ರಶ್ಮಿಕಾ ಮಂದಣ್ಣ ಅವರ ಅಪ್ಪಂಗೆ ಏನು ಸಮಸ್ಯೆ ಇಲ್ಲ ನಿಮ್ದೇನು- ಸಲ್ಮಾನ್ ಖಾನ್..!

ಸಾಮಾನ್ಯವಾಗಿ ಮದುವೆಯ ನಂತರ ನಾಯಕಿಯರು ಚಿತ್ರರಂಗದಿಂದ ದೂರವಾಗುತ್ತಾರೆ. ಅದೆಷ್ಟೇ ಎತ್ತರಕ್ಕೆ ಬೆಳೆದಿದ್ದರು, ಎಷ್ಟೇ ಅವಕಾಶಗಳು ಕೈಯಲ್ಲಿದ್ದರು ಕೂಡ, ಮದುವೆಯಾದ ನಂತರ ಹೊಸ ಬದುಕಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿಯೇ ಮಗ್ನರಾಗಿ ಬಿಡುತ್ತಾರೆ.

ಇನ್ನು, ಬಣ್ಣದ ಲೋಕ ಕೂಡ ಅಷ್ಟೇ. ಮದುವೆಯಾದರೆ ನಾಯಕಿಯರಿಗೆ ಕೊಡುವ ಗೌರವವೇ ಬೇರೆ. ಮೊದಲೆಲ್ಲ ನೀವು ಇಲ್ಲದೆ ನಮ್ಮ ಚಿತ್ರವಾಗಲ್ಲ ಎನ್ನುತ್ತಿದ್ದವರೆಲ್ಲ ಆ ನಂತರ ಅದೇ ನಾಯಕಿಗೆ ಅಕ್ಕ-ತಾಯಿಯ ಪಾತ್ರವನ್ನು ನೀಡಲು ಮುಂದಾಗುತ್ತಾರೆ. ಇನ್ನು ಕೆಲವರು ಪೋಷಕ ನಟಿಯಾಗಿ ಬಡ್ತಿ ಪಡೆಯುತ್ತಾರೆ.

salman-khan-on-the-31-year-age-gap-with-rashmika-mandanna-in-sikandar-asks-why-the-problem

ಆದರೆ ನಾಯಕರ ವಿಚಾರದಲ್ಲಿ ಇದು ತದ್ವಿರುದ್ದ. ಅದರಲ್ಲಿಯೂ ಸೂಪರ್ ಸ್ಟಾರ್ ಆಗಿದ್ದರಂತೂ ವಯಸ್ಸು 60 ಅಲ್ಲ 70 ಆದರೂ ಕೂಡ ಅವರಿಗೆ ಹೊಡಿ ಬಡಿ ಕಥೆ ಹೆಣೆಯುತ್ತಾರೆ. ಮಗಳ ವಯಸ್ಸಿನ ಹೀರೋಯಿನ್‌ನ ಕರೆತಂದು ರೊಮ್ಯಾನ್ಸ್ ಮಾಡಲು ಹೇಳುತ್ತಾರೆ. ಕೆಲ ಒಮ್ಮೆ ಈ ವಿಚಾರಕ್ಕೆ ಅನೇಕ ಸ್ಟಾರ್ ನಾಯಕರು ಟ್ರೋಲ್ ಆಗಿದ್ದು ಇದೆ. ನಿಂದನೆಗೆ ಗುರಿಯಾಗಿದ್ದು ಇದೆ. ಇದಕ್ಕೆ ಸಲ್ಮಾನ್ ಖಾನ್ ಸದ್ಯದ ಉದಾಹರಣೆ.

