For Quick Alerts
  ALLOW NOTIFICATIONS  
  For Daily Alerts

  ದುಬೈನಲ್ಲಿದ್ದಾರೆ ಸಲ್ಮಾನ್‌ ಪತ್ನಿ-ಮಗಳು: ಸಹೋದರನನ್ನು ಪ್ರಶ್ನಿಸಿದ ಅರ್ಬಾಜ್ ಖಾನ್

  |

  55 ವರ್ಷದ ಸಲ್ಮಾನ್ ಖಾನ್ ಇನ್ನು ಮದುವೆ ಆಗಿಲ್ಲ. ಬಾಲಿವುಡ್ ಇಂಡಸ್ಟ್ರಿಯ 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಎಂದು ಹೇಳಲಾಗುತ್ತಿದೆ. ಗರ್ಲ್‌ ಫ್ರೆಂಡ್ಸ್ ವಿಚಾರಕ್ಕೆ ಬಂದ್ರೆ ಸಲ್ಲು ಜೊತೆ ಹಲವು ನಟಿಯರ ಹೆಸರು ಅಂಟಿಕೊಳ್ಳುತ್ತದೆ. ಕುತೂಹಲಕಾರಿ ವಿಚಾರ ಏನಪ್ಪಾ ಅಂದ್ರೆ, ಈ ಹಿಂದೆಯೊಮ್ಮೆ ಮದುವೆ ಮಾತುಕತೆ ಆಗಿ, ದಿನಾಂಕ ನಿಗದಿಯಾಗಿ ಇನ್ನೇನು ಮದುವೆ ಆಗಬೇಕಿತ್ತು, ಅಂತಹ ಸಮಯದಲ್ಲಿ ಸಲ್ಲು ವಿವಾಹ ಅರ್ಧಕ್ಕೆ ನಿಲ್ಲಿಸಿಬಿಟ್ಟರು ಎಂಬ ವಿಚಾರವೂ ಬಹಿರಂಗವಾಗಿತ್ತು.

  ಆದರೂ ಸಲ್ಮಾನ್ ಖಾನ್ ಏಕೆ ಮದುವೆ ಆಗಿಲ್ಲ ಎಂಬ ಪ್ರಶ್ನೆ ಪದೇ ಪದೇ ಕೇಳಿ ಬರ್ತಾನೆ ಇದೆ. ಈ ನಡುವೆ ಸಲ್ಮಾನ್‌ಗೆ ಮದುವೆ ಆಗಿದೆ, ಆದರೆ ಪತ್ನಿ ಮತ್ತು ಮಕ್ಕಳನ್ನು ರಹಸ್ಯವಾಗಿಟ್ಟುಕೊಂಡಿದ್ದಾರೆ ಎಂಬ ಚರ್ಚೆಯೂ ಸಹಜವಾಗಿದೆ. ಮತ್ತೊಂದು ಆಸಕ್ತಿಕರ ವಿಷಯ ಮುನ್ನೆಲೆಗೆ ಬಂದಿದೆ. ನಟ ಸಲ್ಮಾನ್ ಖಾನ್‌ಗೆ ದುಬೈನಲ್ಲಿ ಪತ್ನಿ ಮತ್ತು 17 ವರ್ಷದ ಮಗಳು ಇದ್ದಾರೆ ಎನ್ನುವ ಸಂಗತಿ ಹಾಟ್ ಟಾಪಿಕ್ ಆಗಿದೆ. ಈ ಕುರಿತು ಸ್ವತಃ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಪ್ರಶ್ನಿಸಿದ್ದಾರೆ. ಮುಂದೆ ಓದಿ....

  ಸದ್ಯದಲ್ಲೇ ಕತ್ರಿನಾ ಮದುವೆ: ಸುಳಿವು ನೀಡಿದ ಸಲ್ಮಾನ್ ಖಾನ್ ಡಿಸೈನರ್ ಸದ್ಯದಲ್ಲೇ ಕತ್ರಿನಾ ಮದುವೆ: ಸುಳಿವು ನೀಡಿದ ಸಲ್ಮಾನ್ ಖಾನ್ ಡಿಸೈನರ್

  ದುಬೈನಲ್ಲಿ ಸಲ್ಮಾನ್ ಪತ್ನಿ-ಮಗಳು?

  ದುಬೈನಲ್ಲಿ ಸಲ್ಮಾನ್ ಪತ್ನಿ-ಮಗಳು?

  ಅರ್ಬಾಜ್ ಖಾನ್ ನಿರೂಪಣೆ ಮಾಡುವ ಹೊಸ ಟಾಕ್ ಶೋನ ಮೊದಲ ಸಂಚಿಕೆಯಲ್ಲಿ ಸಹೋದರ ಸಲ್ಮಾನ್ ಖಾನ್ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂವಾದದಲ್ಲಿ ಸಲ್ಮಾನ್ ಖಾನ್‌ಗೆ ದುಬೈನಲ್ಲಿ ಪತ್ನಿ ಮತ್ತು 17 ವರ್ಷದ ಮಗಳು ಇದ್ದಾರೆ. ಸಲ್ಮಾನ್ ಅವರನ್ನು ಬಚ್ಚಿಟ್ಟಿದ್ದಾರೆ ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿರುವ ವಿಚಾರವನ್ನು ಸ್ವತಃ ಅರ್ಬಾಜ್ ಖಾನ್ ಹೇಳಿದರು. ಅದಕ್ಕೆ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದೂ ತಿಳಿಸಿದರು. ಈ ಆರೋಪಕ್ಕೆ ಸಲ್ಲು ಸ್ಪಷ್ಟನೆ ನೀಡಿದ್ದಾರೆ.

