ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ: ಸಲ್ಮಾನ್ ಖಾನ್ ವಿಚಾರಣೆ ಇಲ್ಲ ಎಂದ ಮುಂಬೈ ಪೊಲೀಸರು

By ಫಿಲ್ಮ್ ಡೆಸ್ಕ್

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಒಂದು ತಿಂಗಳು ಕಳೆದಿದೆ. ಸುಶಾಂತ್ ಆತ್ಮಹತ್ಯೆಗೆ ಕಾರಣ ಏನಿರಬಹುದು ಎಂದು ಮುಂಬೈ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈಗಾಗಲೆ ಬಾಲಿವುಡ್ ನ ಅನೇಕ ಮಂದಿಯನ್ನು ವಿಚಾರಣೆ ನಡೆಸಲಾಗಿದೆ. ಇದುವರೆಗೂ ಸುಮಾರು 35ಕ್ಕು ಹೆಚ್ಚು ಮಂದಿಯನ್ನು ವಿಚಾರಣೆ ಮಾಡಲಾಗಿದೆ. ಆದರೆ ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ವಿಚಾರಣೆ ಮಾಡುವುದಿಲ್ಲ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

Recommended Video

Kiccha Sudeep Adopts 4 Government School | Filmibeat Kannada

ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಸಂಬಂಧಿಸಿದ್ದಂತೆ ಬಾಲಿವುಡ್ ನ ಅನೇಕ ದಿಗ್ಗಜರ ಹೆಸರು ಕೇಳಿಬರುತ್ತಿದೆ. ಕರಣ್ ಜೋಹರ್, ಸಲ್ಮಾನ್ ಖಾನ್, ಸಂಜಯ್ ಲೀಲ ಬನ್ಸಾಲಿ, ಮಹೇಶ್ ಭಟ್, ಏಕ್ತ ಕಪೂರ್, ರಿಯಾ ಚಕ್ರವರ್ತಿ, ಸೂರಜ್ ಪಾಂಚೋಲಿ ಸೇರಿದ್ದಂತೆ ಅನೇಕರ ಹೆಸರು ಕೇಳಿಬರುತ್ತಿದೆ. ಆದರೆ ಸಲ್ಮಾನ್ ವಿಚಾರಣೆ ಇಲ್ಲ ಎಂದಿರುವುದು ಸುಶಾಂತ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಮುಂದೆ ಓದಿ...

ಸಲ್ಮಾನ್ ಖಾನ್ ಮಾಜಿ ಮ್ಯಾನೇಜರ್ ವಿಚಾರಣೆ

ಸಲ್ಮಾನ್ ಖಾನ್ ಮಾಜಿ ಮ್ಯಾನೇಜರ್ ವಿಚಾರಣೆ

ಇತ್ತೀಚಿಗಷ್ಟೆ ಸಲ್ಮಾನ್ ಖಾನ ಮಾಜಿ ಮ್ಯಾನೇಜರ್ ರೇಷ್ಮಾ ಶೆಟ್ಟಿ ಅವರನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ. ಬಾಲಿವುಡ್ ನ ಟ್ಯಾಲೆಂಟ್ ಮ್ಯಾನೇಜರ್ ಗಳಲ್ಲಿ ಒಬ್ಬರಾಗಿರುವ ರೇಷ್ಮಾ ಶೆಟ್ಟಿ ಟಾಪ್ ನಟರ ಸಿನಿಮಾ ಒಪ್ಪಂದಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ರೇಷ್ಮಾ ವಿಚಾರಣೆ ಮಾಡುತ್ತಿದ್ದಂತೆ ಸಲ್ಮಾನ್ ಅವರನ್ನು ವಿಚಾರಣೆ ಮಾಡಲಾಗುತ್ತೆ ಎಂದು ಎನ್ನಲಾಗುತ್ತಿತ್ತು. ಆದರೆ ಸಲ್ಮಾನ್ ವಿಚಾರಣೆಯನ್ನು ಮುಂಬೈ ಪೊಲೀಸರು ತಳ್ಳಿಹಾಕಿದ್ದಾರೆ.

ಅರ್ಜಿ ತಿರಸ್ಕಾರ

ಅರ್ಜಿ ತಿರಸ್ಕಾರ

ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸದಂತೆ ಕರಣ್ ಜೋಹರ್, ಸಲ್ಮಾನ್ ಖಾನ, ಏಕ್ತಾ ಕಪೂರ್, ಸಂಜಯ್ ಲೀಲಾ ಬನ್ಸಾಲಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಬೇಕೆಂದು ಕೋರಿ ಮುಜಾಫರ್ ಪುರ ಕೋರ್ಟ್ ನಲ್ಲಿ ಬಿಹಾರದ ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದರು. ಆದರೆ ಮುಜಾಫರ್ ಪುರದ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು.

