For Quick Alerts
  ALLOW NOTIFICATIONS  
  For Daily Alerts

  'ಮಾಸ್ಟರ್' ಹಿಂದಿ ರಿಮೇಕ್: ದಳಪತಿ ವಿಜಯ್ ಪಾತ್ರದಲ್ಲಿ ಬಾಲಿವುಡ್ ಖ್ಯಾತ ನಟ

  |

  ದಳಪತಿ ವಿಜಯ್ ನಟನೆಯ ಮಾಸ್ಟರ್ ಸಿನಿಮಾ ರಿಲೀಸ್ ಆಗಿ ಎರಡು ತಿಂಗಳ ಮೇಲಾಗಿದೆ. ಈ ವರ್ಷ ದಕ್ಷಿಣ ಭಾರತದಲ್ಲಿ ತೆರೆಗೆ ಬಂದ ಮೊದಲ ಅತೀ ದೊಡ್ಡ ಸಿನಿಮಾ ಮಾಸ್ಟರ್. ಕೊರೊನಾ ಬಳಿಕ ಚಿತ್ರಮಂದಿರಕ್ಕೆ ಅದ್ದೂರಿಯಾಗಿ ಎಂಟ್ರಿ ಕೊಟ್ಟ ವಿಜಯ್ ಮಾಸ್ಟರ್ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಮಾಯಿ ಮಾಡಿದೆ.

  ಸಿನಿಮಾ ತಮಿಳು ಮಾತ್ರವಲ್ಲದೆ ತೆಲುಗು, ಕನ್ನಡ, ಮಲಯಾಳಂ ಜೊತೆಗೆ ಹಿಂದಿಯಲ್ಲೂ ಬಿಡುಗಡೆಯಾಗಿತ್ತು. ಇದೀಗ ಮಾಸ್ಟರ್ ಸಿನಿಮಾದಿಂದ ಮತ್ತೊಂದು ಅಪ್ ಡೇಟ್ ಹೊರಬಿದ್ದಿದೆ. ಕಾಲಿವುಡ್ ಹಿಟ್ ಸಿನಿಮಾ ಮಾಸ್ಟರ್ ಹಿಂದಿಗೆ ರಿಮೇಕ್ ಆಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.

  ಸಲ್ಮಾನ್ ಕುಡಿದು ಹಿಂಸೆ ನೀಡುತ್ತಿದ್ದ ಕೆಟ್ಟ ಸಮಯದಲ್ಲೂ ಜೊತೆಗಿದ್ದೆ: ಬ್ರೇಕಪ್ ಬಗ್ಗೆ ಐಶ್ವರ್ಯಾ ಮಾತುಸಲ್ಮಾನ್ ಕುಡಿದು ಹಿಂಸೆ ನೀಡುತ್ತಿದ್ದ ಕೆಟ್ಟ ಸಮಯದಲ್ಲೂ ಜೊತೆಗಿದ್ದೆ: ಬ್ರೇಕಪ್ ಬಗ್ಗೆ ಐಶ್ವರ್ಯಾ ಮಾತು

  ಇತ್ತೀಚಿಗೆ ಸಾಕಷ್ಟು ದಕ್ಷಿಣದ ಸಿನಿಮಾಗಳು ಬಾಲಿವುಡ್ ಗೆ ರಿಮೇಕ್ ಆಗುತ್ತಿವೆ. ಮಾಸ್ಟರ್ ಸಿನಿಮಾ ಹಿಂದಿಯಲ್ಲೂ ಬಿಡುಗಡೆಯಾದರೂ ಸಹ ಹಿಂದಿಗೆ ರಿಮೇಕ್ ಮಾಡಲು ಮುಂದಾಗಿದ್ದಾರೆ ಕಬೀರ್ ಸಿಂಗ್ ಸಿನಿಮಾದ ನಿರ್ಮಾಪಕ ಮುರಾದ್ ಖೇತನಿ ಮತ್ತು ಎಂಡೆಮೋಲ್ ಶೈನ್ ಹಿಂದಿಯಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದು, ಬಾಲಿವುಡ್ ಸ್ಟಾರ್ ನಟರನ್ನು ಸಂಪರ್ಕ ಮಾಡಿದೆ.

  ಈಗಾಗಲೇ ತಂಡ ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ಅವರನ್ನು ಸಂಪರ್ಕ ಮಾಡಿ ಕೆಲವು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಅಲ್ಲದೆ ಹಿಂದಿಗೆ ತಕ್ಕಹಾಗೆ ಕೆಲವೊಂದು ಬದಲಾವಣೆಯಗಳನ್ನು ಮಾಡಿಕೊಂಡಿದ್ದಾರಂತೆ.

  ದಳಪತಿ ವಿಜಯ್ ಪಾತ್ರಕ್ಕೆ ಸಲ್ಮಾನ್ ಖಾನ್ ಅವರನ್ನು ಸಂಪರ್ಕ ಮಾಡಿದ್ರೆ, ಇನ್ನು ವಿಲನ್ ಆಗಿ ಅಬ್ಬರಿಸಿದ್ದ ವಿಜಯ್ ಸೇತುಪತಿ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

  ಸಲ್ಮಾನ್ ಖಾನ್ ಕಥೆ ಕೇಳಿ ತುಂಬಾ ಇಷ್ಟಪಟ್ಟಿದ್ದಾರಂತೆ. ಆದರೆ ಇನ್ನು ಗ್ರೀನ್ ಸಿಗ್ನಲ್ ನೀಡಿಲ್ಲ ಎನ್ನುವ ಸುದ್ದಿ ಕೇಳಿಬರುತ್ತಿದೆ. ಒಂದೆರಡು ತಿಂಗಳಲ್ಲಿ ನಾಯಕ ಮತ್ತು ವಿಲನ್ ಪಾತ್ರ ಪೈನಲ್ ಆಗಲಿದೆಯಂತೆ.

  ಪುನೀತ್ ರಾಜ್ ಕುಮಾರ್ ಮನವಿಗೆ ಸಚಿವ ಸುಧಾಕರ್ ಖಡಕ್ ಪ್ರತಿಕ್ರಿಯೆ | Filmibeat Kannada

  ಸಲ್ಮಾನ್ ಸದ್ಯ ರಾಧೆ ಸಿನಿಮಾ ರಿಲೀಸ್ ಗೆ ಕಾಯುತ್ತಿದ್ದಾರೆ. ಚಿತ್ರದ ಟ್ರೈಲರ್ ಗಾಗಿ ಅಭಿಮಾನಿಗಳ ಕಾತರದಿಂದ ಕಾಯುತ್ತಿದ್ದಾರೆ. ಟೈಗರ್-3 ಚಿತ್ರೀಕರಣದಲ್ಲಿ ನಿರತರಾಗಿರುವ ಸಲ್ಲು ಮೇ ತಿಂಗಳಿಂದ ರಾಧೆ ಚಿತ್ರದ ಪ್ರಮೋಷನ್ ಪ್ರಾರಂಭಿಸಲು ಸಜ್ಜಾಗಿದ್ದರು. ಆದರೀಗ ಕೊರೊನಾ ಹೆಚ್ಚಾಗುತ್ತಿರುವ ಕಾರಣ ಸಿನಿಮಾ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆ ಇದೆ.

  English summary
  Vijay Starrer Master film remade in Hindi. Salman Khan likely to play Vijay role in Master Hindi remake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X