»   » ಬಾಲಿವುಡ್ ನಟ ಸಲ್ಮಾನ್ ಖಾನ್ ಈಗ 'ಮೆಂಟಲ್'

ಬಾಲಿವುಡ್ ನಟ ಸಲ್ಮಾನ್ ಖಾನ್ ಈಗ 'ಮೆಂಟಲ್'

Posted By:
Subscribe to Filmibeat Kannada
ಪ್ಯಾರ್, ಇಷ್ಕ್, ಲವ್, ಷಾದಿ ಎಂಬ ಶೀರ್ಷಿಕೆಗಳಲ್ಲೇ ರೀಲು ಸುತ್ತಿ ಸುತ್ತಿ ಸುಸ್ತಾದಂತಿದ್ದಾರೆ ಬಾಲಿವುಡ್ ಮಂದಿ. ಈಗ ನಮ್ಮ ದಕ್ಷಿಣ ಭಾರತದ ಶೀರ್ಷಿಕೆಗಳ ಕಡೆಗೆ ಕೊಂಚ ಗಮನ ಹರಿಸಿದಂತಿದೆ. ನಟ ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರಕ್ಕೆ 'ಮೆಂಟಲ್' ಎಂಬ ಶೀರ್ಷಿಕೆ ಬಹುತೇಕ ಖಚಿತವಾಗಿದೆ.

ತೆಲುಗಿನ ಯಶಸ್ವಿ ಚಿತ್ರ 'ಸ್ಟ್ಯಾಲಿನ್' ರೀಮೇಕ್ ಚಿತ್ರಕ್ಕೆ 'ಮೆಂಟಲ್' ಎಂದು ಹೆಸರಿಡಲು ತೀರ್ಮಾನಿಸಿದ್ದಾರೆ. ಮೂಲ ಸ್ಟ್ಯಾಲಿನ್ ಚಿತ್ರದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅಭಿನಯಿಸಿದ್ದರು. ಮೊದಲು 'ರಾಧೆ' ಎಂದುಕೊಳ್ಳಲಾಗಿತ್ತು. ಈಗ ಶೀರ್ಷಿಕೆಯನ್ನು 'ಮೆಂಟಲ್' ಎಂದಿಡಲು ಮುಂದಾಗಿದ್ದಾರೆ ಚಿತ್ರದ ನಿರ್ಮಾಪಕರು.

ಸಲ್ಲು ಸಹೋದರ ಸೋಹಿಲ್ ಖಾನ್ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಈಗಾಗಲೆ ಈ ಶೀರ್ಷಿಕೆ ಮತ್ತೊಬ್ಬರ ಹೆಸರಲ್ಲಿ ರಿಜಿಸ್ಟರ್ ಆಗಿದ್ದು, ಅವರಿಂದ ಅದೇ ಶೀರ್ಷಿಕೆಯನ್ನು ಪಡೆಯುವ ಪ್ರಯತ್ನವನ್ನು ಸೋಹೆಲ್ ಮಾಡುತ್ತಿದ್ದಾರೆ.

'ಮೆಂಟಲ್' ಶೀರ್ಷಿಕೆಯಲ್ಲಿ ಒಂಥರಾ ಮಾಸ್ ಅಫೀಲ್ ಇದೆ. ಹಾಗಾಗಿ ಇದೇ ಶೀರ್ಷಿಕೆ ಇಟ್ಟರೆ ಸೂಕ್ತ ಎಂದು ನಾವೆಲ್ಲಾ ತೀರ್ಮಾನಿಸಿದ್ದೇವೆ. ಇದಕ್ಕೆ ಸಲ್ಲು ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಶೀಘ್ರದಲ್ಲೇ ಈ ಚಿತ್ರದ ಉಳಿದ ವಿವರಗಳನ್ನು ನೀಡುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್)

English summary
Salman Khan and Sohail Khan are planning to work together in a film for a long time. Earlier it was said that the two will work together soon in Sher Khan but the film was put on the back burner as Sohail wanted to concentrate on the remake of Telugu hit Stalin. It was said that this movie would be titled Radhe but according to recent reports Sohail wants to name it Mental.
Please Wait while comments are loading...