ಸಲ್ಮಾನ್ ಖಾನ್ ಬಗ್ಗೆ ವರ್ಮಾ ವಿಚಿತ್ರ ವರಸೆ ಟ್ವೀಟ್

Ram Gopal Varma
ಸೌತ್ ಇಂಡಿಯಾ ಮೂಲದ, ಬಾಲಿವುಡ್ ಖ್ಯಾತಿಯ ನಿರ್ದೇಶಕ ರಾಮ್ ಗೋಪಾಲ ವರ್ಮಾ ಇದೀಗ ತಮ್ಮ ಮಾತಿನ ವರಸೆಯನ್ನು ಸಾಕಷ್ಟು ಬದಲಾಯಿಸಿದ್ದಾರೆ. ತಮ್ಮ ನೇರ, ದಿಟ್ಟ ಹಾಗೂ ನಿರಂತವಲ್ಲದ ಮಾತುಗಳಿಂದ ಆಗಾಗ ಎಲ್ಲರ ಗಮನಸೆಳೆಯುವ ವರ್ಮಾ, ಇದೀಗ ತಮ್ಮ ಮಾತನ್ನು ಸದ್ಯದ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮೇಲೆ ಕೇಂದ್ರೀಕರಿಸಿದ್ದಾರೆ.

ಈ ಮೊದಲು ಸಾಕಷ್ಟು ಬಾಲಿವುಡ್ ಸೂಪರ್ ಸ್ಟಾರ್ ಗಳನ್ನು ಸಿಕ್ಕ ಸರಿಯಾದ ವೇಳೆಯಲ್ಲಿ ತಮ್ಮ ಮಾತಿನ ಛಾಟಿಯಿಂದ ತಿವಿದಿದ್ದ ರಾಮ್ ಗೋಪಾಲ್ ವರ್ಮಾ, ಈಗ ಮಾತ್ರ ತಮ್ಮನ್ನೇ ತಾವು ಗೇಲಿ ಮಾಡಿಕೊಂಡಂತೆ ಮಾತನಾಡಿದ್ದಾರೆ. ತಮ್ಮ ಟ್ವೀಟರಿನಲ್ಲಿ ಸಲ್ಲೂ ಕುರಿತು "ಈಗ ಸಲ್ಮಾನ್ ಖಾನ್ ಅವರ ಸಿನಿಮಾ ಫ್ಲಾಫ್ ಆಗಬೇಕೆಂದರೆ ಅವರಿಗೆ ಒಂದೇ ಒಂದು ದಾರಿಯಿದೆ, ಅದು ನನ್ನ ನಿರ್ದೆಶನದಲ್ಲಿ ಚಿತ್ರವೊಂದರಲ್ಲಿ ನಟಿಸುವುದು" ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ.

ಇತ್ತೀಚಿಗೆ ಬಂದಿದ್ದ ವರ್ಮಾ ಸಿನಿಮಾಗಳಾದ 'ಡಿಪಾರ್ಟ್ ಮೆಂಟಲ್' ಹಾಗೂ 'ನಾಟ್ ಅ ಲವ್ ಸ್ಟೋರಿ' ಎರಡೂ ಕೂಡ ಬಾಕ್ಸ್ ಆಫೀಸ್ ನಲ್ಲಿ ಸೋತಿದ್ದವು. ಹಾಕಿದ್ದ ಕಡಿಮೆ ಬಂಡವಾಳಕ್ಕೆ ತೀರಾ ಮೋಸವಾಗದಿದ್ದರೂ ಚಿತ್ರವಂತೂ ಗೆದ್ದಿರಲಿಲ್ಲ. ಹೀಗಾಗಿ ವರ್ಮಾ ಈ ಸೋಲನ್ನು ಕುರಿತು ತಮ್ಮ ಬಗ್ಗೆ ಗೇಲಿ ಮಾಡಿಕೊಂಡಿರಬಹುದು. ಅಥವಾ, ಮಹಾ ಬುದ್ಧಿವಂತರಾಗಿರುವ ವರ್ಮಾ, ಯಾರೋ ಹೇಳಿದ ಯಾವುದೋ ಮಾತಿಗೆ ಪ್ರತಿಕ್ರಿಯೆ ನೀಡಿರಬಹುದು.

ಅದೇನೆ ಇರಲಿ, ಒಂದು ಕಡೆ ವರ್ಮಾ ಈಗ ಬಾಲಿವುಡ್ ಸೂಪರ್ ಸ್ಟಾರ್ ಪಟ್ಟದಲ್ಲಿರುವ ಸಲ್ಮಾನ್ ಖಾನ್ ಅವರನ್ನು ಈ ರೀತಿ ಹೊಗಳಿದ್ದಾರೆ ಎನ್ನಲೂಬಹುದು. ಕಾರಣ, ವರ್ಮಾ ಯಾವತ್ತೇ ಇದ್ದರೂ ವಿಭಿನ್ನ. ಅವರ ಪ್ರಶಂಸೆ ಇರಲಿ ಅಥವಾ ಕೋಪವೇ ಇರಲಿ ಅದಕ್ಕೊಂದು ವಿಶಿಷ್ಟತೆ ಇದ್ದೇ ಇರುತ್ತದೆ. ಕೆಲವೊಮ್ಮೆ ವಿಪರೀತ ಅರ್ಥವೂ ಇರುತ್ತದೆ. ನೀವೇನಂತೀರಾ! (ಏಜೆನ್ಸೀಸ್)

More from Filmibeat

English summary
Ram Gopal Varma said that Salman Khan can get a flop if only he does a movie with him.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X