For Quick Alerts
  ALLOW NOTIFICATIONS  
  For Daily Alerts

  ಹೆಮ್ಮೆ ಪಡಲು ಕಾರಣವೇ ಇಲ್ಲ; ಟೈಗರ್ ಸಲ್ಮಾನ್ ಖಾನ್

  |

  ಬಾಲಿವುಡ್ ಸ್ಟಾರ್ ಸಾಲಿನಲ್ಲಿ ಸಖತ್ ಮಿಂಚುತ್ತಿರುವ ನಟ ಸಲ್ಮಾನ್ ಖಾನ್. ಅವರ ಇತ್ತಿಚಿನ ಚಿತ್ರಗಳು ಸೂಪರ್ ಹಿಟ್ ದಾಖಲಿಸಿವೆ. ದಬಾಂಗ್ ಚಿತ್ರವಂತೂ ಬಾಲಿವುಡ್ ನಲ್ಲಿ ಮಿಂಚಿನ ಸಂಚಾರವನ್ನೇ ನಿರ್ಮಿಸಿಬಿಟ್ಟಿತ್ತು. ನಂತರ ಸಲ್ಮಾನ್ ತಿರುಗಿ ನೋಡಿದ್ದೇ ಇಲ್ಲ. ಇತ್ತೀಚಿಗಷ್ಟೆ 'ಏಕ್ತಾ ಟೈಗರ್' ಚಿತ್ರೀಕರಣವನ್ನು ಮುಗಿಸಿದ್ದಾರೆ ಸಲ್ಲೂ ಮಿಯಾ.

  ಈಗ ಬಾಲಿವುಡ್ ಎಂದರೆ 'ತ್ರಿ' ಖಾನ್ ಗಳು ಎನ್ನಬಹುದು. ಅಮೀರ್ ಖಾನ್, ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಈಗ ಬಾಲಿವುಡ್ ಮೋಸ್ಟ್ ವಾಂಟೆಡ್ ಸ್ಟಾರ್ ಗಳು. ಇಂಥಹ ಸಾಲಿನಲ್ಲಿರುವ ಸಲ್ಲೂ, ನನಗೆ ನನ್ನ ಸಾಧನೆ ಬಗ್ಗೆ ಹೆಮ್ಮೆ ಇಲ್ಲ ಎಂದು ಬಿಟ್ಟಿದ್ದಾರೆ. ತಮ್ಮ ಕುರಿತು ಸಲ್ಮಾನ್ ಹೇಳಿದ್ದೇನು ಗೊತ್ತೇ, ಓದಿ...

  ಇತ್ತೀಚಿನ ಸಂದರ್ಶನವೊಂದರಲ್ಲಿ ಸಲ್ಲೂ, "ನನಗೆ ಜನರ ಅಭಿಮಾನ ನೋಡಿ ತುಂಬಾ ಖುಷಿಯಾಗುತ್ತಿದೆ. ಅದು ಸಹಜ ಕೂಡ. ಆದರೆ ಅದಕ್ಕೆ ನಾನಿನ್ನೂ ಅರ್ಹನಲ್ಲ ಎನಿಸಿದೆ. ನಾನಿನ್ನೂ ಸಾಧಿಸಿದ್ದು ತುಂಬಾ ಕಡಿಮೆಯೇ. ಇನ್ಮುಂದೆ ಸಾಕಷ್ಟು ಸಾಧಿಸುವ ಗುರಿ ಹೊಂದಿದ್ದೇನೆ. ಈಗ ಮಾಡಿರುವುದು ನನಗಾಗಿ ಸಾಧನೆಯೇ ಹೊರತೂ ಸಮಾಜ ಸೇವೆ ಅಲ್ಲ" ಎಂದಿದ್ದಾರೆ.

  ಸಲ್ಮಾನ್ ಖಾನ್ ಹೇಳಿರುವುದು ಇಷ್ಟೇ ಅಲ್ಲ, "ನನಗಿಂತ ಹತ್ತು ಪಟ್ಟು ಚೆನ್ನಾಗಿರುವ, ಸ್ಟೈಲಿಶ್ ಆಗಿರುವ ಹಾಗೂ ಪ್ರತಿಭೆ ಹೊಂದಿದವರು ಚಿತ್ರಂಗದಲ್ಲಿದ್ದಾರೆ. ಹೀಗಾಗಿ ನನ್ನ ಬಗ್ಗೆ ನನಗೇ ಹೆಮ್ಮೆ ಎನಿಸಲು ಸದಯಕ್ಕೆ ಯಾವುದೇ ಕಾರಣವಿಲ್ಲ. ನಾನು ಹೆಮ್ಮೆ ಪಡುವಂತೆ ಏನಾದರೂ ಮಾಡಬೇಕಿದೆ" ಎಂದು ಹೇಳಿಕೆ ನೀಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

  ಮುಂದುವರಿದ ಸಲ್ಮಾನ್, "ಜನರ ಜೀವನಮಟ್ಟ ಸುಧಾರಿಸಲು ನಾನು ಈವರೆಗೆ ಗಣನೀಯವಾಗಿ ಯಾವ ಸೇವೆಯನ್ನೂ ಸಲ್ಲಿಸಿಲ್ಲ. ಎಕ್ಸ್ ಟ್ರಾ ಆರ್ಡಿನರಿ ಎಂಬುದನ್ನು ಏನೂ ಮಾಡಿಲ್ಲ. ಹೀಗಿರುವಾಗ ನನ್ನ ಬಗ್ಗೆ ನಾನು ಯಾಕೆ ಹೆಮ್ಮೆ ಪಡಬೇಕು ಹೇಳಿ?. ನಾನು ನನ್ನ ಸಲುವಾಗಿ ಮಾಡಿರುವ ಸಾಧನೆಗೆ ಕ್ರೆಡಿಟ್ ತೆಗೆದುಕೊಳ್ಳುವುದೇಕೆ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

  ಇಷ್ಟು ಕಾಲವೂ ಸಲ್ಲೂನ ಬಾಡಿ, ಸ್ಟೈಲ್ ಹಾಗೂ ನಟನೆಗೆ ಮಾರುಹೋಗಿದ್ದ ಪ್ರೇಕ್ಷಕರು, ಈಗ ಅವರ ಮಾತಿಗೂ ಮರುಳಾಗದೇ ವಿಧಿಯಿಲ್ಲ. ಕಾರಣ, ನೇರವಾಗಿ ತಮ್ಮ ಮನದಾಳದ ಮಾತನ್ನು ಹೇಳಿರುವ ಸಲ್ಲೂ, ಈ ಮಾತಿನಿಂದ ಈಗಿರುವ ಅಭಿಮಾನಿಗಳನ್ನು ಮೆಚ್ಚಿಸಿದ್ದಲ್ಲದೇ, ಇನ್ನೂ ಹೆಚ್ಚು ಅಭಿಮಾನಿ ಬಳಗವನ್ನು ಪಡೆಯುವುದರಲ್ಲಿ ಸಂದೇಹವೇ ಇಲ್ಲ. (ಏಜೆನ್ಸೀಸ್)

  English summary
  Salman Khan is one of the most bankable stars of Bollywood. But the actor says he is not proud of himself as he has done nothing extraordinary to feel proud.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X