For Quick Alerts
  ALLOW NOTIFICATIONS  
  For Daily Alerts

  ಸಲ್ಲು ಮದುವೆ; ಎಲ್ಲಾ ಜಡ್ಜ್ ಕೈಯಲ್ಲೇ ಇದೆ

  By Rajendra
  |

  ಮದುವೆ ಬಗ್ಗೆ ನಟ ಸಲ್ಮಾನ್ ಖಾನ್ ಮೌನ ಮುರಿದಿದ್ದಾರೆ. ಅವರ ಅಭಿಮಾನಿಗಳೆಲ್ಲಾ ಸಲ್ಲು ಮದುವೆ ಯಾವಾಗ ಎಂದು ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ. ಈ ಬಗ್ಗೆ ಅವರು ಸೂಕ್ತ ಉತ್ತರ ಕೊಡದಿದ್ದರೂ ತಮ್ಮ ಮದುವೆಯನ್ನು ಮಾತ್ರ ಮುಂದಕ್ಕೆ ಹಾಕುತ್ತಲೇ ಬಂದಿದ್ದರು.

  ಈಗ ಕಡೆಗೂ ಮದುವೆಯಾಗುವುದಾಗಿ ಹೇಳಿದ್ದಾರೆ. ಆದರೆ ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಸಿದ ತೀರ್ಪು ಹೊರಬಿದ್ದ ಬಳಿಕ ಮದುವೆಯಾಗುತ್ತೇನೆ ಎಂದಿದ್ದಾರೆ 46ರ ಪ್ರಾಯದ ಸಲ್ಮಾನ್ ಖಾನ್.

  ಒಂದು ವೇಳೆ ಈಗಲೇ ಮದುವೆಯಾದೆ ಎಂದಿಟ್ಟುಕೊಳ್ಳಿ, ಕೋರ್ಟ್ ಏನಾದರೂ ನನ್ನನ್ನು ಜೈಲಿಗೆ ಕಳುಹಿಸಿದರೆ? ನನ್ನ ಹೆಂಡತಿ ಪಾಡು ಏನಾಗಬೇಡ. ನಾನು ಜೈಲಿನಲ್ಲಿ ಕಂಬಿ ಎಣಿಸುತ್ತಾ ಇರುವುದು. ನನ್ನ ಹೆಂಡತಿ ಮಕ್ಕಳು ಆಗಾಗ ನನ್ನನ್ನು ನೋಡಲು ಬರುವುದು...ಇವೆಲ್ಲಾ ಬೇಕಾ?

  ಒಂದು ವೇಳೆ ನನ್ನ ವಿರುದ್ಧದ ಕೇಸ್ ಗಳು ಖುಲಾಸೆಯಾದರೆ ಆಗ ನೋಡೋಣ. ಮದುವೆಯಂತೂ ಖಂಡಿತ ಆಗ್ತೀನಿ ಎಂದಿದ್ದಾರೆ ಸಲ್ಮಾನ್ ಖಾನ್. ಅಂದಹಾಗೆ ಸಲ್ಲು ವಿರುದ್ಧ ಎರಡು ಕೇಸ್ ಗಳು ಜೋಧ್‌ಪುರ ಹಾಗೂ ಮುಂಬೈ ನ್ಯಾಯಾಲಯದ ಕಟಕಟೆಯಲ್ಲಿವೆ.

  1999ರಲ್ಲಿ ಕೃಷ್ಣಮೃಗ ಬೇಟೆಯಾಡಿದ ಆರೋಪ ಅವರ ಮೇಲಿದ್ದು, ಜೋಧ್‌ಪುರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. 2002ರಲ್ಲಿ ವೇಗವಾಗಿ ಕಾರು ಚಾಲನೆ ಮಾಡಿ ವ್ಯಕ್ತಿಯೊಬ್ಬನ ಸಾವಿಗೆ ಕಾರಣವಾದ ಪ್ರಕರಣದ ವಿಚಾರಣೆ ಮುಂಬೈ ಕೋರ್ಟ್‌ನಲ್ಲಿದೆ. ಇವೆರಡೂ ಇತ್ಯರ್ಥವಾದ ಬಳಿಕವಷ್ಟೇ ಸಲ್ಲು ಕಾ ಶಾದಿ. (ಏಜೆನ್ಸೀಸ್)

  English summary
  The entire nation have been crazy surrounding superstar Salman Khan's much-anticipated wedding. Though at 46, Salman is still quite a stud and a very hot and happening bachelor, but his fans desperately wants him to settle down with his dream woman.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X