ಸಿನಿಮಾ, ಬಿಗ್ ಬಾಸ್ ಆಯ್ತು, ಇದೀಗ ವೆಬ್ ಸೀರಿಸ್ ಲೋಕದಲ್ಲಿ ಸಲ್ಮಾನ್ ಖಾನ್

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಸದ್ಯ 'ರಾಧೆ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಜೊತೆಗೆ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್-14 ನಲ್ಲಿಯೂ ನಿರತರಾಗಿದ್ದಾರೆ. ಈಗಾಗಲೇ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗಿದ್ದು, ಬಿಗ್ ಬಾಸ್ ಪ್ರೋಮೋ ರಿಲೀಸ್ ಮಾಡಲಾಗಿದೆ.

ಈ ನಡುವೆ ಸಲ್ಮಾನ್ ಖಾನ್ ಕಡೆಯಿಂದ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ. ಹೌದು, ಸಿನಿಮಾ, ರಿಯಾಲಿಟಿ ಶೋ ಅಂತ ಬ್ಯುಸಿ ಇರುವ ಸಲ್ಮಾನ್ ಖಾನ್ ಇದೀಗ ವೆಬ್ ಸೀರಿಸ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಸ್ಟಾರ್ ನಟರು ವೆಬ್ ಸೀರಿಸ್ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಈಗಾಗಲೇ ಬಹುತೇಕರು ವೆಬ್ ಸೀರಿಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಈಗ ಸಲ್ಮಾನ್ ಖಾನ್ ಕೂಡ ಎಂಟ್ರಿ ಕೊಟ್ಟಿದ್ದಾರೆ. ಮುಂದೆ ಓದಿ..

ಸಲ್ಮಾನ್ ಖಾನ್ ನಿರ್ಮಾಣದಲ್ಲಿ ವೆಬ್ ಸೀರಿಸ್

ಸಲ್ಮಾನ್ ಖಾನ್ ನಿರ್ಮಾಣದಲ್ಲಿ ವೆಬ್ ಸೀರಿಸ್

ಅಂದ್ಹಾಗೆ ಸಲ್ಮಾನ್ ಖಾನ್ ವೆಬ್ ಸೀರಿಸ್ ನಲ್ಲಿ ನಟಿಸುತ್ತಿಲ್ಲ. ವೆಬ್ ಸೀರಿಸ್ ನಿರ್ಮಾಣ ಮಾಡುತ್ತಿದ್ದಾರೆ. ತನ್ನ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ವೆಬ್ ಸೀರಿಸ್ ನಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ. ಜಮ್ಮು ಕಾಶ್ಮೀರ ಮೂಲದ ಕಿರುತೆರೆ ನಟ ಮತ್ತು ಮಾಡೆಲ್ ಉಮ್ಮರ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಸಲ್ಮಾನ್ ಖಾನ್ ವೆಬ್ ಸೀರಿಸ್ ನಲ್ಲಿ ಯುವ ಪ್ರತಿಭೆ

ಸಲ್ಮಾನ್ ಖಾನ್ ವೆಬ್ ಸೀರಿಸ್ ನಲ್ಲಿ ಯುವ ಪ್ರತಿಭೆ

ನಟನಾಗಬೇಕೆಂದು ದೊಡ್ಡ ಆಸೆ ಇಟ್ಟುಕೊಂಡಿರುವ ಉಮ್ಮರ್ ಖಾನ್ ಕನಸಿಗೆ ಜೀವ ತುಂಬಿದ್ದಾರೆ ಸಲ್ಮಾನ್ ಖಾನ್. ಉಮ್ಮರ್ ಖಾನ್ ಈಗಾಗಲೇ ಆಲ್ಬಮ್ ಸಾಂಗ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ದೆಹಲಿಯಲ್ಲಿ ಅಭಿನಯ ತರಬೇತಿ ಪಡೆದಿರುವ ಉಮ್ಮರ್ ತಮಿಳು ಸಿನಿಮಾದಲ್ಲಿಯೂ ನಟಿಸಿದ್ದಾರೆ.

ಸ್ಪೋರ್ಟ್ಸ್ ಬೇಸ್ಡ್ ಸೀರಿಸ್ ನಿರ್ಮಾಣ

ಸ್ಪೋರ್ಟ್ಸ್ ಬೇಸ್ಡ್ ಸೀರಿಸ್ ನಿರ್ಮಾಣ

ಸ್ಪೋರ್ಟ್ಸ್ ಬೇಸ್ಡ್ ಸೀರಿಸ್ ಮಾಡಬೇಕು ಎನ್ನುವುದು ಸಲ್ಮಾನ್ ಕನಸು. ದೇಸಿ ಕ್ರೀಡೆಯ ಬಗ್ಗೆ ವೆಬ್ ಸೀರಿಸ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸುಲ್ತಾನ್ ಮೂಲಕ ಕುಸ್ತಿ ಪಟುವಾಗಿ ಅಭಿಮಾನಿಗಳ ಮುಂದೆ ಬಂದಿದ್ದ ಸಲ್ಮಾನ್ ಇದೀಗ ತನ್ನ ನಿರ್ಮಾಣದ ವೆಬ್ ಸೀರಿಸ್ ಮೂಲಕ ದೇಸಿ ಕ್ರೀಡೆಗೆ ಒತ್ತು ನೀಡುತ್ತಿದ್ದಾರೆ. ಸದ್ಯ ವೆಬ್ ಸೀರಿಸ್ ಗೆ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿರುವ ಸಲ್ಲು ಮತ್ತು ತಂಡ ಮುಂದಿನ ವರ್ಷ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Recommended Video

Abhishek Ambarish ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ಕೊಟ್ಟ ದುನಿಯಾ ಸೂರಿ | Bad Manners | Oneindia Kannada
ಸಿನಿಮಾ ಶೂಟಿಂಗ್ ಪ್ರಾರಂಭಿಸಿದ ಸಲ್ಮಾನ್

ಸಿನಿಮಾ ಶೂಟಿಂಗ್ ಪ್ರಾರಂಭಿಸಿದ ಸಲ್ಮಾನ್

ಸಲ್ಮಾನ್ ಖಾನ್ ಸದ್ಯ ರಾಧೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ನಿಂದ ಸುಮಾರು 7 ತಿಂಗಳುಗಳ ಕಾಲ ಚಿತ್ರೀಕರಣ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಚಿತ್ರೀಕರಣಕ್ಕೆ ಹೊರಡಲು ಸಿದ್ಧರಾಗಿದ್ದಾರೆ. ಮುಂಬೈನಲ್ಲಿಯೇ ಚಿತ್ರೀಕರಣ ಮಾಡಲಿದ್ದು, 15 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ದಬಾಂಗ್-3 ಬಳಿಕ ಸಲ್ಮಾನ್ ನಟಿಸುತ್ತಿರುವ ಸಿನಿಮಾವಿದು.

More from Filmibeat

English summary
Actor Salman Khan is going to make his debut as a producer of a web series.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X