twitter
    For Quick Alerts
    ALLOW NOTIFICATIONS  
    For Daily Alerts

    ಹುಚ್ಚ ಸಿನಿಮಾ ರೀಮೇಕ್ ಮಾಡುವಾಗ ಹೀಗೆ ಹೇಳಿದ್ದರು ಸಲ್ಮಾನ್ ಖಾನ್

    |

    ಸಲ್ಮಾನ್ ಖಾನ್‌ ಗೆ ಮರುಜೀವ ಕೊಟ್ಟ ಸಿನಿಮಾ 'ತೇರೇ ನಾಮ್'. ಸಾಲು-ಸಾಲು ಸೋಲು ಕಂಡಿದ್ದ ಸಲ್ಮಾನ್ ಖಾನ್‌ ಮತ್ತೆ ಸ್ಟಾರ್ ಆಗಿ ಮಿಂಚಲು ಕಾರಣವಾದ ಸಿನಿಮಾ ಅದು.

    Recommended Video

    ಕುದುರೆ ಜೊತೆ ತಾನೂ ಹುಲ್ಲು ತಿಂದ ಸಲ್ಮಾನ್ | Salman Khan | With His Horse | Filmibeat kannada

    ಇದು ತಮಿಳಿನ 'ಸೇತು' ಸಿನಿಮಾದ ರೀಮೇಕ್, ಇದೇ ಸಿನಿಮಾ ಕನ್ನಡದಲ್ಲಿ 'ಹುಚ್ಚ' ಆಗಿ ಬಂದಿತ್ತು. ಕನ್ನಡದಲ್ಲಿ 'ಹುಚ್ಚ' ಸಿನಿಮಾ ಯಶಸ್ವಿ ಆದ ನಂತರ ಅದೇ ಪ್ರೇರಣೆಯಿಂದ ಬಾಲಿವುಡ್‌ನಲ್ಲಿ ಸಲ್ಮಾನ್ ನಾಯಕನಾಗಿ 'ತೇರೆ ನಾಮ್' ನಿರ್ಮಿಸಲಾಯಿತು. ಇದೇ ಕಾರಣಕ್ಕೆ 'ತೇರೆ ನಾಮ್' ಅನ್ನು 'ಹುಚ್ಚ' ರೀಮೇಕ್ ಎನ್ನಲಡ್ಡಿಯಿಲ್ಲ!

    ಸಲ್ಮಾನ್ ಜೊತೆ ನಟಿಸಲು ಭಾರೀ ಮೊತ್ತದ ಸಂಭಾವನೆಗೆ ಬೇಡಿಕೆ ಇಟ್ಟ ನಟಿ ಪೂಜಾಸಲ್ಮಾನ್ ಜೊತೆ ನಟಿಸಲು ಭಾರೀ ಮೊತ್ತದ ಸಂಭಾವನೆಗೆ ಬೇಡಿಕೆ ಇಟ್ಟ ನಟಿ ಪೂಜಾ

    ದಕ್ಷಿಣ ಭಾರತದಲ್ಲಿ ಮಿಂಚಿದ್ದ ನಟಿ ಭೂಮಿಕಾ ಚಾವ್ಲಾ 'ತೇರೆ ನಾಮ್' ಸಿನಿಮಾ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದರು. ಸಿನಿಮಾ ಏನೋ ಸೂಪರ್-ಡೂಪರ್ ಹಿಟ್ ಆಯಿತು. ಆದರೆ ಸಿನಿಮಾದ ಕತೆಯ ಬಗ್ಗೆ ಸಲ್ಮಾನ್ ಖಾನ್‌ ಗೆ ತೀವ್ರ ಆಕ್ಷೇಪ ಇತ್ತಂತೆ.

    ತೇರೆ ನಾಮ್ ಸಿನಿಮಾ ನಿರ್ದೇಶಕನ ಮಾತು

    ತೇರೆ ನಾಮ್ ಸಿನಿಮಾ ನಿರ್ದೇಶಕನ ಮಾತು

    ತೇರೆ ನಾಮ್ ಸಿನಿಮಾ ನಿರ್ದೇಶಿಸಿದ್ದ ನಿರ್ದೇಶಕ ಸತೀಶ್ ಕೌಶಿಕ್ ಈ ವಿಷಯದ ಬಗ್ಗೆ ಮಾತನಾಡಿದ್ದು, ಸಲ್ಮಾನ್ ಖಾನ್‌ ಗೆ ತೇರೆ ನಾಮ್ ಕತೆಯ ಬಗ್ಗೆ ತೀವ್ರ ಆಕ್ಷೇಪವಿತ್ತು, ಒಲ್ಲದ ಮನಸ್ಸಿನಿಂದಲೇ ಅವರು ಸಿನಿಮಾದಲ್ಲಿ ನಟಿಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

    ಸಿನಿಮಾದಲ್ಲಿ ನಾಯಕನ ಪಾತ್ರ ಹಿಂಸಾತ್ಮಕವಾಗಿತ್ತು

    ಸಿನಿಮಾದಲ್ಲಿ ನಾಯಕನ ಪಾತ್ರ ಹಿಂಸಾತ್ಮಕವಾಗಿತ್ತು

    ಸಿನಿಮಾದಲ್ಲಿ ನಾಯಕ ತನ್ನ ಪ್ರೀತಿಗಾಗಿ ನಾಯಕಿಯನ್ನು ಕಾಡಿಸುವುದು, ಅಪಹರಣ ಮಾಡುವುದು, ಸೈಕೋ ರೀತಿ ವರ್ತಿಸುವುದು, ಬೆದರಿಕೆ ಹಾಕುವುದು, ಹಿಂಸೆ ಮಾಡುವುದು ಮಾಡುತ್ತಾನೆ. ಬ್ರಾಹ್ಮಣ ಹುಡುಗಿಯಾದ ನಾಯಕಿ ಇವನ ನಾಯಕನನ್ನು ಪ್ರೀತಿಸುತ್ತಾಳಾದರೂ ನಾಯಕನ ಹಿಂಸಾತ್ಮಕ ವರ್ತನೆಯಿಂದ ಆಘಾತಕ್ಕೆ ಒಳಗಾಗುತ್ತಾಳೆ. ಇದರ ಬಗ್ಗೆ ಸಲ್ಮಾನ್ ಖಾನ್‌ ಗೆ ಆಕ್ಷೇಪವಿತ್ತಂತೆ.

