»   » ಮದುವೆ ಕನಸು ಕಾಣುತ್ತಾ ಕೈ ಹಿಡಿದು ಓಡಾಡುತ್ತಿದ್ದಾರೆ ಪ್ರಣಯ ಹಕ್ಕಿಗಳು

ಮದುವೆ ಕನಸು ಕಾಣುತ್ತಾ ಕೈ ಹಿಡಿದು ಓಡಾಡುತ್ತಿದ್ದಾರೆ ಪ್ರಣಯ ಹಕ್ಕಿಗಳು

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನ ಮೋಸ್ಟ್ ಎಲಿಜಬೆಲ್ ಬ್ಯಾಚುರಲ್ ಅಂತಾನೇ ಖ್ಯಾತಿ ಗಳಿಸಿರುವ ನಟ ಸಲ್ಮಾನ್ ಖಾನ್ ಅವರು ಈ ವರ್ಷದ ಅಂತ್ಯದಲ್ಲಿ ತಮ್ಮ ಒಂಟಿ ಜೀವನಕ್ಕೆ ಗುಡ್ ಬೈ ಹೇಳಿ ಜಂಟಿಯಾಗುವ ಪ್ಲಾನ್ ಮಾಡುತ್ತಿದ್ದಾರೆ ಎಂಬುದನ್ನು ನಾವು ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ಅಲ್ವಾ?.

ಇದೀಗ ಇದಕ್ಕೆ ಪುಷ್ಠಿ ನೀಡುವಂತೆ ಬಾಯ್ ಜಾನ್ ಸಲ್ಮಾನ್ ಖಾನ್ ಅವರು ಗೆಳತಿ ಲುಲಿಯಾ ವಂಟೂರ್ ಅವರ ಜೊತೆ ಏರ್ ಪೋರ್ಟ್, ಶಾಪಿಂಗ್ ಮಾಲ್ ಅಂತ ಅಲ್ಲಲ್ಲಿ ಕೈ ಕೈ ಹಿಡಿದುಕೊಂಡು ಸುತ್ತಾಡುತ್ತಿದ್ದಾರೆ.[ಅಬ್ಬಾ.! ಕೊನೆಗೂ ಸಲ್ಮಾನ್ ಖಾನ್ ವಿವಾಹ ಆಗ್ತಾರಂತೆ]

Salman Khan & Lulia Vantur Spotted Together With Family At The Airport

ಹೌದು ಸಲ್ಮಾನ್ ಖಾನ್ ಅವರು ರೊಮೆನಿಯಾ ಬೆಡಗಿ ಲೂಲಿಯಾ ಅವರು ಮೊನ್ನೆ ಮೊನ್ನೆ ಮುಂಬೈ ಏರ್ ಪೋರ್ಟ್ ನಲ್ಲಿ ಒಟ್ಟಾಗಿ ಕಂಡುಬಂದರು. ಇವರ ಜೊತೆ ಸಲ್ಮಾನ್ ಖಾನ್ ಅವರ ತಾಯಿ ಸಲ್ಮಾ ಅವರು ಕೂಡ ಇದ್ದರು.

Salman Khan & Lulia Vantur Spotted Together With Family At The Airport

ಮಾಡೆಲ್ ಲುಲಿಯಾ ವಂಟೂರ್ ಅವರು ಏರ್ ಪೋರ್ಟ್ ನಲ್ಲಿ ತಮ್ಮ ಭಾವಿ ಅತ್ತೆ ಅಂದರೆ ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರ ತಾಯಿ ಸಲ್ಮಾ ಅವರ ಕೈ ಹಿಡಿದುಕೊಂಡು ಕಾರಿನ ಬಳಿ ಕರೆದುಕೊಂಡು ಹೋಗಿದ್ದಾರೆ. ಇದನ್ನು ನೋಡುತ್ತಿದ್ದರೆ, ಲುಲಿಯಾ ಅವರು ಸಲ್ಮಾ ಅವರಿಗೆ ತಕ್ಕ ಸೊಸೆ ಆಗೋದು ಗ್ಯಾರೆಂಟಿ ಅನಿಸುತ್ತದೆ.[ಹರ್ಯಾಣದ 'ಸುಲ್ತಾನ್' ಸಲ್ಲೂಗೆ ಟ್ವಿಟ್ಟರಲ್ಲಿ 'ಅಪಮಾನ್']

Salman Khan & Lulia Vantur Spotted Together With Family At The Airport

ಇತ್ತೀಚೆಗೆ ಭಾಯ್ ಜಾನ್ ಸಲ್ಲೂಮಿಯಾ ಅವರ ದೀರ್ಘಕಾಲದ ಗೆಳತಿ ಲುಲಿಯಾ ಅವರು ಸಲ್ಲು ಅವರ ಪರಿವಾರದ ಒಂದು ಭಾಗವಾಗಿ ಬಿಟ್ಟಿದ್ದು, ಕುಟುಂಬದ ಹೆಚ್ಚಿನ ಸಮಾರಂಭಗಳಲ್ಲಿ ಸಲ್ಮಾನ್ ಜೊತೆ ಕಾಣಿಸಿಕೊಳ್ಳುತ್ತಾರೆ.

ಸಲ್ಮಾನ್ ತಂಗಿ ಅರ್ಪಿತಾ ಮದುವೆಯಿಂದ ಹಿಡಿದು ಸಲ್ಲು ಅವರ 50ನೇ ಹುಟ್ಟುಹಬ್ಬದ ಸಮಾರಂಭದವರೆಗೂ ಎಲ್ಲಾ ಕಾರ್ಯಕ್ರಮಗಳಲ್ಲಿ ಲುಲಿಯಾ ಅವರು ವಿಶೇಷ ಗೆಸ್ಟ್ ಆಗಿ ಪಾಲ್ಗೊಂಡಿದ್ದರು.[ಚಿತ್ರಗಳು: 8 ದಿನದ ಪುಟ್ಟ ಅಳಿಯನಿಗೆ ಸಲ್ಲು ಕೊಟ್ರು ದುಬಾರಿ ಗಿಫ್ಟ್]

Salman Khan & Lulia Vantur Spotted Together With Family At The Airport

ಒಟ್ನಲ್ಲಿ ತಮಗಿಷ್ಟ ಇಲ್ಲಾಂದ್ರೂನೂ ತಮ್ಮ ತಾಯಿಯಾಗಿ ಸಲ್ಮಾನ್ ಖಾನ್ ಅವರು ಲುಲಿಯಾ ಅವರನ್ನು ಮದುವೆಯಾಗುತ್ತಿದ್ದು, ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರಾ ಅನ್ನೋದು ಈ ವರ್ಷದ ಅಂತ್ಯದಲ್ಲಿ ತಿಳಿಯಲಿದೆ.

English summary
The rumour of Actor Salman Khan & Iulia Vantur's affair has been started running through the tinsel town. Interestingly, many times the duo spotted together and now Salman & Iulia spotted together coming out from Mumbai airport. Along with the alleged lovebirds Salman & Iulia, mother Salma Khan was also spotted at the airport.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada