»   » ರಣ್ಬೀರ್ ಕಪೂರ್ ಮುಂದೆ ಕತ್ರಿನಾ ಕೈಫ್ ಕೆನ್ನೆಗೆ ಮುತ್ತಿಟ್ಟ ಸಲ್ಮಾನ್.!

ರಣ್ಬೀರ್ ಕಪೂರ್ ಮುಂದೆ ಕತ್ರಿನಾ ಕೈಫ್ ಕೆನ್ನೆಗೆ ಮುತ್ತಿಟ್ಟ ಸಲ್ಮಾನ್.!

Posted By:
Subscribe to Filmibeat Kannada

ರಣ್ಬೀರ್ ಕಪೂರ್ ಹಾಗೂ ಸಲ್ಮಾನ್ ಖಾನ್... ಕತ್ರಿನಾ ಕೈಫ್ ಪಾಲಿಗೆ ಇವರಿಬ್ಬರೂ 'ಮುಗಿದ' ಅಧ್ಯಾಯ. ಆದರೂ, ಇಬ್ಬರ ಜೊತೆಯಲ್ಲೂ ಕತ್ರಿನಾ ಕೈಫ್ ಮುನಿಸಿಕೊಂಡಿಲ್ಲ... ಮಾತು ಬಿಟ್ಟಿಲ್ಲ... ಎದುರಿಗೆ ಸಿಕ್ಕರೂ ಮೂತಿ ತಿರುಗಿಸಿಕೊಂಡು ಓಡಾಡುವುದಿಲ್ಲ.!

ಬೇಕಾದ್ರೆ, ಇತ್ತೀಚಿನ 'ಜಗ್ಗಾ ಜಸೂಸ್' ಪ್ರಮೋಷನ್ ಕಾರ್ಯಕ್ರಮಗಳನ್ನೇ ತೆಗೆದುಕೊಳ್ಳಿ... ರಣ್ಬೀರ್ ಕಪೂರ್ ಹಾಗೂ ಕತ್ರಿನಾ ಕೈಫ್ ಜೊತೆಯಾಗಿ 'ಜಗ್ಗಾ ಜಸೂಸ್' ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಹೀಗಿರುವಾಗಲೇ, ರಣ್ಬೀರ್ ಕಪೂರ್ ಗೆ ಮುಜುಗರ ಆಗುವ ಘಟನೆ ನಡೆದಿದೆ.

Salman Khan kissed Katrina Kaif in front of Ranbir Kapoor

'ಜಗ್ಗಾ ಜಸೂಸ್' ಚಿತ್ರದ ಪ್ರಚಾರದ ಸಲುವಾಗಿ ರಣ್ಬೀರ್ ಕಪೂರ್ ಹಾಗೂ ಕತ್ರಿನಾ ಕೈಫ್ ಮೆಹಬೂಬ್ ಸ್ಟುಡಿಯೋಗೆ ಆಗಮಿಸಿದ್ದರು. ಅದೇ ಸಮಯದಲ್ಲಿ 'ಬ್ಯಾಡ್ ಬಾಯ್' ಸಲ್ಮಾನ್ ಖಾನ್ ಕೂಡ ಎಂಟ್ರಿಕೊಟ್ಟರು.

'ಟ್ಯೂಬ್ ಲೈಟ್' ಚಿತ್ರದ ಕುರಿತಾಗಿ ಮೆಹಬೂಬ್ ಸ್ಟುಡಿಯೋಗೆ ಆಗಮಿಸಿದ್ದ ಸಲ್ಮಾನ್ ಖಾನ್, ಅಲ್ಲೇ ಇದ್ದ ಕತ್ರಿನಾ ಕೈಫ್ ರವರನ್ನ ನೋಡಿದ ಕೂಡಲೆ 'ಹಾಯ್' ಎನ್ನುತ್ತಾ ಅಪ್ಪಿಕೊಂಡು, ಕೆನ್ನೆಗೆ ಮುತ್ತಿಟ್ಟರಂತೆ. ಆಗ ಕತ್ರಿನಾ ಪಕ್ಕದಲ್ಲಿಯೇ ರಣ್ಬೀರ್ ಕೂಡ ನಿಂತಿದ್ದರು. ಆದರೂ ರಣ್ಬೀರ್ ರವರನ್ನ ಸಲ್ಮಾನ್ ತಿರುಗಿ ನೋಡಿಲ್ಲ.

Salman Khan kissed Katrina Kaif in front of Ranbir Kapoor

ಘಟನೆಯಿಂದ ಕೊಂಚ ಮುಜುಗರ ಪಟ್ಟುಕೊಂಡ ರಣ್ಬೀರ್ ಕಾರು ಹತ್ತಿ ಹೊರಟರು. ಏನೂ ಆಗೇ ಇಲ್ಲ ಎಂಬಂತೆ ಕತ್ರಿನಾ ಕೈಫ್ ಕೂಡ ಬಂದ ದಾರಿಯಲ್ಲೇ ವಾಪಸ್ ಹೊರಟರು.

English summary
Bollywood Actor Salman Khan hugged and kissed Katrina Kaif in front of Ranbir Kapoor at Mehboob Studio.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada