'ರಾಧೇ' ಬಳಿಕ ಸಲ್ಮಾನ್ ಖಾನ್ ಹೊಸ ಸಿನಿಮಾ ಘೋಷಣೆ
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಬ್ಯುಸಿ ನಟ. ಒಂದು ಸಿನಿಮಾ ಮುಗಿಯುತ್ತಿದ್ದಂತೆ ಇನ್ನೊಂದು ಚಿತ್ರದ ಶೂಟಿಂಗ್ನಲ್ಲಿ ತೊಡಗಿಕೊಳ್ಳುತ್ತಾರೆ. ದಬಾಂಗ್ 3 ಮುಗಿಸಿದ್ದ ಸಲ್ಲು ರಾಧೇ ಚಿತ್ರವನ್ನ ಈಗಾಗಲೇ ಆರಂಭಿಸಿದ್ದರು.
ಇದೀಗ, ರಾಧೇ ಬಳಿಕ ಯಾವ ಸಿನಿಮಾ ಮಾಡ್ಬೇಕು ಎನ್ನುವುದನ್ನು ಘೋಷಿಸಿದ್ದಾರೆ. ಸಾಜಿದ್ ನಾಡಿಯಾಡ್ವಾಲಾ ಜೊತೆ ಹೊಸ ಸಿನಿಮಾ ಮಾಡ್ತಿದ್ದು, ಆ ಚಿತ್ರಕ್ಕೆ 'ಕಭೀ ಈದ್ ಕಭೀ ದಿವಾಳಿ' ಎಂದು ಹೆಸರಿಡಲಾಗಿದೆ.
ಈ ಚಿತ್ರ 2021ರಲ್ಲಿ ಈದ್ ಪ್ರಯುಕ್ತ ತೆರೆಗೆ ಬರಲಿದೆ. ಸಾಜಿದ್ ನಾಡಿಯಾಡ್ವಾಲಾ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ಮಾಣ ಮಾಡಲಿದ್ದಾರೆ. ಹೌಸ್ ಫುಲ್ 4 ಖ್ಯಾತಿಯ ಫರ್ಹಾದ್ ಸಂಜಿ ನಿರ್ದೇಶನ ಮಾಡಲಿದ್ದಾರೆ.

ಕಳೆದ ಅಕ್ಟೋಬರ್ ನಲ್ಲಿ ರಾಧೇ ಸಿನಿಮಾವನ್ನು ಸಲ್ಮಾನ್ ಖಾನ್ ಘೋಷಿಸಿದ್ದರು. 2020ರ ಈದ್ ಹಬ್ಬಕ್ಕೆ ಈ ಚಿತ್ರ ಬರಲಿದೆ. ರಾಧೇ ಚಿತ್ರವನ್ನ ಪ್ರಭುದೇವ ನಿರ್ದೇಶನ ಮಾಡುತ್ತಿದ್ದಾರೆ. ದಿಶಾ ಪಟಾನಿ ಈ ಚಿತ್ರದಲ್ಲಿ ನಾಯಕಿಯಾಗಿದ್ದು, ರಣ್ದೀಪ್ ಹೂಡ ವಿಲನ್ ಆಗಿ ನಟಿಸುತ್ತಿದ್ದಾರೆ.
English summary
Bollywood star Salman khan announced his new movie titled ''Kabi Eid Kabhi Diwali''.


Click it and Unblock the Notifications