For Quick Alerts
  ALLOW NOTIFICATIONS  
  For Daily Alerts

  'ವಿಶ್ವ ಪರಿಸರ ದಿನ' ಪ್ರಯುಕ್ತ 'ಇ-ಸೈಕಲ್ಸ್' ಲಾಂಚ್ ಮಾಡಿದ ಸಲ್ಮಾನ್

  By Suneel
  |

  ಬಾಲಿವುಡ್ ನಟ ಸಲ್ಮಾನ್ ಖಾನ್ ವಿಶ್ವ ಪರಿಸರ ದಿನ ಅಂಗವಾಗಿ ಇ-ಸೈಕಲ್ ಬಿಡುಗಡೆ ಮಾಡಿದ್ದಾರೆ.

  ಭೂಮಿಯ ಮೇಲ್ಮೈ ವಾತಾವರಣವನ್ನು ಶುದ್ಧವಾಗಿ ಕಾಪಾಡಿಕೊಳ್ಳಬೇಕು ಎಂಬ ಕಾಳಜಿಯಿಂದ ಸಲ್ಮಾನ್ ಖಾನ್ ತಮ್ಮ 'ಬೀಯಿಂಗ್ ಹ್ಯೂಮನ್' ಫೌಂಡೇಶನ್ ವತಿಯಿಂದಲೇ ಇ-ಸೈಕಲ್ ಅಭಿವೃದ್ದಿಪಡಿಸಿ ನಿನ್ನೆ(ಜೂನ್ 5) ರಂದು ಬಿಡುಗಡೆ ಮಾಡಿದ್ದಾರೆ. ಮುಂದೆ ಓದಿರಿ..

  ಎರಡು ದರದ ಇ ಸೈಕಲ್ ಲಾಂಚ್

  ಎರಡು ದರದ ಇ ಸೈಕಲ್ ಲಾಂಚ್

  ಸಲ್ಮಾನ್ ಖಾನ್ ತಮ್ಮ 'ಬೀಯಿಂಗ್ ಹ್ಯೂಮನ್' ಬ್ರ್ಯಾಂಡ್ ನಲ್ಲಿ ಬ್ಯಾಟರಿ ಪವರ್ ಚಾಲಿತ ಎರಡು ರೀತಿಯ ದರಗಳ ಇ-ಸೈಕಲ್ ಗಳನ್ನು ಲಾಂಚ್ ಮಾಡಿದ್ದಾರೆ.

  ಬೀಯಿಂಗ್ ಹ್ಯೂಮನ್ ಇ-ಸೈಕಲ್

  ಬೀಯಿಂಗ್ ಹ್ಯೂಮನ್ ಇ-ಸೈಕಲ್

  ಬೀಯಿಂಗ್ ಹ್ಯೂಮನ್ ಇ-ಸೈಕಲ್ ಗಳನ್ನು ಆರಂಭಿಕ ಬೆಲೆ ರೂ.40,000 ಕ್ಕೆ ಬೇಸ್ ಮಾಡೆಲ್ ಮತ್ತು ರೂ.57,000 ಕ್ಕೆ ಉನ್ನತ ಮಾದರಿಯ ಇ-ಸೈಕಲ್ ಗಳನ್ನು ಖರೀದಿಸಬಹುದು. ವಿಶೇಷ ಅಂದ್ರೆ ಇ-ಸೈಕಲ್ ಗಳನ್ನು ಖರೀದಿಸಲು ಡ್ರೈವಿಂಗ್ ಲೈಸನ್ಸ್ ಅಗತ್ಯವಿಲ್ಲ. ಅಲ್ಲದೇ ವಾಹನ ನೋಂದಣಿ ಮಾಡಿಸುವ ಅಗತ್ಯವಿಲ್ಲ.

  25Kmph ವೇಗದಲ್ಲಿ ಚಲಿಸುವ ಇ-ಸೈಕಲ್ ಗಳು

  25Kmph ವೇಗದಲ್ಲಿ ಚಲಿಸುವ ಇ-ಸೈಕಲ್ ಗಳು

  ಇ-ಸೈಕಲ್ ಗಳನ್ನು ಸಾಮಾನ್ಯವಾಗಿ ಪೆಡಲ್ ಬೈಸಿಕಲ್ ಗಳಂತೆ ಮತ್ತು ಬ್ಯಾಟರಿ ಪವರ್ ಚಾಲಿತವಾಗಿ ಎರಡು ರೀತಿಯಲ್ಲಿಯೂ ಓಡಿಸಬಹುದು. ಇ-ಸೈಕಲ್ ಗಳು ಗಂಟೆಗೆ 25 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತವೆ.

