For Quick Alerts
  ALLOW NOTIFICATIONS  
  For Daily Alerts

  ಕೊರಿಯನ್ ಚಿತ್ರ ರೀಮೇಕ್ ಮಾಡ್ತಾರಂತೆ ಸಲ್ಮಾನ್ ಖಾನ್

  |
  Pailwaan : ಪೈಲ್ವಾನ್ ಬಗ್ಗೆ ಸಲ್ಮಾನ್ ಖಾನ್ ಮೆಚ್ಚುಗೆಯ ಮಾತು | FILMIBEAT KANNADA

  ಸಲ್ಮಾನ್ ಖಾನ್ ನಟಿಸಿರುವ ದಬಾಂಗ್-3 ಡಿಸೆಂಬರ್ 20 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಬಳಿಕ ಸಲ್ಮಾನ್ ಖಾನ್ ಸಂಜಯ್ ಲೀಲಾ ಬನ್ಸಾಲಿ ಜೊತೆ ಸಿನಿಮಾ ಮಾಡಬೇಕಿತ್ತು. ಆದರೆ ಈ ಸಿನಿಮಾ ಸದ್ಯಕ್ಕಿಲ್ಲ ಎಂದು ಸ್ವತಃ ಸಲ್ಮಾನ್ ಖಾನ್ ಸ್ಪಷ್ಟಪಡಿಸಿದ್ದರು.

  ಹಾಗಿದ್ರೆ, ಸಲ್ಮಾನ್ ಖಾನ್ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ದಬಾಂಗ್-3 ಬಳಿಕ ಕೊರಿಯನ್ ಭಾಷೆಯ ವೆಟರನ್ ಚಿತ್ರವನ್ನ ರೀಮೇಕ್ ಮಾಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

  ಭಾವನೆ, ಆಕ್ಷನ್ ಮತ್ತು ಹಾಸ್ಯದ ಮಿಶ್ರಣ ಪೈಲ್ವಾನ್: ಸಲ್ಮಾನ್ ಖಾನ್ಭಾವನೆ, ಆಕ್ಷನ್ ಮತ್ತು ಹಾಸ್ಯದ ಮಿಶ್ರಣ ಪೈಲ್ವಾನ್: ಸಲ್ಮಾನ್ ಖಾನ್

  ಸಂಜಯ್ ಲೀಲಾ ಬನ್ಸಾಲಿ ಸಿನಿಮಾ ರದ್ದಾದ ಕಾರಣ ಕಿಕ್ ಸೀಕ್ವೆಲ್ ಅಥವಾ ವಾಂಟೆಡ್ 2 ಹೆಸರಿನಲ್ಲಿ ಸಿನಿಮಾ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಈ ಸುದ್ದಿ ಈಗ ಸುಳ್ಳಾಗುವ ಸೂಚನೆ ಸಿಕ್ಕಿದೆ. ಯಾಕಂದ್ರೆ, ಕೊರಿಯನ್ ಚಿತ್ರ ರೀಮೇಕ್ ಮಾಡಲು ಸಲ್ಲು ಭಾಯ್ ಮುಂದಾಗಿದ್ದಾರಂತೆ.

  'ದಬಾಂಗ್' ಕನ್ನಡ ವರ್ಷನ್ಗೆ ಸಲ್ಮಾನ್ ಖಾನ್ ಡಬ್ ಮಾಡಿದ್ದಾರಾ?'ದಬಾಂಗ್' ಕನ್ನಡ ವರ್ಷನ್ಗೆ ಸಲ್ಮಾನ್ ಖಾನ್ ಡಬ್ ಮಾಡಿದ್ದಾರಾ?

  ವಿಶೇಷ ಅಂದ್ರೆ ಈ ಚಿತ್ರವನ್ನ ಪ್ರಭುದೇವ ನಿರ್ದೇಶಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ದಬಾಂಗ್ ಮುಗಿದ ತಕ್ಷಣ ಈ ಚಿತ್ರವನ್ನ ಕೈಗೆತ್ತಿಕೊಳ್ಳಲಿದ್ದು 2020ರ ಈದ್ ಹಬ್ಬಕ್ಕೆ ಈ ಸಿನಿಮಾವನ್ನ ಉಡುಗೊರೆಯನ್ನಾಗಿ ನೀಡಲು ಸಜ್ಜಾಗಿದ್ದಾರೆ.

  ಸಲ್ಮಾನ್ ಖಾನ್ ಅಭಿನಯದ 'ಭಾರತ್' ಸಿನಿಮಾ ಕೂಡ ಕೊರಿಯನ್ ಚಿತ್ರ ರೀಮೇಕ್. ಸೌತ್ ಕೊರಿಯನ್ ಮೂಲದ 'ಒಡೆ ಟು ಮೈ ಫಾದರ್' ಚಿತ್ರದ ರೀಮೇಕ್ ಆಗಿದೆ. ಕತ್ರಿಕಾ ಕೈಫ್, ಟಬು, ಸುನೀಲ್ ಗ್ರೋವರ್, ದಿಶಾ ಪಟಾನಿ, ಜಾಕಿ ಶ್ರಾಫ್ ಭಾರತ್ ಚಿತ್ರದಲ್ಲಿ ನಟಿಸಿದ್ದರು.

  English summary
  After dabangg 3, salman khan and prabhudeva planning to do korean movie veteran remake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X