ಬಾಕ್ಸಾಫೀಸ್ ಸುಲ್ತಾನ್ : 100 ಕೋಟಿ ರು ಗಳಿಸಿದ ಸಲ್ಮಾನ್ ಫಿಲಂಗಳು

By ಜೇಮ್ಸ್ ಮಾರ್ಟಿನ್

ಬಾಲಿವುಡ್ ನಲ್ಲಿ ನೂರು ಕೋಟಿ ಗಳಿಕೆ ಮ್ಯಾಜಿಕ್ ಶುರುವಾಗಿದ್ದು ಅಮೀರ್ ಖಾನ್ ನಟನೆಯ ಘಜನಿ ಚಿತ್ರದಿಂದ ಇರ್ಬೇಕು. 2008ರಲ್ಲಿ ತೆರೆಕಂಡ ಘಜನಿ ಚಿತ್ರ ನಿರ್ಮಾಪಕರಿಗೆ ಮ್ಯಾಜಿಕ್ ನಂಬರ್ ದಾಟುವ ಕನಸು ನನಸು ಮಾಡಿತ್ತು.

ಬಾಕ್ಸಾಫೀಸಿನ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿ ಮುನ್ನುಗಿದೆ. ಅಮೀರ್ ಖಾನ್ ಚಿತ್ರದ ಭಾರತದ ಗಳಿಕೆಯೇ ನೂರು ಕೋಟಿ ಮೀರಿ ಬೆಳೆಯಿತು.

ಇದರ ಜೊತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗಳಿಕೆ, ಸ್ಯಾಟಲೈಟ್, ಮ್ಯೂಸಿಕ್ ಹಾಗೂ ಡಿಜಿಟಲ್ ಹಕ್ಕು ಮಾರಾಟ ದರ ಸೇರಿಸಿದರೆ ಘಜನಿ ಭರ್ಜರಿ ಬೆಳೆ ತೆಗೆದಿದ್ದು ಎಲ್ಲರಿಗೂ ಮಾದರಿಯಾಯಿತು. ಇದಾದ ಬಳಿಕ ಸಲ್ಮಾನ್ ಖಾನ್ ಚಿತ್ರಗಳ 100 ಕೋಟಿ ಕ್ಲಬ್ ಭರಾಟೆ ಮುಂದುವರೆಯಿತು.

ಅಮೀರ್ ಅವರ 3 ಈಡಿಯಟ್ ಚಿತ್ರದ ಮೂಲಕ 100 ಕೋಟಿ ರು ಕ್ಲಬ್ ಸೇರಿದ ನಂತರ ಸಲ್ಮಾನ್ ಖಾನ್ ಹಾಗೂ ಅಜಯ್ ದೇವಗನ್ ಅವರು ದಬಾಂಗ್ ಮತ್ತು ಗೋಲ್ ಮಾಲ್ 3 ಚಿತ್ರದ ಮೂಲಕ ಕ್ಲಬ್ ಸೇರಿದರು. ಖಾನ್ ತ್ರಯರಲ್ಲದೆ ಅಜಯ್, ಅಕ್ಷಯ್ ಸೇರಿದಂತೆ ಇನ್ನಿತರ ಸ್ಟಾರ್ ಗಳು ಕೂಡಾ 100 ಕೋಟಿ ಕ್ಲಬ್ಬಿನಲ್ಲಿ ಸೇರಿಕೊಂಡರು.

5 ದಿನಗಳಲ್ಲಿ 100 ಕೋಟಿ ರು ಕ್ಲಬ್ ಸೇರಿದ್ದ ಸಲ್ಲೂ ಚಿತ್ರ

5 ದಿನಗಳಲ್ಲಿ 100 ಕೋಟಿ ರು ಕ್ಲಬ್ ಸೇರಿದ್ದ ಸಲ್ಲೂ ಚಿತ್ರ

ತ್ವರಿತಗತಿಯಲ್ಲಿ 100 ಕೋಟಿ ರು ಕ್ಲಬ್ ಸೇರಿದ ಸಾಧನೆ ಸಲ್ಮಾನ್ ಖಾನ್ ಅಭಿನಯದ ದಬ್ಬಾಂಗ್ ಚಿತ್ರ ಕೇವಲ 5 ದಿನಗಳಲ್ಲಿ 100 ಕೋಟಿ ರು ಕ್ಲಬ್ ಸೇರಿತ್ತು. ಒಟ್ಟಾರೆ, ಸಲ್ಮಾನ್ ಅಭಿನಯದ ಹತ್ತಾರು ಚಿತ್ರಗಳು 100 ಕೋಟಿ ರು ಗಳಿಕೆ ಸೇರಿದ್ದು, ಬಾಕ್ಸಾಫೀಸ್ ನಲ್ಲಿ ಸುಲ್ತಾನ್ ಎನಿಸಿಕೊಂಡಿದ್ದಾರೆ.

