»   » ಶಾರೂಖ್ ಈ ಮಟ್ಟಕ್ಕೆ ಬೆಳೆಯೋಕೆ ಸಲ್ಮಾನ್ ಕಾರಣ!

ಶಾರೂಖ್ ಈ ಮಟ್ಟಕ್ಕೆ ಬೆಳೆಯೋಕೆ ಸಲ್ಮಾನ್ ಕಾರಣ!

Posted By:
Subscribe to Filmibeat Kannada

ಕಿಂಗ್ ಖಾನ್ ಶಾರೂಖ್ ಮತ್ತು ಸಲ್ಮಾನ್ ಖಾನ್ ಕಟ್ಟಾ ವೈರಿಗಳು. ಒಬ್ಬರನ್ನ ಕಂಡರೆ ಮತ್ತೊಬ್ಬರಿಗೆ ಆಗಲ್ಲ ಅನ್ನುವ ಸುದ್ದಿ ಜಮಾನದ್ದು. ಹಳೇ ವೈಷಮ್ಯಕ್ಕೆ ಎಳ್ಳುನೀರು ಬಿಟ್ಟು, ಇದೀಗ 'ಭಾಯಿ ಭಾಯಿ' ಅನ್ನುತ್ತಿರುವ ಶಾರೂಖ್-ಸಲ್ಮಾನ್ ರದ್ದು 'ಅವಿನಾಭಾವ ನಂಟು' ಅನ್ನುವುದಕ್ಕೆ ಅರ್ಪಿತಾ ಖಾನ್ ಮದುವೆ ಸಮಾರಂಭದ ಅಪರೂಪದ ಘಟನೆಗಳನ್ನು ನೆನಪಿಸಿಕೊಳ್ಳಿ.

ಉತ್ತಮ ಬಾಂಧವ್ಯ ಹೊಂದಿರುವ ಶಾರೂಖ್-ಸಲ್ಮಾನ್ ಸ್ನೇಹ ಇಂದು ನಿನ್ನೆಯದ್ದಲ್ಲ. ಬಾಲಿವುಡ್ ಗೆ ಕಾಲಿಟ್ಟಾಗಿನಿಂದಲೂ ಇಬ್ಬರೂ ಬೆಸ್ಟ್ ಫ್ರೆಂಡ್ಸ್. ಇಂದು ಬಾಲಿವುಡ್ ಗೆ ಬಾದ್ ಷಾ ಆಗಿರುವ ಶಾರೂಖ್, 'ಕಿಂಗ್ ಆಫ್ ರೋಮ್ಯಾನ್ಸ್' ಆಗುವುದಕ್ಕೆ ಬ್ಯಾಡ್ ಬಾಯ್ ಸಲ್ಮಾನ್ ಕಾರಣ! ಅಂದ್ರೆ ನೀವು ನಂಬಲೇಬೇಕು. [ಅಗ್ರಸ್ಥಾನದಿಂದ ಶಾರುಖ್ ಕೆಳಕ್ಕೆ ತಳ್ಳಿದ ಸಲ್ಮಾನ್]

salman-khan

ಹೌದು, ಬಾಲಿವುಡ್ ಗೆ ಶಾರೂಖ್ ಅಡಿಯಿಟ್ಟಾಗ ಸಿಗುತ್ತಿದ್ದದ್ದು ಬೆರಳೆಣಿಕೆಯ ಅವಕಾಶಗಳಷ್ಟೇ. 'ಹೀರೋ ಪಾತ್ರಗಳಿಗಿಂತ ಹೆಚ್ಚಾಗಿ ನೆಗೆಟಿವ್ ಶೇಡ್ ಇರುವಂಥ ಪಾತ್ರಗಳೇ ಶಾರೂಖ್ ಗೆ ಲಾಯಕ್ಕು', ಅಂತ ಬರೀ ಅಂತದ್ದೇ ಆಫರ್ ಗಳು ಹೆಚ್ಚಾಗಿ ಬರುತ್ತಿದ್ದವು. ಆಗ ಶಾರೂಖ್ ಗೆ ರೋಮ್ಯಾಂಟಿಕ್ ಇಮೇಜ್ ತಂದುಕೊಡುವಲ್ಲಿ ಯಶಸ್ವಿಯಾಗಿದ್ದು 'ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ' ಚಿತ್ರ.

