ಸಲ್ಮಾನ್ ಖಾನ್ ಮನೆಯಲ್ಲಿ ಗಣೇಶ ಹಬ್ಬ: ವಿಘ್ನ ನಿವಾರಕನಿಗೆ ಆರತಿ ಬೆಳಗಿ ಸಲ್ಲು ಭಜನೆ

ಪ್ರತಿವರ್ಷ ಬಾಲಿವುಡ್ ಸೆಲೆಬ್ರೆಟಿಗಳು ಬಹಳ ವಿಜೃಂಭಣೆಯಿಂದ ಗಣೇಶ ಹಬ್ಬವನ್ನು ಆಚರಿಸುತ್ತಾರೆ. ಅದರಲ್ಲೂ ಸಲ್ಮಾನ್ ಖಾನ್ ತಮ್ಮ ಸಹೋದರಿ ಅರ್ಪಿತಾ ಖಾನ್ ಮನೆಯಲ್ಲಿ ಗಣೇಶನನ್ನು ಕೂರಿಸಿ ಪೂಜಿಸಿ ಸಂಭ್ರಮಿಸುತ್ತಾರೆ. ನಿನ್ನೆಯಷ್ಟೆ ಅರ್ಪಿತಾ ತಮ್ಮ ನಿವಾಸಕ್ಕೆ ಗಣೇಶ ಮೂರ್ತಿಯನ್ನು ಸ್ವಾಗತಿಸಿದ್ದರು. ಇದೀಗ ಸಲ್ಲು ಗಣೇಶನಿಗೆ ಪೂಜೆ ಮಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.

ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಹೋದರಿ ಅರ್ಪಿತಾ ಖಾನ್ ನಿವಾಸಕ್ಕೆ ಸೊಹೈಲ್ ಖಾನ್ ಭೇಟಿ ನೀಡಿದ್ದರು. ಇನ್ನು ಮಕ್ಕಳ ಜೊತೆ ನಟ ರಿತೇಶ್ ದೇಶ್‌ಮುಖ್ ಹಾಗೂ ಜೆನಿಲಿಯಾ ದಂಪತಿ ಕೂಡ ಅರ್ಪಿತಾ ಖಾನ್ ಮನೆಯ ಗಣೇಶ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಸಲ್ಮಾನ್ ಖಾನ್ ಗಣೇಶನಿಗೆ ಆರತಿ ಬೆಳಗಿ ಗಣೇಶನ ಭಜನೆ ಮಾಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಕತ್ರೀನಾ ಕೈಫ್ ಪತಿ ವಿಕ್ಕಿ ಕೌಶಲ್ ಜೊತೆಗೆ ಅರ್ಪಿತಾ ಖಾನ್ ಮನೆಯ ಗಣೇಶ ಹಬ್ಬಕ್ಕೆ ಆಗಮಿಸಿದ್ದರು. ವಿಡಿಯೋದಲ್ಲಿ ಅರ್ಪಿತಾ ಖಾನ್ ಪತಿ ಆಯುಷ್ ಶರ್ಮಾ ಜೊತೆ ಸೇರಿ ಆರತಿ ಬೆಳಗುವುದನ್ನು ನೋಡಬಹುದು. ರಿತೇಶ್ ದೇಶ್‌ಮುಖ್ ಆರತಿ ಬೆಳಗಿ ಗಣಪನ ಕೃಪೆಗೆ ಪಾತ್ರರಾಗಿದ್ದಾರೆ. ಸಲ್ಮಾನ್ ಖಾನ್ ಫ್ಯಾಮಿಲಿ ಸದಸ್ಯರೆಲ್ಲರೂ ಸೇರಿ ಶ್ರದ್ಧೆಭಕ್ತಿಯಿಂದ ಗಣೇಶನನ್ನು ಆರಾಧಿಸುತ್ತಿದ್ದಾರೆ. ಸದ್ಯ ಸಲ್ಲು 'ಟೈಗರ್- 3', 'ಕಭಿ ಈದ್ ಕಭಿ ದಿವಾಳಿ', 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶಾರುಖ್ ಜೊತೆ 'ಪಠಾಣ್' ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ.

Salman Khan Performs Ganesh Aarti At Sister Arpita Khan House Video Goes Viral

ಶಾರುಖ್ ಖಾನ್ ಕೂಡ ಮುಂಬೈನ ಮನ್ನತ್ ನಿವಾಸದಲ್ಲಿ ಗಣೇಶನನ್ನು ಕೂರಿಸಿ ಪೂಜಿಸಿದ್ದಾರೆ. ಫೋಟೊ ಸಮೇತ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಕಿಂಗ್ ಖಾನ್ ಹಂಚಿಕೊಂಡಿದ್ದಾರೆ. 'ನಾನು ನನ್ನ ಚಿಕ್ಕ ಮಗ ಸೇರಿ ಮನೆಗೆ ಗಣಪತಿಯನ್ನು ಬರಮಾಡಿಕೊಂಡೆವು. ನಂತರ ಸವಿದ ಮೋದಕ ಬಹಳ ರುಚಿಕರವಾಗಿತ್ತು. ಪರಿಶ್ರಮ ಮತ್ತು ದೇವರ ಮೇಲಿನ ನಂಬಿಕೆಯಿಂದ ನಾವು ನಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು. ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು' ಎಂದು ಶಾರುಖ್ ಬರೆದುಕೊಂಡಿದ್ದಾರೆ. ಕಿಂಗ್‌ ಖಾನ್ ಪೋಸ್ಟ್‌ಗೆ ಲಕ್ಷ ಲಕ್ಷ ಲೈಕ್ಸ್ ಸಿಕ್ಕಿದೆ. ಕಿಂಗ್ ಖಾನ್ 'ಜವಾನ್', 'ಡಂಕಿ' ಹಾಗೂ 'ಪಠಾಣ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

Salman Khan Performs Ganesh Aarti At Sister Arpita Khan House Video Goes Viral

ಸೋನಾಲಿ ಬೇಂದ್ರೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್, ಕಾರ್ತಿಕ್ ಆರ್ಯನ್, ಕಾಜೋಲ್, ಮಾಧುರಿ ದೀಕ್ಷಿತ್, ಶಿಲ್ಪಾ ಶೆಟ್ಟಿ, ನಿರ್ಮಾಪಕಿ ಏಕ್ತಾ ಕಪೂರ್, ಸೇರಿದಂತೆ ಸಾಕಷ್ಟು ಬಾಲಿವುಡ್ ಸೆಲೆಬ್ರೆಟಿಗಳು ಗಣೇಶನನ್ನು ಕೂರಿಸಿ ಪೂಜಿಸಿ ಹಬ್ಬ ಆಚರಿಸಿದ್ದಾರೆ.

More from Filmibeat

English summary
Salman Khan Performs Ganesh Aarti At Sister Arpita Khan House Video Goes Viral. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X