TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಸಲ್ಮಾನ್ ನನ್ನ 'ಬಿಗ್ ಬ್ರದರ್' : ಕತ್ರೀನಾ ಕೈಫ್
ಇತೀಚೆಗೆ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ನೀಳ ಕಾಲ್ಗಳ ಚೆಲುವೆ ಕತ್ರೀನಾ ಕೈಫ್ ಈ ರೀತಿ ಹೇಳಿಕೆ ನೀಡಿ ಎಲ್ಲರಿಗೂ ಶಾಕ್ ನೀಡಿದ್ದಾಳೆ.
ಇಬ್ಬರ ನಡುವೆ ಏನೋ ನಡೆದಿದೆ. ನಡೆಯುತ್ತಿದೆ. ಮುಂದೆ ಏನೋ ನಡೆಯಲಿದೆ ಎಂದು ಲೆಕ್ಕಾಚಾರ ಹಾಕುತ್ತಿದ್ದ ಬಾಲಿವುಡ್ ಗಾಸಿಪ್ ಮಂದಿಗೂ ಇದು ಅಚ್ಚರಿಯ ಸಂಗತಿಯಾಗಿದೆ.
ಅಭಿಮಾನಿಗಳಂತೂ ತಲೆ ಕೆರದುಕೊಂಡು 'ಅರೆ ಇಸ್ಕಿ..' ಎಂದು ಓಡಾಡುತ್ತಿದ್ದಾರಂತೆ.
ಇಬ್ಬರ ನಡುವೆ ಸರಸ ಸಲ್ಲಾಪ ಪ್ರೇಮ ಕೊನೆಗೆ ಮದುವೆ ತನಕ ಸಂಬಂಧ ಹಬ್ಬಿತ್ತು. ಆಮೇಲೆ ಕೈಫ್ ಕೈ ಬಿಟ್ಟ ಸಲ್ಮಾನ್ ಮತ್ತೆ ಉಂಡಾಡಿ ದುಂಡನ ಹಾಗೆ ಪೋಸ್ ಕೊಡುತ್ತಿದ್ದ.
ಆದರೆ, ಇತ್ತೀಚೆಗೆ ಸಲ್ಮಾನ್ ವಿರುದ್ಧ ಕತ್ರೀನಾ ಟ್ವೀಟ್ಟರ್ ನಲ್ಲಿ ಅದೇನೋ ಬರೆದಳಂತೆ ಅದನ್ನು ನೋಡಿದ ಸಲ್ಲೂ ಮಿಯಾ ಅಭಿಮಾನಿಗಳು ಕೆರಳಿ ಕೆಂಡಾಮಂಡಲವಾಗಿ 140 ಕ್ಯಾರೆಕ್ಟರ್ ನೊಳಗೆ ಕೈಫ್ ಗೆ ಛೀಮಾರಿ ಹಾಕಿದರಂತೆ. ಅದರ ಸ್ಯಾಂಪಲ್ ಇಲ್ಲಿದೆ ನೋಡಿಕೊಳ್ಳಿ
@SajHossain: "@Zaibi997: Salman Khan is like my big brother says Katrina Kaif." please tell me I didn't read what I just read... WTF
@Zaibi997: Salman Khan is like my big brother says Katrina Kaif.Guyz learn frm her What we call use and throw.
@WorldOfCinemas: Salman Khan is like my big brother, says Katrina Kaif.. Can we call this is SRK's love and magic.
@KatrinasCrystal: Salman Khan is like my big brother: Katrina Kaif at Kolkata today. So it's confirmed SK is just a father/brother figure in her life.
ಇಬ್ಬರ ನಡುವೆ ಏನು ಸಂಬಂಧ ಇದೆ ಎಂಬುದು ಯಾರಿಗೂ ಇನ್ನೂ ಸ್ಪಷ್ಟವಾಗುತ್ತಿಲ್ಲ. ಸಲ್ಲೂ ಮದ್ವೆ ಮುಂದೂಡುತ್ತಿರುವ ಜೊತೆಗೆ ಪ್ರೇಯಸಿಯರನ್ನು ಬದಲಾಯಿಸುತ್ತಾ ತನ್ನ ಪ್ಲೇಬಾಯ್ ಇಮೇಜ್ ಕಾಯ್ದುಕೊಂಡಿದ್ದಾನೆ. ಕತ್ರೀನಾ ಬಹುಶಃ ಆತನ ಹುಚ್ಚಾಟ ಕಂಡು ಸಹವಾಸ ಸಾಕು ಎಂದು ಈ ರೀತಿ ಹೇಳಿರಬಹುದು ಅಥವಾ ಬಹುದೊಡ್ಡ ಹಿತೈಷಿ ಎಂಬುದನ್ನು ಬಿಗ್ ಬ್ರದರ್ ಎಂದು ಹೇಳಿರಬಹುದೇ ಗೊತ್ತಿಲ್ಲ ಕಾದು ನೋಡೋಣ.