For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಯ ಸೆಲ್ಫಿ: ವಿಮಾನ ನಿಲ್ದಾಣದಲ್ಲಿ ಸಲ್ಮಾನ್ ಖಾನ್ ಸಿಡಿಮಿಡಿ.!

  |
  Salman Khan loses cool and snatches Fan's Phone at Goa Airport | Salman khan | Goa | Selfie

  ಸೆಲೆಬ್ರಿಟಿಗಳು ಎಲ್ಲೇ ಹೋದರೂ, 'ಸೆಲ್ಫಿ' ಕಿರಿಕಿರಿ ಮಾತ್ರ ತಪ್ಪಿದ್ದಲ್ಲ. ನೆಚ್ಚಿನ ತಾರೆಯರ ಜೊತೆಗೆ ಫೋಟೋ ಕ್ಲಿಕ್ ಮಾಡಿಕೊಳ್ಳಬೇಕು ಎಂಬ ಆಸೆ ಎಲ್ಲರಿಗೂ ಇರುವುದು ಸಹಜ. ಆದ್ರೆ, ಹಾಗೆ ಸೆಲ್ಫಿ ತೆಗೆದುಕೊಳ್ಳುವಾಗ ಕೆಲವೊಮ್ಮೆ ಸ್ಟಾರ್ ಗಳು ಸಿಡಿಮಿಡಿಗೊಳ್ಳುತ್ತಾರೆ. ಮೊನ್ನೆ ಗೋವಾ ವಿಮಾನ ನಿಲ್ದಾಣದಲ್ಲಿ ಆಗಿದ್ದೂ ಇದೇ.!

  ಗೋವಾ ಏರ್ ಪೋರ್ಟ್ ನಿಂದ ಸಲ್ಮಾನ್ ಖಾನ್ ಹೊರಗೆ ಬರುತ್ತಿದ್ದಾಗ, ಅಭಿಮಾನಿಯೊಬ್ಬ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ. ಆಗ ಸಲ್ಮಾನ್ ಖಾನ್ ಗೆ ಸಿಟ್ಟು ಯಾಕೆ ಬಂತೋ ಗೊತ್ತಿಲ್ಲ. ಕೂಡಲೆ ಆ ಅಭಿಮಾನಿಯ ಮೊಬೈಲ್ ಫೋನ್ ನ ಸಲ್ಮಾನ್ ಖಾನ್ ಕಿತ್ತುಕೊಂಡಿದ್ದಾರೆ.

  ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಲ್ಮಾನ್ ಖಾನ್ ವರ್ತನೆ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಸಲ್ಮಾನ್ ಖಾನ್ ಗೆ ಕೋಪ ಬರುವಂಥದ್ದು ಏನಾಯ್ತು ಎಂದು ಹಲವರು ಪ್ರಶ್ನೆ ಮಾಡುತ್ತಿದ್ದಾರೆ.

  ಅಸಲಿಗೆ, ಸಲ್ಮಾನ್ ಖಾನ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ಯುವಕ ಏರ್ ಪೋರ್ಟ್ ನ ಸಿಬ್ಬಂದಿ ಎಂದು ತಿಳಿದುಬಂದಿದೆ.

  ಅಂದ್ಹಾಗೆ, 'ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್' ಚಿತ್ರದ ಶೂಟಿಂಗ್ ಗಾಗಿ ಮಂಗಳವಾರ (ಜನವರಿ 28) ಬೆಳಗ್ಗೆ ಗೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

  ಏರ್ ಪೋರ್ಟ್ ನಲ್ಲಿ ಮೊಬೈಲ್ ಕಸಿದುಕೊಂಡು ಸಲ್ಮಾನ್ ಖಾನ್ ತೋರಿದ ವರ್ತನೆಯನ್ನು ಗೋವಾ ಬಿಜೆಪಿ ಜನರಲ್ ಸೆಕ್ರೆಟರಿ ನರೇಂದ್ರ ಸಾವೈಕರ್ ಮತ್ತು ಎನ್.ಎಸ್.ಯು.ಐ ಖಂಡಿಸಿ, ಸಲ್ಮಾನ್ ಖಾನ್ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ.

  English summary
  Bollywood Actor Salman Khan loses cool and snatches Fan's Phone at Goa Airport.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X