ ಮಾಡಿದ್ದರು. ಸೋನು ಸೂದ್, ಅಕ್ಷಯ್ ಕುಮಾರ್, ಅಜಯ್ ದೇವಗನ್, ತಮಿಳಿನಲ್ಲಿ ಸೂರ್ಯ, ಕಾರ್ತಿ, ಕನ್ನಡದಲ್ಲಿ ಯಶ್, ಪುನೀತ್ ರಾಜ್ ಕುಮಾರ್, ಶಿವಣ್ಣ ಹೀಗೆ ಆಯಾ ಇಂಡಸ್ಟ್ರಿಯ ನಟರು ಕಾರ್ಮಿಕರಿಗೆ ನೆರವು ನೀಡಿರುವ ಬಗ್ಗೆ ವರದಿಯಾಗಿದೆ.

  ಬಾಲಿವುಡ್‌ ನಟ ಸಲ್ಮಾನ್ ಖಾನ್ ಸತತವಾಗಿ ಸಿನಿ ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಸಾಹಸ ಕಲಾವಿದರಿಗೆ ಧನ ಸಹಾಯ ಮಾಡಿದ ಸಲ್ಮಾನ್ ಖಾನ್, ಈಗ 25 ಸಾವಿರ ಕಾರ್ಮಿಕರ ಖಾತೆಗೆ ಹಣ ಜಮಾ ಮಾಡಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ. ಸ್ಯಾಂಡಲ್‌ವುಡ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಸುಮಾರು 3 ಸಾವಿರ ಕಾರ್ಮಿಕರಿಗೆ ತಲಾ 5 ಸಾವಿರ ನೀಡಿದ್ದರು. ಈಗ ಸಲ್ಮಾನ್ ಖಾನ್ ಸಹ ಅದೇ ಮಾರ್ಗ ಅನುಸರಿಸಿ 25 ಸಾವಿರ ಕಾರ್ಮಿಕರಿಗೆ ಸಹಾಯ ಮಾಡಿದ್ದಾರೆ. ಮುಂದೆ ಓದಿ...

  25 ಸಾವಿರ ಕುಟುಂಬಗಳಿಗೆ ಸಲ್ಲು ನೆರವು

  25 ಸಾವಿರ ಕುಟುಂಬಗಳಿಗೆ ಸಲ್ಲು ನೆರವು

  ಕೊರೊನಾದಿಂದ ಸಂಕಷ್ಟದಲ್ಲಿರುವ ಸುಮಾರು 25 ಸಾವಿರ ಕುಟುಂಬಗಳಿಗೆ ತಲಾ 1500 ರೂಪಾಯಿಯಂತೆ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾವಣೆ ಮಾಡಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇದಕ್ಕಾಗಿ ಸಲ್ಮಾನ್ ಖಾನ್ 3.75 ಕೋಟಿ ಹಣ ಖರ್ಚು ಮಾಡುತ್ತಿದ್ದಾರೆ ಎನ್ನಲಾಗಿದೆ.

  ಸ್ಟಂಟ್ ಕಲಾವಿದರ ಸಹಾಯಕ್ಕೆ ಧಾವಿಸಿದ ನಟ ಸಲ್ಮಾನ್ ಖಾನ್ಸ್ಟಂಟ್ ಕಲಾವಿದರ ಸಹಾಯಕ್ಕೆ ಧಾವಿಸಿದ ನಟ ಸಲ್ಮಾನ್ ಖಾನ್

  ನೌಕರರ ಸಂಘದಿಂದ ಮಾಹಿತಿ

  ನೌಕರರ ಸಂಘದಿಂದ ಮಾಹಿತಿ

  ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ನೌಕರರ (ಎಫ್‌ವೈಸಿಇ) ಅಧ್ಯಕ್ಷ ಬಿ.ಎನ್ ತಿವಾರಿ ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿದ್ದು ಸಲ್ಲು ಭಾಯ್‌ಗೆ ಧನ್ಯವಾದ ತಿಳಿಸಿದ್ದಾರೆ. ''ಸಲ್ಮಾನ್ ಖಾನ್ ಹಿಂದಿ ಚಿತ್ರರಂಗದ ದೊಡ್ಡ ನಟರು. ನಾವು ಕಷ್ಟದಲ್ಲಿದ್ದಾಗೆಲ್ಲಾ ಸಹಾಯ ಮಾಡಿದ್ದಾರೆ. ಮೊದಲ ಲಾಕ್‌ಡೌನ್ ಸಮಯದಲ್ಲೂ ನೆರವು ನೀಡಿದ್ದರು. ಅವರಿಗೆ ತುಂಬಾ ಕೃತಜ್ಞರಾಗಿರುತ್ತೇವೆ, ಭವಿಷ್ಯದಲ್ಲೂ ನಮ್ಮ ಜೊತೆ ಇರುವುದಾಗಿ ತಿಳಿಸಿದ್ದಾರೆ'' ಎಂದು ಹೇಳಿದರು.

  ಸಾಹಸ ಕಲಾವಿದರಿಗೆ ಸಹಾಯ ಮಾಡಿದ್ದರು

  ಸಾಹಸ ಕಲಾವಿದರಿಗೆ ಸಹಾಯ ಮಾಡಿದ್ದರು

  ಈ ಹಿಂದೆ ಕೊರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಕೆಲಸ ಮಾಡ್ತಿದ್ದ ವಾರಿಯರ್ಸ್‌ಗೆ ಸಲ್ಲು ಆಹಾರ ಕಿಟ್‌ಗಳು ವಿತರಿಸಿದ್ದರು. ಸಂಕಷ್ಟದಲ್ಲಿದ್ದ ಸಾಹಸ ಕಲಾವಿದರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಸುದ್ದಿ ವರದಿಯಾಗಿದೆ.

  June 28ಕ್ಕೆ ಪ್ರತಿಭಟನೆಗೆ ಸಜ್ಜಾಗುತ್ತಿರುವ ಕಲಾವಿದರ ಸಂಘ!! | Filmibeat Kannada
  ಕಳೆದ ವರ್ಷವೂ ಧನ ಸಹಾಯ ಮಾಡಿದ್ದ ಸಲ್ಲು

  ಕಳೆದ ವರ್ಷವೂ ಧನ ಸಹಾಯ ಮಾಡಿದ್ದ ಸಲ್ಲು

  ಕಳೆದ ವರ್ಷ ಲಾಕ್‌ಡೌನ್ ಆದ ಸಂದರ್ಭದಲ್ಲಿ ಸಿನಿಮಾ ಕಾರ್ಮಿಕರಿಗೆ ಸಲ್ಮಾನ್ ಖಾನ್ ಸಹಾಯ ಮಾಡಿದ್ದನ್ನು ಸ್ಮರಿಸಬಹುದು. ಕಾರ್ಮಿಕರ ಖಾತೆಗೆ ತಲಾ 3000 ರೂಪಾಯಿ ಜಮಾ ಮಾಡಿದ್ದರು. ಈಗ ಎರಡನೇ ಲಾಕ್‌ಡೌನ್‌ನಲ್ಲಿಯೂ ಸಲ್ಲು ಮಾನವೀಯತೆಯ ಕೆಲಸ ಮುಂದುವರಿಸಿದ್ದಾರೆ.

  English summary
  Salman Khan has honoured his commitment and once again transferred Rs 1500 each into the accounts of 25,000 cine workers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X