'ಬುಲ್ ಬುಲ್ ಮ್ಯಾರೇಜ್ ಹಾಲ್'ನ ಮಾಲಿಕನಾದ ನಟ ಸಲ್ಮಾನ್ ಖಾನ್

ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಸದ್ಯ ರಾಧೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕೊರೊನಾ ಲಾಕ್ ಡೌನ್ ನಿಂದ ಸದ್ಯ ಮನೆಯಲ್ಲಿಯೇ ಕಾಲಕಳೆಯುತ್ತಿರುವ ಸಲ್ಮಾನ್ ಲಾಕ್ ಡೌನ್ ನಡುವೆಯೂ ಮ್ಯಾರೇಜ್ ಹಾಲ್ ನ ಮಾಲಿಕನಾಗಿದ್ದಾರೆ.

Recommended Video

ನಮಗೂ ಕೂಡ ಭಯವಾಗಿದೆ ಎಂದ ಸಲ್ಮಾನ್ ಖಾನ್ | Salman Khan | Filmibeat Kannada

ಅಂದ್ಹಾಗೆ ಬುಲ್ ಬುಲ್ ಮ್ಯಾರೇಜ್ ಹಾಲ್ ಬಾಲಿವುಡ್ ನಲ್ಲಿ ಸೆಟ್ಟೇರಲು ಸಿದ್ಧವಾಗಿರುವ ಸಿನಿಮಾ. ಈ ಚಿತ್ರಕ್ಕೆ ನಟ ಸಲ್ಮಾನ್ ಖಾನ್ ಬಂಡವಾಳ ಹೂಡುತ್ತಿದ್ದಾರೆ. ಹೌದು, ಸಲ್ಮಾನ್ ಖಾನ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಸಿನಿಮಾಗೆ ಬುಲ್ ಬುಲ್ ಮ್ಯಾರೇಜ್ ಹಾಲ್ ಎಂದು ನಾಮಕರಣ ಮಾಡಲಾಗಿದೆ. ಚಿತ್ರದಲ್ಲಿ ಕೃತಿ ಮತ್ತು ಪುಲ್ಕಿತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಂದೆ ಓದಿ..

ಬುಲ್ ಬುಲ್ ಮ್ಯಾರೇಜ್ ಹಾಲ್ ನಲ್ಲಿ ಕೃತಿ-ಪುಲ್ಕಿತ್

ಬುಲ್ ಬುಲ್ ಮ್ಯಾರೇಜ್ ಹಾಲ್ ನಲ್ಲಿ ಕೃತಿ-ಪುಲ್ಕಿತ್

ಬುಲ್ ಬುಲ್ ಮ್ಯಾರೇಜ್ ಹಾಲ್ ಸಿನಿಮಾದಲ್ಲಿ ನಾಯಕನಾಗಿ ಪುಲ್ಕಿತ್ ಸಮರ್ಥ್ ಮತ್ತು ಕೃತಿ ಕರಬಂದ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸುನಿಲ್ ಗ್ರೋವರ್ ಮತ್ತು ಡೈಸಿ ಶಾ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ವಿವಾಹದ ಸುತ್ತ ಸುತ್ತುವ ಕಥೆ

ವಿವಾಹದ ಸುತ್ತ ಸುತ್ತುವ ಕಥೆ

ಚಿತ್ರಕ್ಕೆ ರೋಹಿತ್ ನಯ್ಯರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾ ಬ್ಯಾಕ್ ಡ್ರಾಪ್ ಲಕ್ನೋದಲ್ಲಿ ನಡೆಯಲಿದೆ. ಭಾರತೀಯ ಮದುವೆ ವಿವಾಹದ ಸುತ್ತ ಸುತ್ತುವ ಸಿನಿಮಾ ಇದಾಗಿದೆ. ಸುನಿಲ್ ಪಾತ್ರ ಹಾಸ್ಯದಿಂದ ಕೂಡಿದ್ದು ಪಕ್ಕ ಮನರಂಜನೆಯ ಸಿನಿಮಾ ಇದಾಗಿದೆಯಂತೆ.

ಏಪ್ರಿಲ್ ನಲ್ಲಿಯೆ ಸೆಟ್ಟೇರಬೇಕಿತ್ತು ಸಿನಿಮಾ

ಏಪ್ರಿಲ್ ನಲ್ಲಿಯೆ ಸೆಟ್ಟೇರಬೇಕಿತ್ತು ಸಿನಿಮಾ

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಏಪ್ರಿಲ್ ನಲ್ಲಿ ಸೆಟ್ಟೇರಬೇಕಿತ್ತು. ಆದರೆ ಕೊರೊನಾ ಲಕ್ ಡೌನ್ ನಿಂದ ಸಿನಿಮಾ ಮುಂದಕ್ಕೆ ಹೋಗಿದೆ. ಲಾಕ್ ಮುಗಿದು ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಮೇಲೆ ಸಿನಿಮಾ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆ.

ರಾಧೆ ಸಿನಿಮಾದಲ್ಲಿ ಸಲ್ಲು ಬ್ಯುಸಿ

ರಾಧೆ ಸಿನಿಮಾದಲ್ಲಿ ಸಲ್ಲು ಬ್ಯುಸಿ

ಸಲ್ಮಾನ್ ಖಾನ್ ನಿರ್ಮಾಣದ ಜೊತೆಗೆ ಅಭಿನಯದಲ್ಲೂ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ದಬಂಗ್-3 ಸಿನಿಮಾ ನಿರ್ಮಾಣ ಮಾಡಿದ್ದ ಸಲ್ಲು ರಾಧೆ ಸಿನಿಮಾಗೂ ಬಂಡವಾಳ ಹೂಡುತ್ತಿದ್ದಾರೆ. ಇದರ ಜೊತೆಗೀಗ ಬುಲ್ ಬುಲ್ ಮ್ಯಾರೇಜ್ ಹಾಲ್ ಸಿನಿಮಾ ಮಾಡುತ್ತಿದ್ದಾರೆ.

More from Filmibeat

English summary
Bollywood Actor Salman Khan next production movie title BulBul Marriage Hall.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X