ಜೈಲಿನಲ್ಲಿದ್ದ ಕುರಿತು ಪ್ರಶ್ನಿಸಿದ ಪತ್ರಕರ್ತನಿಗೆ ಸಲ್ಲು ಖಡಕ್ ಪ್ರತಿಕ್ರಿಯೆ
'1998ರ ಕೃಷ್ಣಮೃಗ ಬೇಟೆ ಪ್ರಕರಣ'ಕ್ಕೆ ಸಂಬಂಧಪಟ್ಟಂತೆ ಸಲ್ಮಾನ್ ಖಾನ್ ಗೆ ಜೋಧ್ ಪುರ್ ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾಗಿದ್ದು, ಜಾಮೀನು ಪಡೆದು ಹೊರಬಂದಿದ್ದಾರೆ. ಆದ್ರೆ, ಈ ಪ್ರಕರಣದ ಬಗ್ಗೆ ಸಲ್ಮಾನ್ ಖಾನ್ ಸದ್ಯ ಎಲ್ಲಿಯೂ ಮಾತನಾಡಿರಲಿಲ್ಲ.
ಇದೀಗ, ಪತ್ರಕರ್ತರೊಬ್ಬರ ಕೇಳಿದ ಪ್ರಶ್ನೆಗೆ ಸಲ್ಮಾನ್ ಖಾನ್ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಘಟನೆ ನಡೆದಿದೆ. ಸದ್ಯ, ಸಲ್ಮಾನ್ ಖಾನ್ ಅಭಿನಯದ 'ರೇಸ್-3 ಸಿನಿಮಾದ ಬಿಡುಗಡೆಯಾಗಬೇಕಿದೆ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ಸಲ್ಮಾನ್ ಖಾನ್ ಗೆ ಕೃಷ್ಣಮೃಗ ಬೇಟೆ ಪ್ರಕರಣದ ಬಗ್ಗೆ ಪ್ರಶ್ನೆ ಎದುರಾಗಿದೆ.
ಪತ್ರಕರ್ತರು ''ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ನೀವು ಅಪರಾಧಿಯಾಗಿ ಜೈಲಿನಲ್ಲಿದ್ದಾಗ ನಿಮ್ಮ ನಿರ್ಮಾಪಕರು ಮತ್ತು ಅವರ ಹಣದ ಬಗ್ಗೆ ನಿಮಗೆ ನೋವಾಗಲಿಲ್ಲವೇ.? ಎಂದು ಕೇಳಿದ್ದಾರೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯೆಸಿರುವ ಸಲ್ಲು ''ಯಾಕೆ ನಾನು ಜೀವನ ಪರ್ಯಾಂತ ಜೈಲಿನಲ್ಲೇ ಇರ್ತೀನಿ ಅಂದುಕೊಂಡ್ರಾ'' ಎಂದು ಮರು ಪ್ರಶ್ನಿಸಿದ್ದಾರೆ.

ಇದಕ್ಕೆ ಸ್ವಲ್ಪ ಮುಜಗರಕ್ಕೆ ಒಳಗಾದ ಪತ್ರಕರ್ತರು 'ಹಾಗೇನೂ ಇಲ್ಲ' ಎಂದಿದ್ದಾರೆ. ನಂತರ ಮಾತು ಮುಂದುವರೆಸಿದ ಸಲ್ಮಾನ್ ಖಾನ್ ''ಥ್ಯಾಂಕ್ ಯೂ, ನಾನು ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ'' ಎಂದಿದ್ದಾರೆ.
ರೆಮೋ ಡಿಸೋಜಾ ನಿರ್ದೇಶನ ಮಾಡಿರುವ 'ರೇಸ್-3' ಸಿನಿಮಾ ಜೂನ್ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. ಸಲ್ಮಾನ್ ನಾಯಕನಾಗಿರುವ ಈ ಚಿತ್ರದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್, ಜಾಕ್ವಲಿನ್ ಫರ್ನಾಂಡೀಸ್ ಮುಂತಾದವರು ನಟಿಸಿದ್ದಾರೆ.


Click it and Unblock the Notifications











