ಮಾಸ್ಟರ್ ರಿಮೇಕ್: ಸಲ್ಮಾನ್ ಖಾನ್ ಹೀರೋ, ಸೇತುಪತಿ ಪಾತ್ರಕ್ಕೆ ಯಾರು?
ತಮಿಳು ನಟ ವಿಜಯ್ ಅಭಿನಯದಲ್ಲಿ ತೆರೆಕಂಡಿದ್ದ 'ಮಾಸ್ಟರ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಹಿಟ್ ಆಗಿತ್ತು. ವಿಜಯ್ ಎದುರು ವಿಜಯ್ ಸೇತುಪತಿ ಖಳನಾಯಕನಾಗಿ ಮಿಂಚಿದ್ದರು. ಸುಮಾರು 250 ಕೋಟಿವರೆಗೂ ಬಿಸಿನೆಸ್ ಮಾಡಿತ್ತು.
ಮಾಸ್ಟರ್ ಹಿಟ್ ಆಗುತ್ತಿದ್ದಂತೆ ಈ ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡಲಾಗುತ್ತದೆ, ಇದರಲ್ಲಿ ಸಲ್ಮಾನ್ ಖಾನ್ ನಟಿಸುತ್ತಾರೆ ಎಂಬ ಸುದ್ದಿ ಬಹಳ ದಿನಗಳಿಂದ ಚರ್ಚೆಯಲ್ಲಿದೆ.
'ರಾಧೆ' ಸೋಲಿನ ಬಳಿಕ ಮಾಸ್ಟರ್ ರಿಮೇಕ್ ಮತ್ತೆ ಸದ್ದು ಮಾಡ್ತಿದೆ. ವಿಜಯ್ ಪಾತ್ರದಲ್ಲಿ ಸಲ್ಮಾನ್ ನಟಿಸಿದ್ರೆ ವಿಜಯ್ ಸೇತುಪತಿ ಪಾತ್ರದಲ್ಲಿ ಯಾರು ನಟಿಸಬಹುದು ಎಂಬ ಕುತೂಹಲ ಕಾಡ್ತಿದೆ.

ಸಲ್ಮಾನ್ ಎದುರಲ್ಲಿ ಸರಿಸಮಾನಾಗಿ ನಿಲ್ಲಬಲ್ಲ ಕಲಾವಿದನ ಹುಡುಕಾಟದಲ್ಲಿ ಚಿತ್ರತಂಡ ನಿರತವಾಗಿದೆ. ಹಿಂದಿಯಲ್ಲೂ ವಿಜಯ್ ಸೇತುಪತಿ ಅವರೇ ಆ ಪಾತ್ರ ಮಾಡಲಿ ಎಂದು ಅನೇಕರು ಕಾಮೆಂಟ್ ಮಾಡ್ತಿದ್ದಾರೆ.
ಮಾಸ್ಟರ್ ರಿಮೇಕ್ ಇನ್ನು ಅಧಿಕೃತವಾಗಿಲ್ಲ. ಹಿಂದಿಗೆ ಹಕ್ಕು ತಂದಿರುವುದು ಪಕ್ಕಾ ಆಗಿದೆ. ಸಲ್ಮಾನ್ ಬಳಿ ಚರ್ಚೆಯೂ ಆಗಿದೆ. ಇನ್ನುಳಿದಂತೆ ಯಾವ ಬೆಳವಣಿಗೆಯೂ ಆಗಿಲ್ಲ. ಮತ್ತೊಂದೆಡೆ ರವಿತೇಜ ನಟನೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಖಿಲಾಡಿ ಚಿತ್ರದ ರಿಮೇಕ್ ಹಕ್ಕು ಸಹ ಸಲ್ಮಾನ್ ಖಾನ್ ಆಪ್ತರು ಖರೀದಿಸಿದ್ದಾರೆ ಎಂದು ವರದಿಗಳಾಗಿವೆ.

ಮಾಸ್ಟರ್ ಚಿತ್ರದ ಕುರಿತು
ಲೋಕೇಶ್ ಕನಕರಾಜ್ ಈ ಚಿತ್ರ ನಿರ್ದೇಶಿಸಿದ್ದರು. ವಿಜಯ್, ವಿಜಯ್ ಸೇತುಪತಿ, ಮಾಳವಿಕಾ ಮೋಹನ್, ಅರುಣ್ ದಾಸ್ ಸೇರಿದಂತೆ ಹಲವರು ನಟಿಸಿದ್ದಾರೆ. ಜನವರಿ 13, 2021ರಂದು ಈ ಚಿತ್ರ ರಿಲೀಸ್ ಆಗಿತ್ತು.


Click it and Unblock the Notifications











