For Quick Alerts
  ALLOW NOTIFICATIONS  
  For Daily Alerts

  ಟೈಗರ್ 3 ಸಿನಿಮಾ ಮುಹೂರ್ತ, ಮಾರ್ಚ್ ತಿಂಗಳಲ್ಲಿ ಚಿತ್ರೀಕರಣ ಶುರು

  |

  ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ನಟಿಸುತ್ತಿರುವ ಟೈಗರ್ 3 ಚಿತ್ರದ ಮುಹೂರ್ತ ನಡೆದಿದೆ ಎಂಬ ಮಾಹಿತಿ ಹೊರಬಿದ್ದಿದೆ. ಯಶ್ ರಾಜ್ ಫಿಲಂಸ್ ಸ್ಟುಡಿಯೋದಲ್ಲಿ ಚಿತ್ರದ ಪೂಜೆ ನೆರವೇರಿದ್ದು, ಚಿತ್ರದ ಪ್ರಮುಖ ಕಲಾವಿದರು ಭಾಗವಹಿಸಿದ್ದರು.

  ಟೈಗರ್ 3 ಸಿನಿಮಾದ ಶೂಟಿಂಗ್ ಮಾರ್ಚ್ 8 ರಿಂದ ಮುಂಬೈನಲ್ಲಿ ಆರಂಭವಾಗಲಿದೆ. ಮನೀಶ್ ಶರ್ಮಾ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ.

  ಕ್ಯಾನ್ಸರ್ ನಿಂದ ಬಳಲುತ್ತಿರುವ ರಾಖಿ ಸಾವಂತ್ ತಾಯಿಗೆ ಸಲ್ಮಾನ್ ಸಹಾಯ: ಧನ್ಯವಾದ ತಿಳಿಸಿದ ನಟಿಕ್ಯಾನ್ಸರ್ ನಿಂದ ಬಳಲುತ್ತಿರುವ ರಾಖಿ ಸಾವಂತ್ ತಾಯಿಗೆ ಸಲ್ಮಾನ್ ಸಹಾಯ: ಧನ್ಯವಾದ ತಿಳಿಸಿದ ನಟಿ

  ಅಂದ್ಹಾಗೆ, ಯಶ್ ರಾಜ್ ಫಿಲಂಸ್ ಸ್ಟುಡಿಯೋದಲ್ಲಿ ಶಾರೂಖ್ ಖಾನ್ ನಟನೆಯ ಪಠಾಣ್ ಚಿತ್ರೀಕರಣ ನಡೆಯುತ್ತಿದ್ದು, ಈ ಸಿನಿಮಾದಲ್ಲಿ ಸಲ್ಮಾನ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಫೆಬ್ರವರಿ 25 ರಂದು ಪಠಾಣ್ ಶೂಟಿಂಗ್‌ನಲ್ಲಿ ಸಲ್ಮಾನ್ ಮತ್ತು ಶಾರೂಖ್ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಟೈಗರ್ 3 ಪೂಜೆ ಮಾಡಲಾಗಿದೆಯಂತೆ,

  ವಿಶೇಷ ಅಂದ್ರೆ ಟೈಗರ್ 3 ಚಿತ್ರದಲ್ಲಿ ಸಲ್ಮಾನ್ ಖಾನ್ ಎದುರು ಪ್ರಮುಖ ಖಳನಾಯಕನ ಪಾತ್ರದಲ್ಲಿ ಇಮ್ರಾನ್ ಹಶ್ಮಿ ಕಾಣಿಸಿಕೊಳ್ಳಲಿದ್ದಾರೆ. ರಾ ಏಜೆಂಟ್ ಪಾತ್ರದಲ್ಲಿ ಸಲ್ಲು ನಟಿಸುತ್ತಿದ್ದರೆ, ಐಎಸ್‌ಐ ಏಜೆಂಟ್ ಆಗಿ ನಟಿ ಕತ್ರಿನಾ ಬಣ್ಣ ಹಚ್ಚುತ್ತಿದ್ದಾರೆ.

  ಮಾರ್ಚ್ ತಿಂಗಳಲ್ಲಿ ಇಮ್ರಾನ್ ಹಶ್ಮಿ ಮುಂಬೈನಲ್ಲಿ ಟೈಗರ್ ಸಿನಿಮಾ ಶೂಟಿಂಗ್ ಮಾಡಲಿದ್ದು, ಜೂನ್‌ನಲ್ಲಿ ಯುರೋಪ್‌ಗೆ ತೆರಳಲಿದ್ದಾರೆ.

  ಅಲಿಯಾ ಭಟ್ v/s ಪ್ರಭಾಸ್; ಬಾಕ್ಸ್ ಆಫೀಸ್ ನಲ್ಲಿ ಮೆಗಾವಾರ್ಅಲಿಯಾ ಭಟ್ v/s ಪ್ರಭಾಸ್; ಬಾಕ್ಸ್ ಆಫೀಸ್ ನಲ್ಲಿ ಮೆಗಾವಾರ್

  ಟೈಗರ್ ಸಿನಿಮಾ ಭಾರಿ ದೊಡ್ಡ ಬಜೆಟ್‌ನಲ್ಲಿ ತಯಾರಾಗುತ್ತಿದೆ. ಸುಮಾರು 350 ಕೋಟಿ ವೆಚ್ಚದಲ್ಲಿ ಟೈಗರ್ ಸರಣಿ ಸಿದ್ಧವಾಗುತ್ತಿದೆ. 'ಬ್ಯಾಂಡ್ ಬಜಾ ಭಾರತ್' ಸಿನಿಮಾ ಖ್ಯಾತಿಯ ಮನೀಶ್ ಶರ್ಮಾ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದಕ್ಕೂ ಮುಂಚೆ ಟೈಗರ್ ಸರಣಿಯನ್ನು ಕ್ರಮವಾಗಿ ಕಬೀರ್ ಖಾನ್, ಅಲಿ ಅಬ್ಬಾಜ್ ಜಾಫರ್ ನಿರ್ದೇಶಿಸಿದ್ದರು.

  ರಶ್ಮಿಕಾ ಮುಂಬೈನಲ್ಲಿ ಖರೀದಿಸಿದ ಮನೆಯ ಬೆಲೆ ಎಷ್ಟು ಕೋಟಿ ಗೊತ್ತಾ? | Filmibeat Kannada
  English summary
  Salman Khan, Katrina Kaif and Emraan Hashmi attended the Pooja of Tiger 3 along with the director, Maneesh Sharma.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X