For Quick Alerts
  ALLOW NOTIFICATIONS  
  For Daily Alerts

  ರಷ್ಯಾಗೆ ತೆರಳುತ್ತಿರುವ ಸಲ್ಮಾನ್ ಖಾನ್-ಕತ್ರಿನಾ ಕೈಫ್ ಜೋಡಿ

  |

  ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಮತ್ತೊಮ್ಮೆ ಒಂದಾಗಿದ್ದು, ಟೈಗರ್ 3 ಸಿನಿಮಾದಲ್ಲಿ ಟೈಗರ್ ಹಾಗೂ ಜೋಯಾ ಪಾತ್ರಗಳಲ್ಲಿ ಮುಂದುವರಿಯುತ್ತಿದ್ದಾರೆ. ಅದಾಗಲೇ ಶೂಟಿಂಗ್ ಶುರು ಮಾಡಿರುವ ಚಿತ್ರತಂಡ ಈಗ ರಷ್ಯಾಗೆ ತೆರಳುತ್ತಿದೆ. ಆಗಸ್ಟ್ 18ರಂದು ರಷ್ಯಾಗೆ ಹೋಗುತ್ತಿದ್ದು, ಸುಮಾರು 45 ದಿನಗಳ ಕಾಲ ವಿದೇಶದಲ್ಲಿ ಚಿತ್ರೀಕರಣ ಮಾಡಲಾಗುವುದು.

  ಮನಿಶ್ ಶರ್ಮಾ ಈ ಚಿತ್ರ ನಿರ್ದೇಶನ ಮಾಡ್ತಿದ್ದು, ಇಮ್ರಾನ್ ಹಶ್ಮಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಳೆದ ಜುಲೈ ತಿಂಗಳಲ್ಲಿ 'ಟೈಗರ್-3' ಚಿತ್ರೀಕರಣ ಮುಂಬೈನ ಅಂಧೇರಿಯಲ್ಲಿ ನಡೆದಿತ್ತು. ಎರಡು ವಾರಗಳ ಕಾಲ ಶೂಟಿಂಗ್ ಮಾಡಲಾಗಿತ್ತು. ಸಲ್ಮಾನ್ ಖಾನ್-ಕತ್ರಿನಾ ಪಾಲ್ಗೊಂಡಿದ್ದರು.

  ದಕ್ಷಿಣದತ್ತ ಬಂದ ಸಲ್ಮಾನ್ ಖಾನ್: ಸ್ಟಾರ್ ನಟನೊಂದಿಗೆ ನಟನೆದಕ್ಷಿಣದತ್ತ ಬಂದ ಸಲ್ಮಾನ್ ಖಾನ್: ಸ್ಟಾರ್ ನಟನೊಂದಿಗೆ ನಟನೆ

  ಇದೀಗ, ಅಂತಾರಾಷ್ಟ್ರೀಯ ಶೆಡ್ಯೂಲ್‌ನಂತೆ ರಷ್ಯಾಗೆ ತೆರಳುತ್ತಿದ್ದು, ಅದಕ್ಕಾಗಿ ಎಲ್ಲಾ ಸಿದ್ಧತೆ ನಡೆದಿದೆ. ಕೋವಿಡ್ ಹಿನ್ನೆಲೆ ಅಗತ್ಯ ಮುಂಜಾಗ್ರತೆ ಕ್ರಮ ಸಹ ಜರುಗಿಸಲಾಗಿದೆ. ಎಲ್ಲರೂ ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆದಿತ್ಯ ಚೋಪ್ರಾ ಮತ್ತು ಯಶ್ ರಾಜ್ ಫಿಲಂಸ್ ಸಂಸ್ಥೆ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ರಷ್ಯಾದಲ್ಲಿ ಆಕ್ಷನ್ ದೃಶ್ಯಗಳ ಚಿತ್ರೀಕರಣ ನಡೆಯಲಿದೆ ಎಂದು ಯಶ್ ರಾಜ್ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ.

