For Quick Alerts
  ALLOW NOTIFICATIONS  
  For Daily Alerts

  ಗಡ್ಡದಾರಿಯಾಗಿ ರಷ್ಯಾ ಬೀದಿಯಲ್ಲಿ ಕಾಣಿಸಿಕೊಂಡ ಸಲ್ಮಾನ್ ಖಾನ್: ಹೊಸ ಅವತಾರ ಸಖತ್ ವೈರಲ್

  |

  ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಬಾಲಿವುಡ್ ನ ಮೋಸ್ಟ್ ಬ್ಯಾಚುಲರ್ ಸ್ಟಾರ್ ಸಲ್ಮಾನ್ ಸದಾ ಹ್ಯಾಂಡ್ ಸಮ್ ಲುಕ್ ನಲ್ಲಿ ಅಭಿಮಾನಿಗಳ ಮನಸೆಳೆಯುತ್ತಿದ್ದರು. ಆದರೀಗ ಗಡ್ಡದಾರಿಯಾಗಿ ವಿಚಿತ್ರ ಅವತಾರದಲ್ಲಿ ದರ್ಶನ ನೀಡುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

  ಅಂದಹಾಗೆ ಸಲ್ಮಾನ್ ಸದ್ಯ ರಷ್ಯಾದಲ್ಲಿ ಬೀಡು ಬಿಟ್ಟಿದ್ದಾರೆ. ಕೆಂಪು ಬಣ್ಣದ ಉದ್ದ ದಾಡಿ ಮತ್ತು ಉದ್ದ ಕೂದಲು ಬಿಟ್ಕೊಂಡು ಸಲ್ಮಾನ್ ರಷ್ಯ ಬೀದಿಯಲ್ಲಿ ಓಡಾಡಿದ್ದಾರೆ. ಗುರುತೇ ಸಿಗದಹಾಗೆ ಬದಲಾಗಿರುವ ಬ್ಯಾಡ್ ಬಾಯ್ ಹೊಸ ಅವತಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ನಿಜಕ್ಕೂ ಸಲ್ಮಾನ್ ಖಾನ್ ಅವರೇನಾ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

  ಅಂದಹಾಗೆ ಇದು ಸಲ್ಮಾನ್ ಖಾನ್ ರಿಯಲ್ ಲುಕ್ ಅಂತಾ ಅಚ್ಚರಿ ಪಡಬೇಡಿ. ಸಲ್ಲು ಹೀಗೆ ಬದಲಾಗಿದ್ದು ಮುಂದಿನ ಸಿನಿಮಾಗಾಗಿ. ದಬಾಂಗ್ ಸ್ಟಾರ್ ಸದ್ಯ ಬಹುನಿರೀಕ್ಷೆಯ ಟೈಗರ್-3 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದು ಟೈಗರ್ ಪ್ರಾಂಚೈಸಿಯ ಮೂರನೆ ಸರಣಿ ಇದಾಗಿದೆ. ಏಕ್ತಾ ಟೈಗರ್ ಮತ್ತು ಟೈಗರ್ ಜಿಂದಾ ಹೈ ಸಿನಿಮಾದ ಮುಂದುವರೆದ ಭಾಗ ಟೈಗರ್-3. ಈ ಚಿತ್ರಕ್ಕೆ ಮನೀಶ್ ಮಲ್ಹೋತ್ರ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಈ ಚಿತ್ರದ ಚಿತ್ರೀಕರಣ ಸದ್ಯ ರಷ್ಯಾದಲ್ಲಿ ನಡೆಯುತ್ತಿದ್ದೆ. ಇತ್ತೀಚಿಗಷ್ಟೆ ಸಲ್ಮಾನ್ ಮತ್ತು ತಂಡ ರಷ್ಯಾಗೆ ತೆರಳಿದ್ದು, ಭರ್ಜರಿಯಾಗಿ ಚಿತ್ರೀಕರಣ ಮಾಡುತ್ತಿದೆ ಸಿನಿಮಾತಂಡ. ಈ ಚಿತ್ರದಲ್ಲಿ ಸಲ್ಮಾನ್ ವಿಭಿನ್ನವಾಗಿ ಕಾಣಿಸಿಕೊಳ್ಳಲುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ. ಟೈಗರ್-3ನಲ್ಲಿ ಸಲ್ಮಾನ್ ರಾ ಏಜೆಂಟ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಸದ್ಯ ಲೀಕ್ ಆಗಿರುವ ಫೋಟೋಗಳಲ್ಲಿ ಸಲ್ಮಾನ್ ಖಾನ್ ಜೊತೆ ಸಹೋದರ ಸೊಹೈಲ್ ಖಾನ್ ಪುತ್ರ ನಿರ್ವಾನ್ ಖಾನ್ ಸಹ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಸಲ್ಮಾನ್ ಜೊತೆ ನಿರ್ವಾನ್ ಕೂಡ ಕೆಲಸ ಮಾಡುತ್ತಿದ್ದಾರೆ.

