»   » ಟೈಗರ್ ಸಲ್ಲೂ 'ಶೇರ್ ಖಾನ್' ನ್ಯೂ ಲುಕ್ ನೋಡಿ

ಟೈಗರ್ ಸಲ್ಲೂ 'ಶೇರ್ ಖಾನ್' ನ್ಯೂ ಲುಕ್ ನೋಡಿ

Posted By:
Subscribe to Filmibeat Kannada
ಹೊಸ ದಾಖಲೆ ಬರೆದ 'ಏಕ್ ಥಾ ಟೈಗರ್' ಚಿತ್ರದ ಮೂಲಕ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಣೆಬರಹ ಬದಲಾಗಿದ್ದು ಈಗ ಹಳೆಯ ಕಥೆ. ಹೊಸ ಸುದ್ದಿಯೇನೆಂದರೆ, ಇದೀಗ 'ಟೈಗರ್' ಸಲ್ಲೂ ಲುಕ್ ಕೂಡ ಚೇಂಜ್ ಆಗಿದೆ. ಸಲ್ಲೂ ಸದ್ಯ ಡೇರ್ ಅಂಡ್ ಡ್ಯಾಶ್ ಲುಕ್ ನಲ್ಲಿ ಕಂಗೊಳಿಸುತ್ತಿದ್ದಾರೆ. ಈ ಲುಕ್ ಬರಲಿರುವ 'ಶೇರ್ ಖಾನ್' ಚಿತ್ರಕ್ಕಾಗಿ ಸಲ್ಲೂ ಮುಖ ಸೇರಿದೆ. ಈ ಚಿತ್ರದಲ್ಲಿ ಸಲ್ಲೂ ಸೂಪರ್ ಮ್ಯಾನ್ ಪಾತ್ರ ನಿರ್ರವಹಿಸಲಿದ್ದಾರೆ.

ಸಹೋದರ ಸೊಹೈಲ್ ಖಾನ್ ನಿರ್ದೇಶನದ 'ಶೇರ್ ಖಾನ್' ಚಿತ್ರದಲ್ಲಿ ಸೂಪರ್ ಮ್ಯಾನ್ ಪಾತ್ರ ಮಾಡಲಿರುವ ಸಲ್ಮಾನ್ ಖಾನ್, ಜೊತೆಗೆ ರೊಮ್ಯಾಂಟಿಕ್ ಪಾತ್ರವನ್ನೂ ನಿಭಾಯಿಸಬೇಕಿದೆ. ಹೀಗಾಗಿ ಎರಡೂ ಪಾತ್ರಕ್ಕೆ ನ್ಯಾಯ ಒದಗಿಸಲು ಸಲ್ಲೂ ಈ ವೇಶಕ್ಕೆ ಮೊರೆಹೋಗಿದ್ದಾರೆ. ಆದರೆ ಸಲ್ಲೂ ಈ ಲುಕ್, ಅತ್ಯಾಕರ್ಷಕವಾಗಿದ್ದು ಅಭಿಮಾನಿಗಳೆಲ್ಲರ ಮೆಚ್ಚುಗೆ ಗಳಿಸಿದೆ. ಚಿತ್ರ ಬಿಡುಗಡೆಯಾದ ಮೇಲೆ ಅದೆಷ್ಟು ಜನ ಸಲ್ಮಾನ್ ಖಾನ್ ಈ ಲುಕ್ ಅನುಕರಿಸುತ್ತಾರೋ!

ಸುದ್ದಿ ಮಾಧ್ಯವೊಂದಕ್ಕೆ ಸಿಕ್ಕ ಮಾಹಿತಿ ಪ್ರಕಾರ, 'ಈ ಶೇರ್ ಖಾನ್ ಚಿತ್ರಕ್ಕಾಗಿ ಇಡೀ ಒಂದು ವರ್ಷ ಸಲ್ಮಾನ್ ಖಾನ್ ಚಿತ್ರೀಕರಣದಲ್ಲಿ ಭಾಗವಹಿಸಬೇಕಿದೆ. ಸಲ್ಲೂ ಸಹೋದರ ಸೋಹೈಲ್ ಈ ವಿಷಯವನ್ನು ಈಗಾಗಲೇ ಸ್ಪಷ್ಟಪಡಿಸಿದ್ದು, ಮುಂದಿನ ವರ್ಷದ ಮಧ್ಯಂತರದಲ್ಲಿ (2013) ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಈ ಚಿತ್ರ ಬಿಡುಗಡೆ ಕಾಣಬೇಕಿದೆ. ಆದಷ್ಟು ಬೇಗ ತೆರೆಗೆ ತರುವ ಯೋಚನೆ ಈ ಇಬ್ಬರೂ ಸಹೋದರರಿಗಿದೆ.

ಆಶ್ಚರ್ಯವೆಂದರೆ, 'ಏಕ್ ಥಾ ಟೈಗರ್' ನಂತರ ಸಲ್ಲೂ ಸಂಭಾವನೆ ರು. 100 ಕೋಟಿ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಸಹೋದರನ ಚಿತ್ರದಲ್ಲಿ ಸದ್ಯಕ್ಕಲ್ಲದೇ ಮುಂದಿನ ವರ್ಷದ ಮಧ್ಯಂತರದವರೆಗೂ ಬಿಜಿಯಾಗಿರುವ ಸಲ್ಲೂ, ಬೇರೆಯವರ ಚಿತ್ರಕ್ಕೆ ಕಾಲ್ ಶೀಟ್ ಕೊಡುವದೇ ಕಷ್ಟ ಎನ್ನಲಾಗುತ್ತಿದೆ. ಕಾರಣ, ಈ 'ಶೇರ್ ಖಾನ್', ಸಹೋದದರಿಬ್ಬರ ಪ್ರತಿಷ್ಠಯನ್ನು ಪಣಕ್ಕಿಟ್ಟು, ಹೊಸ ದಾಖಲೆ ಬರೆಯಲು ಮಾಡುತ್ತಿರುವ ಚಿತ್ರವಾಗಿದೆ. ಸದ್ಯಕ್ಕೆ ಸಲ್ಲೂ ಲುಕ್ ನೋಡಿ...! (ಏಜೆನ್ಸೀಸ್)

English summary
Salman Khan has changed his look for Sher Khan . Salman was seen sporting a French beard. Salman Khan is looking dashingly handsome in this picture.
 
Please Wait while comments are loading...