  ಅಭಿಮಾನಿಗಳಿಗೆ ಸಲ್ಲು ನೀಡಿದ ಕೊಡುಗೆ

  ಅಭಿಮಾನಿಗಳಿಗೆ ಸಲ್ಲು ನೀಡಿದ ಕೊಡುಗೆ

  ವಿಶ್ವ ಪರಿಸರ ದಿನ ಅಂಗವಾಗಿ ಬೀಯಿಂಗ್ ಹ್ಯೂಮನ್ ಇ-ಸೈಕಲ್ ಗಳನ್ನು ಬಿಡುಗಡೆ ಮಾಡಿರುವ ಸಲ್ಮಾನ್ ಖಾನ್, "ನಾನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ದಿನದಿಂದಲೂ ಅಭಿಮಾನಿಗಳು ನನ್ನ ಸಿನಿಮಾಗಳನ್ನು ಸ್ವೀಕರಿಸಿ... ದುಡ್ಡು ಕೊಟ್ಟು ನೋಡುತ್ತಿದ್ದಾರೆ. ಅವರಿಗೆ ಹಿಂದಿರಿಗಿ ನಾನು ಏನಾದರೂ ಕೊಡಬೇಕಿತ್ತು. ಅಲ್ಲದೇ ಭೂಮಿ ತಾಯಿಗಾಗಿ ಏನಾದರೂ ಉತ್ತಮ ಕೆಲಸ ಮಾಡಬೇಕೆಂಬ ಆಸೆ ಇತ್ತು. ಆದ್ದರಿಂದ ಭೂಮಿಯ ಮೇಲ್ಮೈ ವಾಯು ಮಾಲಿನ್ಯ ಕಡಿಮೆ ಮಾಡುವ ಮತ್ತು ಶಬ್ಧ ಮಾಲಿನ್ಯ ಉಂಟುಮಾಡದ ಇ-ಸೈಕಲ್ ಗಳನ್ನು ಅಭಿವೃದ್ದಿಪಡಿಸಿದ್ದೇವೆ" ಎಂದು ಹೇಳಿದರು.

  ಪರಿಸರ ರಕ್ಷಣೆ ನಮ್ಮೆಲ್ಲರ ಬಹುಮುಖ್ಯ ಕಾರ್ಯ

  ಪರಿಸರ ರಕ್ಷಣೆ ನಮ್ಮೆಲ್ಲರ ಬಹುಮುಖ್ಯ ಕಾರ್ಯ

  ಪರಿಸರವನ್ನು ಕಾಪಾಡುವುದು ಮತ್ತು ಶುದ್ಧವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಹೊಣೆ. ನಮ್ಮಿಂದ ಸಾಧ್ಯವಾದಷ್ಟು ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದು ಸಲ್ಮಾನ್ ಖಾನ್ ಇ-ಸೈಕಲ್ ಲಾಂಚ್ ವೇಳೆ ಹೇಳಿದರು. ಮಾಲಿನ್ಯ ರಹಿತ ವಾತಾವರಣಕ್ಕಾಗಿ ಇ-ಸೈಕಲ್ ಗಳನ್ನು ಅಭಿವೃದ್ದಿಪಡಿಸಿರುವ ಸಲ್ಮಾನ್ ಖಾನ್ ತಮ್ಮ ಬೀಯಿಂಗ್ ಹ್ಯೂಮನ್ ಫೌಂಡೇಶನ್ ವತಿಯಿಂದ ಕಡು ಬಡಕುಟುಂಬದ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮತ್ತು ಆರೋಗ್ಯ ರಕ್ಷಣೆ ನೀಡುವ ಸಮಾಜ ಕಾರ್ಯಗಳನ್ನು ಮಾಡುತ್ತಿದ್ದಾರೆ.

  ಇ-ಸೈಕಲ್ ನಲ್ಲಿ ಬಂದ ಸಲ್ಲು

  ಇ-ಸೈಕಲ್ ನಲ್ಲಿ ಬಂದ ಸಲ್ಲು

  ಕುತೂಹಲಕಾರಿ ವಿಷಯವೆಂದರೇ ಸಲ್ಮಾನ್ ಖಾನ್ ವಿಶ್ವ ಪರಿಸರ ದಿನ ಅಂಗವಾಗಿ ಇ-ಸೈಕಲ್ ಲಾಂಚ್ ಮಾಡಲು ಮುಂಬೈನಲ್ಲಿನ ತಮ್ಮ ಬಾಂದ್ರಾ ನಿವಾಸದಿಂದ ಮೆಹಬೂಬ್ ಸ್ಟುಡಿಯೋ ವರೆಗೂ ಇ-ಸೈಕಲ್ ನಲ್ಲೇ ಬಂದಿದ್ದರು.

  English summary
  Bollywood Actor Salman Khan launches E-Cycles under the 'Being Human' brand on the occation of World Environment Day Yesterday(June 5th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X