ಹೌದು, ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಚಿತ್ರ ಇದೇ ಮಾರ್ಚ್ 28ರಂದು ತೆರೆಗೆ ಬರಲಿದೆ. ಇನ್ನು ಎಲ್ಲರಿಗೆ ಗೊತ್ತಿರುವಂತೆ ಈ ಚಿತ್ರದಲ್ಲಿ ಸಲ್ಮಾನ್‌ ಖಾನ್‌ಗೆ ರಶ್ಮಿಕಾ ಮಂದಣ್ಣ ನಾಯಕಿ. ಇದು ಅನೇಕರಿಗೆ ಮೊದಲಿಂದ ಸಮಸ್ಯೆಯಂತೆ ಕಾಣುತ್ತಿದೆ. ಯಾಕೆಂದರೆ ಸಲ್ಮಾನ್ ಖಾನ್‌ಗೆ ಈಗ 59 ವರ್ಷ. ರಶ್ಮಿಕಾ ಮಂದಣ್ಣಗೆ 28ರ ಹರೆಯ. ಸಲ್ಮಾನ್ ಖಾನ್‌ಗೆ ಸರಿಯಾದ ವಯಸ್ಸಿನಲ್ಲಿ ಮದುವೆಯಾಗಿದ್ದರೆ ರಶ್ಮಿಕಾ ಮಂದಣ್ಣ ಅವರಷ್ಟೇ ವಯಸ್ಸಿನ ಮಗಳಿರುತ್ತಿದ್ದಳು.

ಹೀಗಾಗಿಯೇ ಅನೇಕರು ಮಗಳ ವಯಸ್ಸಿನವಳ ಜೊತೆ ಕುಣಿಯಲು, ಆಕೆಯ ಜೊತೆ ರೊಮ್ಯಾನ್ಸ್ ಮಾಡಲು, ನಾಚಿಕೆಯಾಗಲ್ವಾ ಎಂದು ಸಲ್ಮಾನ್ ಖಾನ್‌ಗೆ ತಪರಾಕಿ ಹಾಕುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರದ ಕುರಿತು ಚರ್ಚೆಯನ್ನು ಮಾಡುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿರುವ ಮುಂಬೈ ಪತ್ರಕರ್ತರು ಸಲ್ಮಾನ್ ಖಾನ್ ಅವರಲ್ಲಿಯೇ ಈ ವಿಚಾರದ ಕುರಿತು ಪ್ರಶ್ನೆಯನ್ನು ಕೇಳಿದ್ದಾರೆ.

ಹೌದು, ಸಿಕಂದರ್ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆ ಚಿತ್ರದ ಪ್ರಚಾರವನ್ನು ಮಾಡುತ್ತಿರುವ ಸಲ್ಮಾನ್ ಖಾನ್ ನಿನ್ನೆ ತಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ರಶ್ಮಿಕಾ ಮಂದಣ್ಣ ಕೂಡ ಸಲ್ಮಾನ್ ಪಕ್ಕದಲ್ಲಿ ನಿಂತುಕೊಂಡು ಮಿಂಚುತ್ತಿದ್ದರು. ಇದೇ ಸಮಯದಲ್ಲಿ ಇಬ್ಬರ ನಡುವೆ ಇರುವ ವಯಸ್ಸಿನ ಅಂತರದ ಕುರಿತು ಪ್ರಶ್ನೆಯನ್ನು ಮಾಡಲಾಗಿದೆ. ಇದಕ್ಕೆ ಅವರ ತಂದೆಗೆ ಸಮಸ್ಯೆ ಇಲ್ಲ ನಿಮ್ಮದೇನು ಎಂದು ಸಲ್ಮಾನ್ ಖಾನ್ ತಮ್ಮದೇ ಶೈಲಿಯಲ್ಲಿ ಮರು ಪ್ರಶ್ನೆ ಹಾಕಿದ್ದಾರೆ.

