For Quick Alerts
  ALLOW NOTIFICATIONS  
  For Daily Alerts

  ಆರ್ಯನ್ ಅರೆಸ್ಟ್ ಬಳಿಕ ಶಾರೂಖ್ ಭೇಟಿ ಮಾಡಿದ ಸಲ್ಮಾನ್ ಖಾನ್

  |

  ಬಾಲಿವುಡ್‌ ನಟ ಶಾರೂಖ್ ಖಾನ್ ಪುತ್ರ ಬಂಧನದ ನಂತರ ಮೆಗಾಸ್ಟಾರ್ ಸಲ್ಮಾನ್ ಖಾನ್ ಬಾದ್‌ಶಾ ಮನೆಗೆ ಭೇಟಿ ನೀಡಿದ್ದಾರೆ. ಭಾನುವಾರ (ಅಕ್ಟೋಬರ್ 3) ಸಂಜೆ ವೇಳೆಗೆ ಮುಂಬೈನ ಮಾನತ್‌ನಲ್ಲಿರುವ ಶಾರೂಖ್ ನಿವಾಸಕ್ಕೆ ಸಲ್ಲು ಭೇಟಿ ನೀಡಿ ಪ್ರಸ್ತುತ ಘಟನೆ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

  ಅರಬ್ಬಿ ಸಮುದ್ರದಲ್ಲಿ ಸಂಚರಿಸುತ್ತಿದ್ದ ಕ್ರೂಸರ್ ಶಿಪ್‌ನಲ್ಲಿ ನಡೆದ ಪಾರ್ಟಿಯಲ್ಲಿ ಶಾರೂಖ್ ಖಾನ್ ಪುತ್ರ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ವೇಳೆ ಎನ್‌ಸಿಬಿ ಪೊಲೀಸರು ದಾಳಿ ಮಾಡಿದ್ದು, ನಿಷೇದಿತ ಮಾದಕ ವಸ್ತುಗಳು ಸಿಕ್ಕಿವೆ ಎಂದಿ ವರದಿಯಾಗಿದೆ. ಈ ಹಿನ್ನೆಲೆ ಆರ್ಯನ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.

  ಡ್ರಗ್ಸ್ ಪ್ರಕರಣ: ಎನ್‌ಸಿಬಿ ವಶಕ್ಕೆ ಶಾರುಖ್ ಪುತ್ರ, ನ್ಯಾಯಾಲಯದಲ್ಲಿ ನಡೆದಿದ್ದೇನು?ಡ್ರಗ್ಸ್ ಪ್ರಕರಣ: ಎನ್‌ಸಿಬಿ ವಶಕ್ಕೆ ಶಾರುಖ್ ಪುತ್ರ, ನ್ಯಾಯಾಲಯದಲ್ಲಿ ನಡೆದಿದ್ದೇನು?

  ಡ್ರಗ್ಸ್ ಪಾರ್ಟಿ ಇದಾಗಿತ್ತು ಎಂದು ಆರೋಪವಿದ್ದು, ಆರ್ಯನ್ ಖಾನ್ ಸೇವಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ಬೆಳವಣಿಗೆ ಈಗ ಬಾಲಿವುಡ್‌ನ ಹಾಟ್‌ ಟಾಪಿಕ್ ಆಗಿದೆ. ಈ ಹಿನ್ನೆಲೆ ನಟ ಶಾರೂಖ್ ಖಾನ್ ಮನೆಗೆ ಸಲ್ಮಾನ್ ಖಾನ್ ಭೇಟಿ ನೀಡಿದ್ದಾರೆ.

  ಕೇವಲ ಆರ್ಯನ್ ಖಾನ್ ಮಾತ್ರವಲ್ಲ ಜೊತೆಗೆ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಮರ್ಚೆಂಟ್ ಹಾಗೂ ಮುನ್‌ಮುನ್ ಧಮೇಚಾ ಸಹ ಈ ದಾಳಿ ವೇಳೆ ಬಂಧನವಾಗಿದ್ದು, ಈ ಸಂಬಂಧ ಸಲ್ಮಾನ್ ಖಾನ್ ಮತ್ತು ಶಾರೂಖ್ ಖಾನ್ ನಿವಾಸಕ್ಕೆ ಹೋಗಿದ್ದಾರೆ ಎನ್ನಲಾಗಿದೆ. ಶಾರೂಖ್ ಮನೆಗೆ ಸಲ್ಮಾನ್ ಹೋಗಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ಮಾಧ್ಯಗಳ ವರದಿ ಪ್ರಕಾರ, ಎನ್‌ಡಿಪಿಎಸ್‌ ಕಾಯ್ದೆಯ ಸೆಕ್ಷನ್ 27, 20ಬಿ, ಸೆಕ್ಷನ್ 8(ಸಿ) ಹಾಗೂ ಸೆಕ್ಷನ್ 35ರ ಪ್ರಕಾರ ಕೇಸ್ ದಾಖಲಿಸಲಾಗಿದೆ. ಈ ಸೆಕ್ಸನ್‌ಗಳ ಅಡಿಯಲ್ಲಿ ಜಾಮೀನು ಸಿಗುವುದು ಸುಲಭವಲ್ಲ ಎಂದು ಎಕ್ಸ್‌ಪರ್ಟ್‌ಗಳು ಹೇಳುತ್ತಿದ್ದಾರೆ. ಇನ್ನು ಆರೋಪ ಸಾಬೀತಾದರೆ ಹತ್ತು ವರ್ಷ ಕಠಿಣ ಶಿಕ್ಷೆಯಾಗುತ್ತದೆ ಎಂಬ ಮಾಹಿತಿ ಇದೆ.

  ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರನ ಬಂಧನಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರನ ಬಂಧನ

  ಆರ್ಯನ್ ಖಾನ್ ಹಾಗೂ ಇತರ ಬಂಧಿತರನ್ನು ಅಡಿಷನಲ್ ಚೀಫ್ ಮೆಟ್ರೊಪಾಲಿಟಿನ್ ಮ್ಯಾಜಿಸ್ಟ್ರೇಟ್ ಆರ್‌.ಕೆ.ರಾಜೇಭೋಸ್ಲೆ ಎದುರು ಹಾಜರುಪಡಿಸಲಾಯಿತು. ಬಂಧಿತರು ಹಾಗೂ ಡ್ರಗ್ಸ್ ಪೆಡ್ಲರ್‌ಗಳು, ಸಪ್ಲೈಯರ್ಸ್‌ಗಳ ನಡುವೆ ನಿಯಮಿತ ಸಂಭಾಷಣೆ ನಡೆದಿರುವುದು ವಾಟ್ಸ್‌ಆಪ್‌ ಚಾಟ್‌ನಿಂದ ಬಹಿರಂಗವಾಗಿದೆಯಾದ್ದರಿಂದ ಹೆಚ್ಚಿನ ತನಿಖೆ ಅವಶ್ಯಕತೆ ಇದೆ ಎಂದು ಎನ್‌ಸಿಬಿ ನ್ಯಾಯಾಲಯದಲ್ಲಿ ಹೇಳಿ ಅಕ್ಟೋಬರ್ 05ರವರೆಗೆ ಬಂಧಿತರನ್ನು ಎನ್‌ಸಿಬಿ ವಶಕ್ಕೆ ನೀಡಬೇಕೆಂದು ಮನವಿ ಮಾಡಿತು.

  Salman Khan meets Shah Rukh Khan at his residence

  ವಿಚಾರಣೆ ನಡೆಸಿದ ನ್ಯಾಯಾಲಯ ಮೂವರನ್ನು ಒಂದು ದಿನದ ಮಟ್ಟಿಗೆ ಎನ್‌ಸಿಬಿ ವಶಕ್ಕೆ ನೀಡಿ ಆದೇಶ ನೀಡಿದೆ. ಮುಂದಿನ ವಿಚಾರಣೆಯು ಸೋಮವಾರ (ಅಕ್ಟೋಬರ್ 04) ರ ಮಧ್ಯಾಹ್ನ ನಡೆಸಲು ತೀರ್ಮಾನಿಸಿದೆ.

  ಆರ್ಯನ್ ಖಾನ್ ಪರ ವಕಾಲತ್ತು ವಹಿಸಿರುವ ಹಿರಿಯ ವಕೀಲ ಸತೀಶ್ ಮಾನೆಶಿಂಧೆ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದು, ''ನನ್ನ ಕಕ್ಷೀಧಾರ ಆರ್ಯನ್ ಖಾನ್ ಅನ್ನು ಪಾರ್ಟಿಗೆ ಆಹ್ವಾನಿಸಲಾಗಿತ್ತು ಹಾಗಾಗಿ ಅವರು ಹೋಗಿದ್ದರು. ಆರ್ಯನ್ ಬಳಿ ಯಾವುದೇ ಮಾದಕ ವಸ್ತುಗಳು ದೊರೆತಿಲ್ಲ, ಅವರ ಸೇವಿಸಿಲ್ಲ'' ಎಂದಿದ್ದಾರೆ.

  English summary
  Bollywood actor Salman Khan meets Shah Rukh Khan at his residence after Aryan Khan arrest.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X