    ಫ್ಲರ್ಟ್ ಮಾಡಿ ನಟಿ ಭಾಗ್ಯಶ್ರೀಗೆ ಕಿರಿಕಿರಿ ತಂದಿದ್ದ ಸಲ್ಮಾನ್ ಖಾನ್.!ಫ್ಲರ್ಟ್ ಮಾಡಿ ನಟಿ ಭಾಗ್ಯಶ್ರೀಗೆ ಕಿರಿಕಿರಿ ತಂದಿದ್ದ ಸಲ್ಮಾನ್ ಖಾನ್.!

    ಸಿನಿಮಾ ಹಿಟ್ ಆಗುತ್ತದೆ ಆದರೆ...: ಸಲ್ಮಾನ್ ಖಾನ್

    ಸಿನಿಮಾ ಹಿಟ್ ಆಗುತ್ತದೆ ಆದರೆ...: ಸಲ್ಮಾನ್ ಖಾನ್

    ''ಈ ಸಿನಿಮಾ ಖಂಡಿತ ಹಿಟ್ ಆಗುತ್ತದೆ ಜನ ಮೆಚ್ಚುತ್ತಾರೆ ಆದರೆ ನಾವು ಯುವಕರಿಗೆ ಕೆಟ್ಟ ಸಂದೇಶವನ್ನು ಈ ಸಿನಿಮಾದ ಮೂಲಕ ಕೊಟ್ಟಂತಾಗುತ್ತದೆ'' ಎಂದು ಸಲ್ಮಾನ್ ಖಾನ್ ಹೇಳಿದ್ದರಂತೆ. ಅರೆಮನಸ್ಸಿನಿಂದಲೇ ಕೆಲ ಸಿನಿಮಾದಲ್ಲಿ ಅವರು ನಟಿಸಿದ್ದರಂತೆ.

    ತಮ್ಮ ಸಿನಿಮಾ ನೀಡುವ ಸಂದೇಶದ ಬಗ್ಗೆ ಎಚ್ಚರಿಕೆ

    ತಮ್ಮ ಸಿನಿಮಾ ನೀಡುವ ಸಂದೇಶದ ಬಗ್ಗೆ ಎಚ್ಚರಿಕೆ

    ನಿರ್ದೇಶಕ ಸತೀಶ್ ಕೌಶಿಕ್ ಹೇಳಿರುವಂತೆ, ಸಲ್ಮಾನ್ ಖಾನ್ ತಮ್ಮ ಸಿನಿಮಾಗಳು ಕೊಡುವ ಸಂದೇಶಗಳ ಬಗ್ಗೆ ಅತೀವ ಎಚ್ಚರಿಕೆ ವಹಿಸುತ್ತಾರಂತೆ. ತಮ್ಮ ಹಾಗೂ ತಮ್ಮ ಪಾತ್ರದ ಮೂಲಕ ಕೆಟ್ಟ ಸಂದೇಶ ಸಮಾಜಕ್ಕೆ ತಲುಪಬಾರದು ಎಂಬುದನ್ನು ಅವರು ಪಾಲಿಸುತ್ತಾರಂತೆ.

    ನೆಗೆಟಿವ್ ಪಾತ್ರಗಳಿಗೆ ಗೆಲುವು ಸಿಗಬಾರದು

    ನೆಗೆಟಿವ್ ಪಾತ್ರಗಳಿಗೆ ಗೆಲುವು ಸಿಗಬಾರದು

    ನಿರ್ದೇಶಕ ಕೌಶಿಕ್ ಸಹ ಇದನ್ನು ಒಪ್ಪುತ್ತಾರೆ. ಚಿತ್ರದಲ್ಲಿ ನೆಗೆಟಿವ್ ಪಾತ್ರಗಳನ್ನು ತೋರಿಸುವುದರಲ್ಲಿ ತಪ್ಪಿಲ್ಲ, ಕತೆಗೆ ಒಮ್ಮೊಮ್ಮೆ ಅವಶ್ಯಕವಾಗಿರುತ್ತದೆ, ಆದರೆ ನೆಗೆಟಿವ್ ಪಾತ್ರಗಳು ಅಂತಿಮವಾಗಿ ಗೆಲ್ಲದಂತೆ ನೋಡಿಕೊಳ್ಳಬೇಕು, ಒಂದೊಮ್ಮೆ ನೆಗೆಟಿವ್ ಪಾತ್ರಗಳು ಸಿನಿಮಾದ ಅಂತ್ಯದಲ್ಲಿ ಗೆದ್ದುಬಿಟ್ಟರೆ ಅದು ಕೆಟ್ಟ ಸಂದೇಶದ ರವಾನೆ ಆದಂತಾಗುತ್ತದೆ.

    English summary
    Salman Khan said Tere Naam movie will send bad message to youngsters. He had issues with the story.
    Wednesday, April 15, 2020, 17:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X