  ಚಿತ್ರೀಕರಣ ಸಮಯದಲ್ಲಿ ಸಲ್ಮಾನ್ ಅಭಿಮಾನಿಗಳ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿವೆ. ಇನ್ನು ವಿಶೇಷ ಎಂದರೆ ಸಿನಿಮಾದಲ್ಲಿ ಸಲ್ಮಾನ್ ಗೆ ನಾಯಕಿಯಾಗಿ ಕತ್ರಿನಾ ಕೈಫ್ ಕಾಣಿಸಿಕೊಂಡಿದ್ದಾರೆ. ಆದರೆ ಸದ್ಯ ಲೀಕ್ ಆಗಿರುವ ಫೋಟೋಗಳಲ್ಲಿ ಕತ್ರಿನಾ ಎಲ್ಲೂ ಕಾಣಿಸಿಕೊಂಡಿಲ್ಲ. ಕತ್ರಿನಾ ಕೂಡ ಸಲ್ಲು ಜೊತೆ ರಷ್ಯಾಗೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಆದರೆ ಕ್ಯಾಟ್ ಲುಕ್ ಇನ್ನು ರಿವೀಲ್ ಆಗಿಲ್ಲ.

  Salman Khan new look for tiger-3 leaked on social media, goes viral

  ಟೈಗರ್-3 ಚಿತ್ರೀಕರಣ ಪ್ರಾರಂಭವಾಗಿ ಅನೇಕ ತಿಂಗಳಾಗಿದೆ. ಕೊರೊನಾ ಕಾರಣದಿಂದ ಚಿತ್ರೀಕರಣ ಸ್ಥಗಿತ ಮಾಡಲಾಗಿತ್ತು. ಇದೀಗ ಕೊರೊನಾ ಕೊಂಚ ಕಡಿಮೆ ಯಾಗುತ್ತಿದ್ದಂತೆ ಮತ್ತೆ ಚಿತ್ರೀಕರಣ ಪ್ರಾರಂಭವಾಗಿದ್ದು ವಿದೇಶಕ್ಕೆ ಹಾರಿದೆ ಚಿತ್ರತಂಡ. ಇನ್ನು ಟೈಗರ್-3 ಚಿತ್ರದ ಮತ್ತೊಂದು ಅಚ್ಚರಿಯ ಸುದ್ದಿ ಎಂದರೆ ಚಿತ್ರದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಶಾರುಖ್ ಸದ್ಯ ಅನೇಕ ವರ್ಷಗಳ ಬಳಿಕ ತೆರೆಮೇಲೆ ಬರಲು ಸಜ್ಜಾಗುತ್ತಿದ್ದಾರೆ. ಈಗಾಗಲೇ ಪಠಾಣ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಇನ್ನು ಅಧಿಕೃತವಾಗಿ ಘೋಷಣೆಯಾಗಿಲ್ಲ ಆದರೆ ಚಿತ್ರೀಕರಣ ಫೋಟೋಗಳು ಈಗಾಗಲೇ ವೈರಲ್ ಆಗಿವೆ.

  ಟೈಗರ್-3 ಚಿತ್ರದಲ್ಲಿ ಇಮ್ರಾನ್ ಹಶ್ಮಿ ಖಳನಾಯಕನಾಗಿ ನಟಿಸುತ್ತಿದ್ದಾರೆ. ಸಲ್ಮಾನ್ ಜೊತೆ ಕೆಲಸ ಮಾಡುವುದು ಅವರ ಕನಸಾಗಿದೆ ಎಂದು ಈ ಹಿಂದೆ ಇಮ್ರಾನ್ ಹೇಳಿದ್ದರು. ಇದೀಗ ಅವರ ಕನಸು ನನಸಾಗಿದೆ. ಸಲ್ಮಾನ್ ಖಾನ್ ಕೊನೆಯದಾಗಿ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಬಾಯ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಈ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ.

  English summary
  Bollywood Actor Salman Khan new look for tiger-3 leaked on social media, goes viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X