ಸುಶಾಂತ್ ಕಂಡರೆ ಸಲ್ಮಾನ್ ಗೆ ಆಗುತ್ತಿರಲಿಲ್ಲ

ಸುಶಾಂತ್ ಕಂಡರೆ ಸಲ್ಮಾನ್ ಗೆ ಆಗುತ್ತಿರಲಿಲ್ಲ

ಸುಶಾಂತ್ ಸಿಂಗ್ ಕಂಡರೆ ಸಲ್ಮಾನ್ ಖಾನ್ ಗೆ ಆಗುತ್ತಿರಲಿಲ್ಲ ಎಂದು ಹೇಳಲಾಗುತ್ತೆ. ಸೂಜರ್ ಪಾಂಚೋಲಿ ಯಿಂದ ಸಲ್ಮಾನ್ ಗೆ ಸುಶಾಂತ್ ಮೇಲೆ ಸಿಟ್ಟಿತ್ತು ಎನ್ನಲಾಗುತ್ತಿದೆ. ಸೂರಜ್ ಪಾಂಚೋಲಿ ಮತ್ತು ಸುಶಾಂತ್ ನಡುವೆ ಜಗಳ ನಡೆದಿತ್ತು. ಸೂರಜ್ ಈ ವಿಚಾರವನ್ನು ಸಲ್ಮಾನ್ ಬಳಿ ಹೇಳಿಕೊಂಡಿದ್ದರು. ಸಲ್ಮಾನ್ ಮತ್ತು ಸೂರಜ್ ಇಬ್ಬರು ಉತ್ತಮ ಸ್ನೇಹಿತರು. ಸೂರಜ್ ಪರ ನಿಂತು ಸಲ್ಮಾನ್, ಸುಶಾಂತ್ ಸಿಂಗ್ ಸಿನಿಮಾ ವಿಚಾರದಲ್ಲಿ ತಲೆಹಾಕುತ್ತಿದ್ದರು ಎನ್ನಲಾಗುತ್ತಿದೆ.

ಸುಶಾಂತ್ ಗೆ ಸಿನಿಮಾಗಳು ಕೈ ತಪ್ಪುವಂತೆ ಮಾಡಿದ್ದೇ ಸಲ್ಮಾನ್

ಸುಶಾಂತ್ ಗೆ ಸಿನಿಮಾಗಳು ಕೈ ತಪ್ಪುವಂತೆ ಮಾಡಿದ್ದೇ ಸಲ್ಮಾನ್

ಸುಶಾಂತ್ ಸಿಂಗ್ ಗೆ ಉತ್ತಮ ಸಿನಿಮಾ ಅವಕಾಶಗಳು ಸಿಗದೆ ಇರುವ ಹಾಗೆ ಮಾಡಿದ್ದೆ ಸಲ್ಮಾನ್ ಖಾನ್ ಎಂದು ಹೇಳಲಾಗುತ್ತಿದೆ. ಸುಶಾಂತ್ ಅಭಿನಯಿಸಬೇಕಿದ್ದ ಉತ್ತಮ ಸಿನಿಮಾಗಳಿಗೆ ಸಲ್ಮಾನ್ ಅಡ್ಡಗಾಲು ಹಾಕಿದ್ದರಂತೆ. ಹಾಗಾಗಿ ಸುಶಾಂತ್ ಮಾಡಬೇಕಿದ್ದ ಅನೇಕ ಉತ್ತಮ ಸಿನಿಮಾಗಳು ಬೇರೆಯವರ ಪಾಲಾಗಿವೆ. ಹೀಗೆ ಸಲ್ಮಾನ್ ವಿರುದ್ದ ಸಾಕಷ್ಟು ಆರೋಪಗಳು ಕೇಳಿಬರುತ್ತಿದ್ದರೂ, ವಿಚಾರಣೆ ನಡೆಸಲ್ಲ ಎಂದಿರುವುದು ಸುಶಾಂತ್ ಅಭಿಮಾನಿಗಳನ್ನು ಮತ್ತಷ್ಟು ಕೆರಳಿಸಿದೆ.

More from Filmibeat

English summary
Bollywood Actor Salman Khan not to be summoned by Mumbai police for questioning in Sushanth Singh Rajput case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X