ಈ ಕುರಿತು ಮಾತನಾಡಿರುವ ಸಲ್ಮಾನ್ ಖಾನ್, ಹೀರೋಯಿನ್‌ಗೆ ಯಾವುದೇ ಸಮಸ್ಯೆ ಇಲ್ಲ, ಅವರ ತಂದೆಗೂ ಕೂಡ ಯಾವುದೇ ಸಮಸ್ಯೆ ಇಲ್ಲ, ಹೀಗಿರುವಾಗ ನಿಮ್ದೇನು, ನಿಮಗ್ಯಾಕೇ ಇದು ಸಮಸ್ಯೆಯಂತೆ ಕಾಣುತ್ತಿದೆ ಎಂದು ಕೇಳಿದ್ದಾರೆ. ಮುಂದುವರೆದು ರಶ್ಮಿಕಾ ಮಂದಣ್ಣ ಅವರಿಗೆ ನಾಳೆ ಮದುವೆಯಾಗುತ್ತೆ, ಮಕ್ಕಳಾಗುತ್ತೆ, ಆಗಲೂ ಕೂಡ ಅವರಿಗೆ ಚಿತ್ರರಂಗದಲ್ಲಿ ಕೆಲಸ ಮಾಡಲು ಅವರ ಪತಿಯಿಂದ ಅನುಮತಿ ಸಿಗುತ್ತೆ ಎಂದುಕೊಂಡಿದ್ದೇನೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಸಲ್ಮಾನ್ ಖಾನ್ ಅವರ ಈ ಮಾತಿಗೆ ಹೌದೌದು ಎಂಬಂತೆ ರಶ್ಮಿಕಾ ಮಂದಣ್ಣ ಹಿಂದೆ ನಿಂತು ತಲೆಯಾಡಿಸಿದ್ದಾರೆ.

ಇನ್ನು ಇದೇ ಸಮಯದಲ್ಲಿ ರಶ್ಮಿಕಾ ಮಂದಣ್ಣ ಕೆಲಸದ ಮೇಲೆ ರಶ್ಮಿಕಾ ಮಂದಣ್ಣಗೆ ಇರುವ ಶ್ರದ್ದೆ ಮತ್ತು ಭಕ್ತಿಯನ್ನು ಕೊಂಡಾಡಿರುವ ಸಲ್ಮಾನ್ ಖಾನ್, ಪುಷ್ಪಾ 2 ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ಸಿಕಂದರ್ ಚಿತ್ರದ ಚಿತ್ರೀಕರಣ ಕೂಡ ನಡೆಯುತ್ತಿತ್ತು ಆಗ 7 ಗಂಟೆಗೆ ಪುಷ್ಪಾ 2 ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ರಾತ್ರಿ 9ಕ್ಕೆ ಸಿಕಂದರ್ ಚಿತ್ರದ ಚಿತ್ರೀಕರಣಕ್ಕೆ ರಶ್ಮಿಕಾ ಹಾಜರಾಗುತ್ತಿದ್ದರು ಎಂದು ಹೇಳಿದ್ದಾರೆ. ಕೆಲ ಒಮ್ಮೆ ಬೆಳಗ್ಗೆ 06-30ಕ್ಕೂ ಚಿತ್ರದ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ. ಆ ನಂತರ ಪುಷ್ಪಾ 2 ಚಿತ್ರೀಕರಣಕ್ಕೆ ಮರಳುತ್ತಿದ್ದರು ಎಂದು ಹೇಳಿದ್ದಾರೆ. ಇನ್ನು ಇದೇ ಸಮಯದಲ್ಲಿ ರಶ್ಮಿಕಾ ಮಂದಣ್ಣ ತಮ್ಮ ಕಾಲಿಗೆ ಪೆಟ್ಟು ಮಾಡಿಕೊಂಡರು. ಆದರೂ ಕೂಡ ರಶ್ಮಿಕಾ ಚಿತ್ರೀಕರಣ ನಿಲ್ಲಿಸಲಿಲ್ಲ ಎಂದು ಹೊಗಳಿದ್ದಾರೆ ಸಲ್ಮಾನ್ ಖಾನ್. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಿಕಂದರ್ ಈದ್ ಹಬ್ಬದ ಪ್ರಯುಕ್ತ ಮಾರ್ಚ್ 28ರಂದು ಬಿಡುಗಡೆಯಾಗಲಿದೆ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X