  ರಷ್ಯಾದಲ್ಲಿ ಮಾತ್ರವಲ್ಲದೇ ಆಸ್ಟ್ರಿಯಾ, ಟರ್ಕಿ ಸೇರಿದಂತೆ ಇತರೆ ಐದು ದೇಶಗಳಲ್ಲಿ ಟೈಗರ್ 3 ಶೂಟಿಂಗ್ ನಡೆಯಲಿದೆ. ಮೊದಲ ಹಂತವಾಗಿ ರಷ್ಯಾದಲ್ಲಿ ಪ್ಲಾನ್ ಮಾಡಲಾಗಿದೆ ಎಂದು ನಿರ್ಮಾಪಕ ಆದಿತ್ಯ ಚೋಪ್ರಾ ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

  ಅಂದ್ಹಾಗೆ, ಟೈಗರ್ ಸಿನಿಮಾದ ಸರಣಿಯ ಮುಂದುವರಿದ ಭಾಗ ಟೈಗರ್ 3. ಕಬೀರ್ ಖಾನ್ ನಿರ್ದೇಶನದಲ್ಲಿ ಏಕ್ತಾ ಟೈಗರ್ 2012ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದ ಮುಂದುವರಿದ ಭಾಗ ಟೈಗರ್ ಜಿಂದಾ ಹೈ 2017ರಲ್ಲಿ ಬಂದಿತ್ತು. ಇದೀಗ, ಟೈಗರ್ 3 ಸಿದ್ಧವಾಗುತ್ತಿದೆ. ರಾ ಏಜೆಂಟ್ ಆಗಿ ಸಲ್ಮಾನ್ ಖಾನ್ ಮತ್ತು ಐಎಸ್‌ಐ ಏಜೆಂಟ್ ಆಗಿ ಕತ್ರಿನಾ ನಟಿಸುತ್ತಿದ್ದಾರೆ.

  ಸಲ್ಮಾನ್ ಖಾನ್ ಭೇಟಿಯಾಗಿ ಕನಸು ನನಸಾಯಿತು ಎಂದಿದ್ದೇಕೆ ಒಲಿಂಪಿಯನ್ ಮೀರಾ ಬಾಯಿ ಚಾನು?ಸಲ್ಮಾನ್ ಖಾನ್ ಭೇಟಿಯಾಗಿ ಕನಸು ನನಸಾಯಿತು ಎಂದಿದ್ದೇಕೆ ಒಲಿಂಪಿಯನ್ ಮೀರಾ ಬಾಯಿ ಚಾನು?

  ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ ಲೂಸಿಫರ್ ರಿಮೇಕ್‌ನಲ್ಲಿ ಸಲ್ಮಾನ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ಮಲಯಾಳಂ ಹಿಟ್ ಚಿತ್ರದಲ್ಲಿ ಮೋಹನ್ ಲಾಲ್ ನಟಿಸಿದ್ದರು. ಈ ಚಿತ್ರವನ್ನು ತೆಲುಗಿನಲ್ಲಿ ಚಿರಂಜೀವಿ ಮಾಡ್ತಿದ್ದು, ಸಲ್ಲು ಭಾಯ್ ಸಾಥ್ ಕೊಡಲಿದ್ದಾರೆ ಎಂದು ಹೇಳಲಾಗಿದೆ. ಇದರ ಜೊತೆಗೆ ತಮಿಳಿನಲ್ಲಿ ವಿಜಯ್ ಅಭಿನಯಿಸುತ್ತಿರುವ ಬೀಸ್ಟ್ ಚಿತ್ರದಲ್ಲೂ ಸಲ್ಲು ಅತಿಥಿ ಪಾತ್ರ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

  English summary
  Salman khan and Katrina kaif starrer Tiger-3 crew heads to Russia for 45 day international schedule on Aug 18. Entire shoot will be wrapped in October.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X