For Quick Alerts
  ALLOW NOTIFICATIONS  
  For Daily Alerts

  ಕೊರೊನಾದಿಂದ ತಂದೆಯನ್ನು ಕಳೆದುಕೊಂಡ ಕರ್ನಾಟಕದ ವಿದ್ಯಾರ್ಥಿಗೆ ಸಲ್ಮಾನ್ ಸಹಾಯ

  |

  ಭಾರತದಲ್ಲಿ ಕೊರೊನಾ ಎರಡನೇ ಅಲೆಯ ಭೀಕರತೆಗೆ ಲಕ್ಷಾಂತರ ಮಂದಿ ಬಲಿಯಾಗಿದ್ದಾರೆ. ದಿನಕ್ಕೆ ಸಾವಿರಾರು ಮಂದಿಯನ್ನು ಕೊರೊನಾ ಬಲಿ ಪಡೆಯುತ್ತಿದೆ. ಅನೇಕರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡು ನರಳಾಡುತ್ತಿದ್ದಾರೆ. ಕಷ್ಟದಲ್ಲಿರೊರಿಗೆ ಸಾಕಷ್ಟು ಮಂದಿ ಸಹಾಯ ಹಸ್ತ ಚಾಚುತ್ತಿದ್ದಾರೆ.

  ಅನೇಕ ಸಿನಿ ಸೆಲೆಬ್ರಿಟಿಗಳು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಕೋವಿಡ್ ನಿಂದ ತಂದೆಯನ್ನು ಕಳೆದುಕೊೆಂಡ ಕರ್ನಾಟಕದ 18 ವರ್ಷದ ಯುವಕನಿಗೆ ಸಲ್ಮಾನ್ ಖಾನ್ ನೆರವಿನ ಹಸ್ತ ಚಾಚಿದ್ದಾರೆ. ಯುವಕನ ಕುಟುಂಬಕ್ಕೆ ಏಕೈಕ ಆಧಾರಸ್ತಂಭವಾಗಿದ್ದ ತಂದೆಯನ್ನು ಕೊರೊನಾ ಕಿತ್ತುಕೊಂಡಿದೆ.

  ರುಚಿ ನೋಡಿ, ಗುಣಮಟ್ಟ ಪರೀಕ್ಷಿಸಿ ಆಹಾರ ಕಿಟ್ ವಿತರಿಸುತ್ತಿರುವ ಸಲ್ಮಾನ್ ಖಾನ್ರುಚಿ ನೋಡಿ, ಗುಣಮಟ್ಟ ಪರೀಕ್ಷಿಸಿ ಆಹಾರ ಕಿಟ್ ವಿತರಿಸುತ್ತಿರುವ ಸಲ್ಮಾನ್ ಖಾನ್

  ಜೀವನಕ್ಕೆ ಕಷ್ಟಪಡುತ್ತಿದ್ದ ಯುವಕ ಸಲ್ಮಾನ್ ಖಾನ್ ಬಳಿ ಸಹಾಯ ಕೇಳಿದ್ದಾರೆ. ಟ್ವಿಟ್ಟರ್ ಮೂಲಕ ಸಲ್ಮಾನ್ ಖಾನ್‌ಗೆ ತಿಳಿಸಿದ್ದಾರೆ. ಸಲ್ಮಾನ್ ಖಾನ್ ಬೀಯಿಂಗ್ ಎ ಹ್ಯೂಮನ್ ಟ್ರಸ್ಟ್‌ನಿಂದ ಕೊರೊನಾ ಸಂಕಷ್ಟದಲ್ಲಿರುವ ಮತ್ತು ಫ್ರೆಂಟ್ ಲೈನ್ ಕೆಲಸಗಾರರಿಗೆ ಅಹಾರ ಒದಗಿಸುತ್ತಿದ್ದಾರೆ. ಯುವ ಸೇನ ನಾಯಕ ರಾಹುಲ್ ಎಸ್ ಕನಲ್ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದೆ.

  ಕರ್ನಾಟಕ ಯುವಕನ ಪೋಸ್ಟ್ ಅನ್ನು ಗಮನಿಸಿ ಸಹಾಯಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಆಂಗ್ಲ ವೆಬ್ ಸೈಟ್ 'ಮಿಡ್ ಡೇ'ಗೆ ಮಾಹಿತಿ ನೀಡಿದ ಕನಲ್, 'ನಾವು ಯುವಕನಿಗೆ ಆಹಾರ ಸಾಮಗ್ರಿಗಳನ್ನು ಒದಗಿಸಿದ್ದೇವೆ. ಜೊತೆಗೆ ಶಿಕ್ಷಣಕ್ಕೆ ಬೇಕಾದ ಸಾಮಗ್ರಿಗಳನ್ನು ನೀಡಿದ್ದೇವೆ. ನಾವು ಅವನ ಜೊತೆ ಇರುತ್ತೇವೆ. ಅಗತ್ಯವಾದುದನ್ನು ಒದಗಿಸುತ್ತೇವೆ' ಎಂದಿದ್ದಾರೆ.

  Nagini 2 ಸೀರಿಯಲ್ ನಿಂದ ಮೋಹನ್ ಶಂಕರ್ ಹೊರಬರಲು ಕಾರಣವೇನು? | Filmibeat Kannada

  ಅಗತ್ಯವಿರುವ ಪ್ರತಿಯೊಬ್ಬ ಮನುಷ್ಯನಿಗೂ ಸಹಾಯ ಮಾಡಬೇಕೆಂದು ಸಲ್ಮಾನ್ ಖಾನ್ ಹೇಳಿರುವುದಾಗಿ ಕನಲ್ ಹೇಳಿದ್ದಾರೆ. ಸದ್ಯ ಸಲ್ಮಾನ್ ಖಾನ್ ತಂಡ ಆಹಾರ ಟ್ರಕ್ ಮೂಲಕ ಫ್ರಂಟ್ ಲೈನ್ ಕಾರ್ಮಿಕರಿಗೆ ಮತ್ತು ಅಗತ್ಯವಿರುವವರಿಗೆ ಮುಂಬೈನಲ್ಲಿ ಆಹಾರ ನೀಡುತ್ತಿದ್ದಾರೆ. ಜೊತೆಗೆ ಆಕ್ಸಿಜನ್ ಮತ್ತು ವೈದ್ಯಕೀಯ ಸಾಧನಗಳ ಸಹಾಯ ಮಾಡುತ್ತಿದ್ದಾರೆ.

  English summary
  Bollywood Actor Salman Khan helps 18 year old Karnataka boy who lost his father to Covid 19.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X