2010: ದಬ್ಬಾಂಗ್ 10 ದಿನಗಳಲ್ಲೇ 100 ಕೋಟಿ ರು

2010: ದಬ್ಬಾಂಗ್ 10 ದಿನಗಳಲ್ಲೇ 100 ಕೋಟಿ ರು

ಸುಮಾರು 1,800 ಸ್ಕ್ರೀನ್ ಗಳಲ್ಲಿ ಸೆ.10, 2010ರಂದು ತೆರೆ ಕಂಡ ಸಲ್ಮಾನ್ ಖಾನ್ ಚಿತ್ರ ದಬ್ಬಾಂಗ್ 10 ದಿನಗಳಲ್ಲೇ 100 ಕೋಟಿ ರು ಕ್ಲಬ್ ಸೇರಿತು. ಈ ಕ್ಲಬ್ ಸೇರಿದ ಸಲ್ಮಾನ್ ಖಾನ್ ಮೊದಲ ಚಿತ್ರ ಎನಿಸಿತು.ಒಟ್ಟಾರೆ ಭಾರತದಲ್ಲಿ 138 ಕೋಟಿ ರು.ಗೂ ಅಧಿಕ ಮೊತ್ತ ಗಳಿಸಿತು.

2011ರಲ್ಲಿ ಸಲ್ಮಾನ್ ಖಾನ್ ಚಿತ್ರ 'ರೆಡಿ'

2011ರಲ್ಲಿ ಸಲ್ಮಾನ್ ಖಾನ್ ಚಿತ್ರ 'ರೆಡಿ'

2011ರ ಜೂ.3 ರಂದು ತೆರೆ ಕಂಡ ಸಲ್ಮಾನ್ ಖಾನ್ ಚಿತ್ರ 'ರೆಡಿ' ಕೇವಲ 1900 ಚಿತ್ರಮಂದಿರಗಳಲ್ಲಿ ತೆರೆ ಕಂಡಿತ್ತು. ಎರಡು ವಾರಗಳಲ್ಲಿ 100 ಕೋಟಿ ರು ಗಳಿಕೆ ಮಾಡಿದ ಈ ಚಿತ್ರ ದೇಶಿ ಮಾರುಕಟ್ಟೆಯಲ್ಲಿ ಒಟ್ಟಾರೆ 119.78 ಕೋಟಿ ರು ಗಳಿಸಿತು.

2011ರಲ್ಲೇ ಬಾಡಿಗಾರ್ಡ್ ಕೂಡಾ 100 ಕೋಟಿ

2011ರಲ್ಲೇ ಬಾಡಿಗಾರ್ಡ್ ಕೂಡಾ 100 ಕೋಟಿ

2011ರಲ್ಲಿ ತೆರೆ ಕಂಡ ರೆಡಿ ಹಾಗೂ ಬಾಡಿಗಾರ್ಡ್ ಎರಡು ರಿಮೇಕ್ ಚಿತ್ರಗಳು ಕೂಡಾ ಒಂದೇ ವರ್ಷದಲ್ಲಿ 100 ಕೋಟಿ ರು ಕ್ಲಬ್ ಸೇರಿ ದಾಖಲೆ ಬರೆದವು.

2012ರಲ್ಲಿ ದಬ್ಬಾಂಗ್ 2- 6 ದಿನಗಳಲ್ಲಿ 100 ಕೋಟಿ ರು

2012ರಲ್ಲಿ ದಬ್ಬಾಂಗ್ 2- 6 ದಿನಗಳಲ್ಲಿ 100 ಕೋಟಿ ರು

ಡಿಸೆಂಬರ್ 21, 2012ರಲ್ಲಿ 3000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆ ಕಂಡ ದಬ್ಬಾಂಗ್ 2 ಚಿತ್ರ ಒಟ್ಟಾರೆ 6 ದಿನಗಳಲ್ಲೇ 108.37 ಕೋಟಿ ಗಳಿಸಿ ಸಲ್ಮಾನ್ ಖಾನ್ ಪವರ್ ತೋರಿಸಿತು.