'ಡಿ.ಡಿ.ಎಲ್.ಜೆ ಅಂತಹ ರೋಮ್ಯಾಂಟಿಕ್ ಸಿನಿಮಾಗೆ ಸೈಫ್ ಅಲಿ ಖಾನ್ ರಂತಹ ಚಾಕಲೇಟ್ ಬಾಯ್ ಮುಖಗಳು ಸೂಕ್ತ', ಅಂತ ಅಭಿಪ್ರಾಯ ಪಟ್ಟಿದ್ದ ಆದಿತ್ಯ ಛೋಪ್ರಾ, ಶಾರೂಖ್ ಬಗ್ಗೆ ಒಮ್ಮೆ ಯೋಚಿಸುವುದಕ್ಕೆ ಕಾರಣ ಸಲ್ಮಾನ್ ಖಾನ್. ನಿರ್ದೇಶಕ ಆದಿತ್ಯ ಛೋಪ್ರಾ, 'ರಾಜ್ ಮಲ್ಹೋತ್ರ' ಪಾತ್ರಕ್ಕೆ ಆಫರ್ ಮಾಡಿದಾಗ, ಅದಕ್ಕೆ ಒಪ್ಪಿಕೊಳ್ಳುವುದಕ್ಕೆ ಶಾರೂಖ್ ಮೊದಲು ಹಿಂದು ಮುಂದು ನೋಡಿದ್ರಂತೆ. [ಛೀ..ಇದೆಂಥ ಮಾಡಿಬಿಟ್ರು ಶಾರುಖ್-ಸಲ್ಮಾನ್!]

salman-khan2

ಯಾಕಂದ್ರೆ, ಅಷ್ಟರಲ್ಲಾಗಲೇ 'ಬಾಜಿಗರ್', 'ಡರ್', 'ಅಂಜಾಮ್' ಸಿನಿಮಾಗಳಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದ ಶಾರೂಖ್, 'ಚಾಕಲೇಟ್ ಬಾಯ್ ಆದ್ರೆ, ಜನ ಒಪ್ಪಿಕೊಳ್ಳುವುದಿಲ್ಲ', ಅಂತ ಹಿಂದೆ ಸರಿದ್ದಿದ್ದರಂತೆ. ಆಗ, ಶಾರೂಖ್ ಮನಸ್ಸು ಬದಲಾಯಿಸಿ, ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಡಿಸಿದವರು ಬಾಲಿವುಡ್ ಟೈಗರ್ ಸಲ್ಮಾನ್ ಖಾನ್.

ಶಾರೂಖ್ ಮೇಲೆ ಅಪಾರ ನಂಬಿಕೆ ಇಟ್ಟಿದ್ದ ಸಲ್ಮಾನ್, 'ರಾಜ್ ಪಾತ್ರಕ್ಕೆ ಶಾರೂಖ್ ಸೂಕ್ತ. ಶಾರೂಖ್ ಡಿ.ಡಿ.ಎಲ್.ಜೆ ಚಿತ್ರದಲ್ಲಿ ನಟಿಸಿದರೆ ಸಿನಿಮಾ ಸೂಪರ್ ಹಿಟ್ ಆಗುತ್ತೆ', ಅಂತ ಸಲ್ಮಾನ್ ಭವಿಷ್ಯ ನುಡಿದಿದ್ದರಂತೆ. ಸಲ್ಲು ಅಂದು ಆಡಿದ್ದ ಮಾತು ಅಕ್ಷರಶಃ ನಿಜವಾಗಿದೆ. ಡಿ.ಡಿ.ಎಲ್.ಜೆ ಸೂಪರ್ ಡ್ಯೂಪರ್ ಹಿಟ್ ಆಗಿದೆ. 1000 ವಾರಗಳ ಅಮೋಘ ಪ್ರದರ್ಶನ ಕಂಡಿದೆ. ['ಡಿ.ಡಿ.ಎಲ್.ಜೆ' ಚಿತ್ರಕ್ಕಿಂದು ಸಹಸ್ರ ಸಂಭ್ರಮ]

salman-khan3

ಇದೇ ಖುಷಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಶಾರೂಖ್ ಖಾನ್ ಈ ವಿಷಯವನ್ನು ಬಹಿರಂಗ ಪಡಿಸಿದರು. ತಮ್ಮ ವೃತ್ತಿ ಜೀವನಕ್ಕೆ ದೊಡ್ಡ ತಿರುವು ನೀಡಿದ ಸಲ್ಮಾನ್ ಬಗ್ಗೆ ಶಾರೂಖ್ ಕೊಂಡಾಡಿದರು. ಇದಕ್ಕೆ ಅಲ್ಲವೇ 'ಸ್ವಾರ್ಥವಿಲ್ಲದ ಸ್ನೇಹ ಎಲ್ಲದಕ್ಕಿಂತ ಮಿಗಿಲ್ಲು' ಅನ್ನುವುದು..?! (ಏಜೆನ್ಸೀಸ್)

English summary
Bollywood's All time Block-buster 'Dilwale Dulhaniya Le Jayenge' has completed 1000 weeks of successful run in Mumbai. On this occasion SRK has revealed few secrets of the Making of DDLJ. SRK said, the reason behind he playing lover boy in DDLJ is Salman Khan.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X