For Quick Alerts
  ALLOW NOTIFICATIONS  
  For Daily Alerts

  ದಿಶಾ ಪಟಾನಿ ತುಟಿಗೆ ಮುತ್ತಿಟ್ಟ ಬಗ್ಗೆ ಸಲ್ಮಾನ್ ಖಾನ್ ಪ್ರತಿಕ್ರಿಯೆ

  |

  ನಟ ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷೆಯ 'ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್' ಚಿತ್ರದ ಟ್ರೈಲರ್ ರಿಲೀಸ್ ಆದ ಮೇಲೆ ಚಿತ್ರದ ಬಗ್ಗೆ ಸಾಕಷ್ಟು ಚರ್ಚೆ ಪ್ರಾರಂಭವಾಗಿದೆ. ಸಲ್ಮಾನ್ ಖಾನ್ ಮೊದಲ ಬಾರಿಗೆ ಕಿಸ್ಸಿಂಗ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಚಿತ್ರದಲ್ಲಿ ಸಲ್ಮಾನ್ ಖಾನ್ ತನಗಿಂತ ಗಿಂತ 27 ವರ್ಷದ ಕಿರಿಯ ನಟಿಯ ಜೊತೆ ರೊಮ್ಯಾನ್ಸ್ ಬಗ್ಗೆ ನೆಟ್ಟಿಗರು ಗೇಲಿ ಮಾಡಿದ್ದರು. ಇದೆಲ್ಲದರ ಬಗ್ಗೆಯೂ ಬ್ಯಾಡ್ ಬಾಯ್ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಮೇಕಿಂಗ್ ವಿಡಿಯೋದಲ್ಲಿ ಮಾತನಾಡಿರುವ ಸಲ್ಮಾನ್ ಖಾನ್ ದಿಶಾ ಪಟಾನಿ ಜೊತೆ ನಟೆಸಿರುವ ಬಗ್ಗೆ ತಮಾಷೆಯಾಗೆ ಉತ್ತರಿಸಿದ್ದಾರೆ. 'ನನಗಿಂತ ದಿಶಾ 27 ವರ್ಷ ಚಿಕ್ಕವಳು. ಆದರೆ ಸಿನಿಮಾದಲ್ಲಿ ಇಬ್ಬರು ಒಂದೇ ವಯಸ್ಸಿನವರ ಹಾಗೆ ಕಾಣುತ್ತೇನೆ' ಎಂದು ಹೇಳಿದ್ದಾರೆ.

  ರಾಧೆ ಟ್ರೈಲರ್: ಮೊದಲ ಬಾರಿಗೆ ನಾಯಕಿ ತುಟಿಗೆ ಚುಂಬಿಸಿದ ಸಲ್ಮಾನ್ ಖಾನ್ರಾಧೆ ಟ್ರೈಲರ್: ಮೊದಲ ಬಾರಿಗೆ ನಾಯಕಿ ತುಟಿಗೆ ಚುಂಬಿಸಿದ ಸಲ್ಮಾನ್ ಖಾನ್

  ದಿಶಾ ಪಟಾನಿ ಕೆಲಸವನ್ನು ಸಲ್ಮಾನ್ ಖಾನ್ ಹಾಡಿ ಹೊಗಳಿದ್ದಾರೆ. ಅದ್ಭುತವಾಗಿ ನಟಿಸಿದ್ದಾರೆ. ತುಂಬಾ ಸುಂದರವಾಗಿ ಕಾಣಿಸುತ್ತಾಳೆ. ಇಬ್ಬರು ಒಂದೇ ವಯಸ್ಸಿನವರ ಹಾಗೆ ಕಾಣುತ್ತೇನೆ. ಅವಳು ನನ್ನ ವಯಸ್ಸಿನ ಹಾಗೆ ಅಲ್ಲ ನಾನು ಅವಳ ವಯಸ್ಸಿನವಳಾಗಿ ಕಾಣುತ್ತೇನೆ ಎಂದಿದ್ದಾರೆ.

  ಇನ್ನು ಟ್ರೈಲರ್ ನಲ್ಲಿ ಸಿಕ್ಕಾಪಟ್ಟೆ ಚರ್ಚೆ ಮತ್ತು ವೈರಸ್ ಆಗಿದ್ದ ಕಿಸ್ಸಿಂಗ್ ದೃಶ್ಯದ ಬಗ್ಗೆಯೂ ಸಲ್ಮಾನ್ ಪ್ರತಿಕ್ರಿಯೆ ನೀಡಿದ್ದಾರೆ. ದಿಶಾಗೆ ಚುಂಬಿಸಿದ್ದು ಅಲ್ಲ. ದಿಶಾ ಬಾಯಿಗೆ ಟೇಪ್ ಹಾಕಲಾಗಿತ್ತು. ಟೇಪ್ ಗೆ ಚುಂಬಿಸಿದ್ದು ಎಂದು ಹೇಳುವ ಮೂಲಕ ಕಿಸ್ಸಿಂಗ್ ದೃಶ್ಯದ ಬಗ್ಗೆ ಸಲ್ಮಾನ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

  ದಿಶಾ ಪಟಾನಿ ಈ ಹಿಂದೆ ಸಲ್ಮಾನ್ ಜೊತೆ ಭಾರತ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಳಿಕ ಮಾತನಾಡಿದ್ದ ದಿಶಾ, ಸಲ್ಮಾನ್ ಖಾನ್ ವಯಸ್ಸಿನಲ್ಲಿ ತುಂಬಾ ದೊಡ್ಡವರು ಅವರ ಜೊತೆ ನಟಿಸುವುದಿಲ್ಲ ಎಂದು ಹೇಳಿದ್ದರು. ಆದರೀಗ ಮಾತನಾಡಿ ಪಾತ್ರ ತುಂಬಾ ಇಷ್ಟ ಆಯಿತು ಹಾಗಾಗಿ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ.

  ಬಹುನಿರೀಕ್ಷೆಯ ರಾಧೆ ಸಿನಿಮಾ ಒಟಿಟಿಯಲ್ಲಿ ತೆರೆಗೆ ಬರುತ್ತಿದೆ. ಸಲ್ಮಾನ್ ಸಿನಿಮಾ ಅಂದ್ಮೇಲೆ ಚಿತ್ರಮಂದಿರಗಳಲ್ಲಿ ಶಿಳ್ಳೆ, ಚಪ್ಪಾಳೆಗಳ ಸುರಿಮಳೆಯ ಮಧ್ಯೆ ನೋಡುವ ಮಜಾನೇ ಬೇರೆ. ಆದರೆ ಕೊರೊನಾ ಈ ಎಲ್ಲಾ ಸಂಭ್ರವನ್ನು ಕಿತ್ತುಕೊಂಡಿದೆ. ಸಲ್ಮಾನ್ ಸಿನಿಮಾ ಅಂದುಕೊಂಡ ದಿನಕ್ಕೆ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ.

  English summary
  Salman Khan opens up about kissing scene with Disha Patani in Radhe.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X