2012ರಲ್ಲಿ ಎಕ್ ಥಾ ಟೈಗರ್ ಚಿತ್ರ

2012ರಲ್ಲಿ ಎಕ್ ಥಾ ಟೈಗರ್ ಚಿತ್ರ

ಆಗಸ್ಟ್ 15, 2012 ರಂದು ತೆರೆ ಕಂಡ ಎಕ್ ಥಾ ಟೈಗರ್ ಚಿತ್ರ ಸಲ್ಮಾನ್ -ಕತ್ರೀನಾ ಜೋಡಿಯ ಲಾಭದಿಂದ ಮೊದಲ ವಾರ 16 ಕೋಟಿ ರು. ಮಿಶ್ರ ಪ್ರತಿಕ್ರಿಯೆ ನಡುವೆಯೂ ಭಾರತದ ಬಾಕ್ಸಾಫೀಸ್ ನಲ್ಲಿ ಒಟ್ಟಾರೆ 199 ಕೋಟಿ ರು ಗಳಿಕೆ ಮಾಡಿತು

2014ರಲ್ಲಿ ಜೈ ಹೋ

2014ರಲ್ಲಿ ಜೈ ಹೋ

2014ರ ಜನವರಿ 24ರಂದು ತೆರೆ ಕಂಡ 65 ಕೋಟಿ ರು ಬಜೆಟ್ ನಿಂದ ಜೈ ಹೋ ಚಿತ್ರವು 3900 ಸ್ಕ್ರೀನ್ ಗಳಲ್ಲಿ ತೆರೆ ಕಂಡು ಸುಮಾರು 183 ಕೋಟಿ ರು ಗಳಿಕೆ ಕಂಡಿತು. ಒಟ್ಟಾರೆ, ವಿಶ್ವದೆಲ್ಲೆಡೆ ಗಳಿಕೆ ಒಟ್ಟುಗೂಡಿಸಿದರೆ ಮೊದಲ ಮೂರು ದಿನಗಳಲ್ಲೇ 200 ಕೋಟಿ ರು ಗಳಿಸಿ ದಾಖಲೆ ಬರೆಯಿತು.

2014ರಲ್ಲಿ ಕಿಕ್

2014ರಲ್ಲಿ ಕಿಕ್

ಜುಲೈ 25, 2014ರಲ್ಲಿ ತೆರೆ ಕಂಡ 'ಕಿಕ್' ಚಿತ್ರವು 100 ಕೋಟಿ ಬಜೆಟ್ ನ ಚಿತ್ರ ಒಟ್ಟಾರೆ 402 ಕೋಟಿ ರು ಗಳಿಸಿತು. ಪಾಕಿಸ್ತಾನದಲ್ಲಿ 20.01 ಕೋಟಿ ರು ಗಳಿಸಿದ್ದು ವಿಶೇಷ.

2015 ಬಜರಂಗಿ ಭಾಯಿ ಜಾನ್

2015 ಬಜರಂಗಿ ಭಾಯಿ ಜಾನ್

2015 ಜುಲೈ 17ರಲ್ಲಿ ತೆರೆ ಕಂಡ ಬಜರಂಗಿ ಭಾಯಿಜಾನ್ ಚಿತ್ರವು 90 ಕೋಟಿ ರು ಹೂಡಿಕೆ ಮಾಡಿ 970 ಕೋಟಿ ರು ಗಳಿಸಿದ ಚಿತ್ರ. ಭಾರಿ ಜನ ಮೆಚ್ಚುಗೆ ಗಳಿಸಿದ ಚಿತ್ರ. ಮೊದಲ ವಾರದಲ್ಲಿ 333 ಕೋಟಿ ರು ಗಳಿಸಿದ್ದು, ಭಾರತದಲ್ಲೇ 444.92 ಕೋಟಿ ರು ಗಳಿಸಿತು.