  ಎಷ್ಟು ದಿನ ಮೂರ್ಖರನ್ನಾಗಿಸುತ್ತೀರಾ?

  ಎಷ್ಟು ದಿನ ಮೂರ್ಖರನ್ನಾಗಿಸುತ್ತೀರಾ?

  ''ನಿನ್ನ ಪತ್ನಿ ನೂರ್ ಮತ್ತು 17 ವರ್ಷದ ಮಗಳು ದುಬೈನಲ್ಲಿದ್ದಾರೆ ಎಂದು ಭಾರತೀಯರಿಗೆ ತಿಳಿದಿದೆ. ಎಷ್ಟು ದಿನ ನಮ್ಮನ್ನೂ ಮೂರ್ಖರನ್ನಾಗಿಸುತ್ತೀಯಾ?'' ಎಂದು ನೆಟ್ಟಿಗ ಮಾಡಿದ್ದ ಕಾಮೆಂಟ್ ಅರ್ಬಾಜ್ ಓದಿ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಲ್ಮಾನ್, ''ಈ ಜನರು ತಿಳಿದವರು. ಇವೆಲ್ಲ ಅನಗತ್ಯ ವಿಷಯ. ಅವರು ಯಾರ ಕುರಿತು ಮಾತನಾಡುತ್ತಿದ್ದಾರೆ ಎಂದು ನನಗೆ ತಿಳಿದಿಲ್ಲ. ನನಗೆ ಪತ್ನಿ ಇಲ್ಲ, ನಾನು ಹಿಂದೂಸ್ತಾನ್ ಗ್ಯಾಲೆಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದೇನೆ. ನನ್ನ ಮೇಲೆ ನನ್ನ ತಂದೆ ವಾಸವಿದ್ದಾರೆ ಎಂದು ನಾನು ಅವರಿಗೆ ಪ್ರತಿಕ್ರಿಯೆ ಕೊಡ್ತೇನೆ ಎಂದು ಭಾವಿಸಿದ್ದಾರಾ? ಇದು ಭಾರತೀಯರಿಗೆ ತಿಳಿದಿದೆ'' ಎಂದು ಹೇಳಿದ್ದಾರೆ.

  ಸಲ್ಮಾನ್ ಕುಡಿದು ಹಿಂಸೆ ನೀಡುತ್ತಿದ್ದ ಕೆಟ್ಟ ಸಮಯದಲ್ಲೂ ಜೊತೆಗಿದ್ದೆ: ಬ್ರೇಕಪ್ ಬಗ್ಗೆ ಐಶ್ವರ್ಯಾ ಮಾತುಸಲ್ಮಾನ್ ಕುಡಿದು ಹಿಂಸೆ ನೀಡುತ್ತಿದ್ದ ಕೆಟ್ಟ ಸಮಯದಲ್ಲೂ ಜೊತೆಗಿದ್ದೆ: ಬ್ರೇಕಪ್ ಬಗ್ಗೆ ಐಶ್ವರ್ಯಾ ಮಾತು

  ಗೂಗಲ್‌ ಸರ್ಚ್‌ನಲ್ಲಿ ಹುಡುಕಾಟ ಹೆಚ್ಚಿದೆ

  ಗೂಗಲ್‌ ಸರ್ಚ್‌ನಲ್ಲಿ ಹುಡುಕಾಟ ಹೆಚ್ಚಿದೆ

  ಸಲ್ಲು ಭಾಯ್ ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಗೂಗಲ್‌ ಸರ್ಚ್‌ನಲ್ಲಿ ಬಹಳಷ್ಟು ಜನ ಹುಡುಕಾಡಿರುವುದು ನೋಡಬಹುದು. ಸಲ್ಮಾನ್ ಖಾನ್ ಪತ್ನಿ, ಸಲ್ಮಾನ್ ಖಾನ್ ಮಗಳು, ಸಲ್ಮಾನ್ ಖಾನ್ ಮದುವೆ, ಸಲ್ಮಾನ್ ಖಾನ್ ಪತ್ನಿ ನೂರ್, ಪತ್ನಿ ಫೋಟೋ ಹೀಗೆ ಹಲವು ಕೀ ವರ್ಡ್ಸ್ ಗೂಗಲ್‌ ಸರ್ಚ್‌ನಲ್ಲಿ ಸಾಮಾನ್ಯವಾಗಿದೆ.

  ಪಡ್ಡೆಗಳ ನಿದ್ದೆಗೆಡಿಸಿ ವಿಚಿತ್ರ ಸ್ಟೇಟಸ್ ಹಾಕಿದ ವಿಕ್ರಾಂತ್ ರೋಣ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್
  ಬಿಗ್ ಬಾಸ್ ಒಟಿಟಿ

  ಬಿಗ್ ಬಾಸ್ ಒಟಿಟಿ

  ಸಲ್ಮಾನ್ ಖಾನ್ ನಟನೆಯ 'ರಾಧೇ' ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಆದರೆ, ಚಿತ್ರ ಸೋಲು ಕಂಡಿದೆ. ಪ್ರಸ್ತುತ, ಬಿಗ್ ಬಾಸ್ 15ನೇ ಆವೃತ್ತಿಯನ್ನು ಶುರು ಮಾಡಿರುವ ಸಲ್ಲು ಜೊತೆಗೆ 'ಟೈಗರ್-3' ಸಿನಿಮಾ ಪ್ರಕಟಿಸಿದ್ದಾರೆ. ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಈ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮಹೇಶ್ ಶರ್ಮಾ ನಿರ್ದೇಶನವಿದೆ.

  English summary
  Salman khan have Wife and 17 year daughter in Dubai? He has react to man, who alleging he has wife and daughter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X