2015 ಪ್ರೇಮ್ ರತನ್ ಧನ್ ಪಾಯೋ

2015 ಪ್ರೇಮ್ ರತನ್ ಧನ್ ಪಾಯೋ

2015ರ ನವೆಂಬರ್ 12ರಂದು ತೆರೆ ಕಂಡ ಸುಂದರ ಸಾಂಸಾರಿಕ ಚಿತ್ರ ಪ್ರೇಮ್ ರತನ್ ಧನ್ ಪಾಯೋಗೆ 150 ಕೋಟಿ ರು ಹೂಡಿಕೆ ಮಾಡಲಾಗಿತ್ತು. ಅಂದಾಜು 432 ಕೋಟಿ ರು ಗಳಿಕೆ ಕಂಡಿತು. ಬಹು ತಾರಾಗಣದ ಈ ಚಿತ್ರಕ್ಕೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಬಿಡುಗಡೆಯಾದ ದಿನವೆ 40.35 ಕೋಟಿ ರು ಗಳಿಸಿ ದಾಖಲೆ ಬರೆದಿತ್ತು.

2016 ಸುಲ್ತಾನ್

2016 ಸುಲ್ತಾನ್

ಸುಮಾರು 145 ಕೋಟಿ ರು ಬಂಡವಾಳದೊಂದಿಗೆ ತಯಾರದ ಕುಸ್ತಿಪಟುವಿನ ಕಥೆಯುಳ್ಳ ಸುಲ್ತಾನ್ ಚಿತ್ರವು ಒಟ್ಟಾರೆ, 589.25 ಕೋಟಿ ರು ಗಳಿಸಿತು. ಈ ಪೈಕಿ 421.25 ಕೋಟಿ ರು ಭಾರತದಲ್ಲೇ ಗಳಿಕೆ ಕಂಡಿತು.

2017 ಟ್ಯೂಬ್ ಲೈಟ್

2017 ಟ್ಯೂಬ್ ಲೈಟ್

23 ಜೂನ್ 2017ರಂದು ತೆರೆ ಕಂಡ ಟ್ಯೂಬ್ ಲೈಟ್ ಚಿತ್ರಕ್ಕೆ ವಿಮರ್ಶಕರಿಂದ ಮಿಶ್ರಪ್ರತಿಕ್ರಿಯೆ ಬಂದರೂ ಪ್ರೇಕ್ಷಕ ಕೈ ಬಿಡಲಿಲ್ಲ. 135 ಕೋಟಿ ರು ಬಂಡವಾಳದ ಈ ಚಿತ್ರ ಒಟ್ಟಾರೆ 211.14 ಕೋಟಿ ರು ಗಳಿಸಿತು.

2017 ಟೈಗರ್ ಜಿಂದಾ ಹೈ

2017 ಟೈಗರ್ ಜಿಂದಾ ಹೈ

2017ರಲ್ಲಿ ಡಿಸೆಂಬರ್ 22ರಂದು ತೆರೆ ಕಂಡ ಟೈಗರ್ ಜಿಂದಾ ಹೈ ಚಿತ್ರಕ್ಕೆ 210 ಕೋಟಿ ರು ಹೂಡಿಕೆ ಮಾಡಿ 565.1 ಕೋಟಿ ರು ಗಳಿಸಿತು. ಮೊದಲ ನಾಲ್ಕು ದಿನಗಳಲ್ಲಿ ಭಾರತದಲ್ಲೇ 154 ಕೋಟಿ ರುಗಳಿಸಿತು.

2018 : ರೇಸ್ 3

2018 : ರೇಸ್ 3


ಜೂನ್ 15ರಂದು ತೆರೆ ಕಂಡ ಬಹು ತಾರಾಗಣದ ರೇಸ್ 3 ಚಿತ್ರ ಒಟ್ಟಾರೆ 303 ಕೋಟಿ ರು ಗಳಿಸಿತು. 1000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಏಕಕಾಲಕ್ಕೆ ತೆರೆ ಕಂಡ ಚಿತ್ರಕ್ಕೆ ಉತ್ತಮ ವಿಮರ್ಶೆ ಸಿಕ್ಕಿರಲಿಲ್ಲ. ಆದರೆ, 39.87 ಕೋಟಿ ರು ಮೊದಲ ದಿನವೇ ಗಳಿಸಿತ್ತು.

More from Filmibeat

English summary
Salman Khan leads the Actors and Actresses who have made it to the Rs 100-Crore Club in Bollywood. Salman Khan has more than 10 movies more than any other stars of the industry. Salman starrer Bharat released on Eid also got good opening at the Box office.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X